Mandya: ಮಂಡ್ಯ: ಮಂಡ್ಯದಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯ ಬಜೆಟ್ ಬಗ್ಗೆ ಮಾತನಾಡಿದ್ದಾರೆ.
ಮಂಡ್ಯದ ವಿಸಿ ಫಾರ್ಮ್‌ನಲ್ಲಿ ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಸಿದ್ರಾಮಯ್ಯ ಮಂಡಿಸಿದ್ದು ದಾಖಲೆ ಬಜೆಟ್ ನಿಜ. ಆದರೆ ಆದರ ಎಫೆಕ್ಟ್ ಮುಂದಿನ ದಿನಗಳಲ್ಲಿ ಹೇಗೆ ಪರಿಣಾಮ ಬೀರುತ್ತೋ ಕಾದು ನೋಡಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.
ಈಗಾಗಲೇ ಬಹಳ ಅರ್ಥಿಕ ಸಲಹೆಗಾರು ಇದರ ದುಷ್ಪರಿಣಾಮದ ಬಗ್ಗೆ ಎಚ್ಚರಿಸಿದ್ದಾರೆ. ಈಗ ಅವರು ತೋರಿಸಿರುವ ಅಂಕಿ ಆಂಶಗಳು ನಾವು ಅಭಿವೃದ್ಧಿ ಪಥದಲ್ಲಿದ್ದೀವಿ ಎನ್ನುತ್ತಾರೆ. ಆದರೆ ರಿಸರ್ಬ್ ಬ್ಯಾಂಕ್ ಕೊಟ್ಟಿರೋ ವರದಿ ಪ್ರಕಾರ ಜಿಡಿಪಿ ಬೆಳವಣಿಗೆ 25 % ಒಳಗಿರಬೇಕು ಆದರೆ ಈಗ ಅದು ಮೀರಿದೆ. ಆದರೆ ಇವರು ಕೊಟ್ಟಿರೋ ಅಂಕಿ ಅಂಶದಲ್ಲಿ ಮರೆ ಮಾಚಿರೋದು ಅದರ ಎಫೆಕ್ಟ್ ಮುಂದಿನ ದಿನದಲ್ಲಿ ಕಾಣುತ್ತೆ.
ಕಳೆದ ವರ್ಷ ಬಂಡವಾಳಕ್ಕೆ ಇಟ್ಟಿದ್ದ 73 ಸಾವಿರ ಕೋಟಿ ಇಟ್ಟಿದ್ರು. ಈ ಮಾರ್ಚ್ ಅಂತ್ಯದ ವೇಳೆ ಎಷ್ಟು ಖರ್ಚು ಮಾಡ್ತಿರೇ ಅದನ್ನು ತೆಗೆಸಿ. ಮಾಹಿತಿ ಇರೋವಂತದ್ದು 60% ಕೂಡ ಅವ್ರು ಖರ್ಚು ಮಾಡಿಲ್ಲ. ಇವ್ರು ಗ್ಯಾರಂಟಿಗೆ 78 ಸಾವಿರ ಕೋಟಿ ಇಟ್ಟಿದ್ದಾರೆ. ಇದಕ್ಕೆಲ್ಲ ದುಡ್ಡು ಎಲ್ಲಿಂದ ತರ್ತಾರೆ ಅನ್ನೋದು ಗೊತ್ತಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನು ಡಿ.ಕೆ.ಶಿವಕುಮಾರ್ ಸಿಎಂ ಆಗಲು ಕುಮಾರಸ್ವಾಮಿ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಶಾಸಕ ಕದಲೂರು ಉದಯ್ ಆರೋಪಿಸಿದ್ದರು. ಈ ಆರೋಪಕ್ಕೆ ಇಂದು ಮಂಡ್ಯದಲ್ಲಿ ಪ್ರತಿಕ್ರಿಯಿಸಿರುವ ಹೆಚ್ಡಿಕೆ,
ಡಿ.ಕೆ.ಶಿವಕುಮಾರ್ ಸಿಎಂ ಆಗೋದನ್ನ ತಡೆಯೋಕೆ ನಾನ್ಯಾರು..? ಕಳೆದ ಒಂದು ವಾರದಿಂದ ಸಿಎಂಗೆ ಸ್ಥಾನ ಬಿಟ್ಕೊಡಿ ಅಂತ ನಾನೆ ಹೇಳ್ತಿದಿನಿ. ಡಿಕೆ ಸಿಎಂ ಆಗೋದನ್ನ ನಾನ್ ಹೆಂಗ್ ತಡ್ಯೋಕ್ ಆಗತ್ತೆ..?
ಉದಯ್ ಅವರನ್ನ ಸಿಎಂ ಜೊತೆ ಮಾತಾಡೋಕ್ ಹೇಳಿ. ಕಳೆದ ಒಂದು ವಾರದಿಂದ ಸಿಎಂಗೆ ಬಿಟ್ಕೊಡಪ್ಪ ಅಂತನೇ ಹೇಳ್ತಿದ್ದೀನಿ ಎಂದು ಹೆಚ್ಡಿಕೆ ವ್ಯಂಗ್ಯವಾಗಿ ಟಾಂಗ್ ನೀಡಿದ್ದಾರೆ.
ಕುಮಾರಸ್ವಾಮಿ ಗ್ರಾಮೀಣ ಭಾಗದ ಜನ್ರ ಕಷ್ಟ ಕೇಳ್ತಿಲ್ಲ ಎಂಬ ಕದಲೂರು ಉದಯ್ ಹೇಳಿಕೆ ವಿಚಾರಕ್ಕೆ ಮತ್ತೆ ವ್ಯಂಗ್ಯ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ಹಾ.. ನಾನು ಬರೀ ಫೈವ್ ಸ್ಟಾರಲ್ಲೆ ಇದ್ದೀನಿ. ಶ್ರೀಲಂಕಾದಲ್ಲಿ ಹೋಗಿ ತಲೆ ಮರೆಸಿಕೊಂಡಿದ್ದೀನಿ. ಜಾಮೀನು ಪಡೆಯುವವರೆಗೂ ಶ್ರೀಲಂಕಾದಲ್ಲಿ ಕುಂತಿದ್ದೀನಿ ಎಂದಿದ್ದಾರೆ.




