Hubli News: ಹುಬ್ಬಳ್ಳಿ: ಬೆಂಗಳೂರಿನ ರಾಮನಗರದಲ್ಲಿ ಪ್ರತಿಷ್ಟಾಪನೆಗೊಳ್ಳಲಿರುವ ಗಣೇಶನ ಮೂರ್ತಿ ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ರೂಪಗೊಂಡಿದ್ದು, ಪ್ರತಿಷ್ಟಾಪನೆಗೆ. ಮೈತುಂಬ ಅಮೇರಿಕನ ಡೈಮಂಡ್ ತುಂಬಿಕೊಂಡು ಈ ವರ್ಷದ ವಿಶೇಷ ಆಚರಣೆಗೆ ಸಾಕ್ಷಿಯಾಗಿದೆ.
ಹೌದು ಗೌರಿ ಗಣೇಶ ಹಬ್ಬ ಇಡೀ ನಾಡಿನಾಧ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದ್ದು, ಇದರಿಂದ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ.ಬೆಂಗಳೂರು ದಕ್ಷಿಣ(ರಾಮನಗರ) ಐಜೂರ ಮಲ್ಲೇಶ್ವರ ಬಡಾವಣೆ ನೇತಾಜಿ ಪಾಪ್ಯುಲರ್ ಸ್ಕೂಲ್ ಬಳಿ ಪ್ರತಿ ವರ್ಷ ವಿಶೇಷವಾಗಿ ಗಣೇಶೋತ್ಸವ ಆಚರಿಸುತ್ತಾ ಬರುತ್ತಿದ್ದು, ಈ ವರ್ಷ ಇನ್ನೂ ವಿಜೃಂಭಣೆಯಿಂದ ಆಚರಣೆ ಮಾಡಬೇಕೆನ್ನುವ ಹುಮ್ಮಸ್ಸಿನಿಂದ ಮಂಡಳಿ ಪದಾಧಿಕಾರಿಗಳ ಚಿಂತೆನೆ ಮಾಡಿ, ಈ ಬಾರಿ ಡೈಮಂಡ್ ಗಣೇಶ ಪ್ರತಿಷ್ಠಾಪನೆ ಮಾಡೋಣ ಎಂದು ನಿರ್ಧರಿಸಿ ರವಿವಾರ ಹುಬ್ಬಳ್ಳಿಯಿಂದ ಡೈಮಂಡ ಗಣೇಶ ಮೂರ್ತಿಯನ್ನು ರಾಮನಗರಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ಬೆಂಗಳೂರು ದಕ್ಷಿಣ(ರಾಮನಗರ) ಐಜೂರ ಮಲ್ಲೇಶ್ವರ ಬಡಾವಣೆ ನೇತಾಜಿ ಪಾಪ್ಯುಲರ್ ಸ್ಕೂಲ್ ಬಳಿ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿಯಿಂದ ಈ ವರ್ಷ 5.5 ಲಕ್ಷ ರೂ.ಗಳಲ್ಲಿ ಅಮೇರಿಕನ್ ಡೈಮಂಡ್ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಣೆ ಮಾಡಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಮೂರು ಅಡಿ ಗಣೇಶ ಮೂರ್ತಿಗೆ ಸುಮಾರು 5.5 ಲಕ್ಷ ರೂ.ಗಳ 4ಲಕ್ಷ ಕ್ಕೂ ಅಧಿಕ ಅಮೇರಿಕನ್ ಡೈಮಂಡ್ ಲೇಪನ ಮಾಡಲಾಗಿದೆ. ಅದು ಕೂಡಾ ವಿವಿಧ ಬಗೆಯ ಅಂದರೆ ನವರತ್ನ ಡೈಮಂಡ ಅಳವಡಿಸಲಾಗಿದೆ.
ಹುಬ್ಬಳ್ಳಿಯ ಮೂರ್ತಿ ಕಲಾವಿದ ಮಹೇಶ ಮುರಗೋಡ ಅವರು ಈ ಗಣೇಶ ಮೂರ್ತಿ ಸಿದ್ದಪಡಿಸಿದ್ದು, ಅದಕ್ಕಾಗಿ ಸುಮಾರು ಒಂದು ತಿಂಗಳ ಕಾಲ ಶ್ರಮಿಸಿದ್ದಾರೆ. ಈ ಗಣೇಶ ಮೂರ್ತಿ 50 ಕೆಜಿ ತೂಕ ಹೊಂದಿದೆ. ಕಳೆದ 11 ವರ್ಷಗಳಿಂದ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿಯಿಂದ 9 ದಿನಗಳ ಗಣೇಶೋತ್ಸವ ಆಚರಿಸುತ್ತಾ ಬಂದಿದ್ದು, ಈ ವರ್ಷವೂ ವಿಶೇಷವಾಗಿ ಆಚರಣೆ ಮಾಡಲು ಮುಂದಾಗಿದ್ದಾರೆ. ರಾಮನಗರ ತಾಲೂಕಿನನಲ್ಲಿ ಮೊದಲ ಬಾರಿಗೆ ಡೈಮಂಡ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ಹುಬ್ಬಳ್ಳಿ ಕಲಾವಿದ ಮಹೇಶ ಮುರಗೋಡ ಅವರು ಕಳೆದ 12-13 ವರ್ಷಗಳಿಂದ ಪರಿಚಯವಿದ್ದು ಈ ವರ್ಷ ಅವರ ಬಳಿ ಡೈಮಂಡ ಗಣೇಶ ಮೂರ್ತಿ ಮಾಡಿಸಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ನಿರ್ಧರಿಸಿ ಗಣಪತಿ ಬುಕ್ಕಿಂಗ್ ಮಾಡಲಾಗಿತ್ತು.
ಅದಲ್ಲದೇ ಗಣಪತಿ ಪ್ರತಿಷ್ಟಾಪನೆಗೆ ವಿಶೇಷ ಮಂಟಪ ನಿರ್ಮಿಸಲಾಗುತ್ತಿದ್ದು, ಕೊನೆಗೆ ಸಾವಿರಾರು ಜನರ ಸಮ್ಮುಖದಲ್ಲಿ ಅಂಬಾರಿ ಉತ್ಸವದ ಮೂಲಕ ಗಣೇಶ ವಿಸರ್ಜಣೆಗೆ ವ್ಯವಸ್ಥೆ ಮಾಡಲಾಗಿದೆ.
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ