Friday, August 29, 2025

Latest Posts

Hubli News: ಗಣೇಶೋತ್ಸವಕ್ಕೆ ಹುಬ್ಬಳ್ಳಿಯಲ್ಲಿ ರೂಟ್ ಮಾರ್ಚ್ ಮಾಡಿದ ಪೊಲೀಸರು

- Advertisement -

Hubli News: ಹುಬ್ಬಳ್ಳಿ: ಇಂದಿನಿಂದ ಗಣಪತಿ ಹಬ್ಬ ಆರಂಭವಾಗಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿಭಿನ್ನ ರೀತಿಯಲ್ಲಿ ವಿಶೇಷವಾಗಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡುತ್ತಾರೆ. ಆದ ಕಾರಣ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನ್‌ರೇಟ್ ವತಿಯಿಂದ, ಹುಬ್ಬಳ್ಳಿಯಲ್ಲಿ ಪೊಲೀಸರು ರೂಟ್ ಮಾರ್ಚ್ ಮಾಡಿದರು.

ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರ ನೇತೃತ್ವದಲ್ಲಿ, ಹುಬ್ಬಳ್ಳಿಯ ಎಲ್ಲ ಪೊಲೀಸರು ರೂಟ್ ಮಾರ್ಚ್‌ದಲ್ಲಿ ಭಾಗವಹಸಿದ್ದು, ಎಲ್ಲೆ ಪೆಂಡಾಲ್ ಗಣಪತಿ ಸ್ಥಳಕ್ಕೆ ಭೇಟಿ ನೀಡಿದರು.ಅಷ್ಟೇ ಅಲ್ದೆ ಗಲ್ಲಿ ಗಲ್ಲಿಗಳಲ್ಲಿ ಪೊಲೀಸರು ರೂಟ್ ಮಾರ್ಚ್ ಮಾಡಿ, ಸಾರ್ವಜನಿಕರಲ್ಲಿ ಆತ್ಮದೈರ್ಯ ತುಂಬಿದರು. ಅಷ್ಟೇ ಅಲ್ದೆ ಪುಡಿರೌಡಿಗಳಿಗೆ ಬಾಲ ಬಿಚ್ಚದಂತೆ ಖಡಕ್ ವಾರ್ನ್ ಮಾಡಿದರು.

ಇನ್ನು ಹುಬ್ಬಳ್ಳಿಯಲ್ಲಿ ಯಾವುದೇ ರೀತಿಯಲ್ಲಿ ದುರ್ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಜನಸೇವೆಗೆಂದೆ ನಾವಿರೋದು ಎಲ್ಲರೂ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಅವರು ಎಲ್ಲ ಪೊಲೀಸರಿಗೆ ಕಿವಿ ಮಾತು ಹೇಳಿದರು.

- Advertisement -

Latest Posts

Don't Miss