Sandalwood News: ಹಲವು ದಿನಗಳಿಂದ ರಾಮಾಚಾರಿ ಸಿರಿಯಲ್‌ನಲ್ಲಿ ವಿಲನ್ ಪಾತ್ರ ನಿರ್ವಹಿಸುತ್ತಿದ್ದ ಐಶ್ವರ್ಯ ಸ್ಕ್ರೀನ್ ಮೇಲೆ ಯಾಕೆ ಕಾಣಿಸ್ತಿಲ್ಲ ಅನ್ನೋದು ಹಲವರ ಪ್ರಶ್ನೆಯಾಗಿತ್ತು.
ಅದಕ್ಕೆ ಇದೀಗ ಉತ್ತಮ ಸಿಕ್ಕಿದೆ. ನಟಿ ಐಶ್ವರ್ಯ ತಾಯಿಯಾಗ್ತಿದ್ದಾರೆ. ಗಣೇಶ ಚತುರ್ಥಿಯ ಶುಭದಿನದಂದು ಐಶ್ವರ್ಯ ಮತ್ತು ಅವರ ಪತಿ ವಿನಯ್ ಅವರು ಚಿಕ್ಕ ಗಣೇಶನನ್ನು ಹಿಡಿದು, ಪೋಸ್ ನೀಡಿ, ಈ ಗುಡ್ ನ್ಯೂಸ್ ಹಂಚಿಕ“ಂಡಿದ್ದಾರೆ.
ಈ ಬಗ್ಗೆ ಬರೆದಿರುವ ಅವರು, ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಸುದಿನದಂದು ನನ್ನ ಸಣ್ಣ ಸಿಕ್ರೇಟ್ ಹಂಚಿಕ“ಳ್ಳುವ ಸಮಯ. ನಾವು ಅಪ್ಪ ಅಮ್ಮನಾಗುತ್ತಿದ್ದೇವೆ ಎನ್ನು ಶುಭಸುದ್ದಿ ಹಂಚಿಕ“ಳ್ಳಲು ಖುಷಿಯಾಗುತ್ತಿದೆ. ದೇವರು ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನದನ್ನೇ ನೀಡಿದ್ದಾನೆ. ಇದೀಗ ನಮ್ಮ ಕುಟುಂಬ ಬೆಳೆಯುತ್ತಿದೆ. ಹೀಗಾಗಿ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸದಾ ನಮ್ಮ ಮೇಲಿರಲಿ. ದೃಷ್ಟಿ ಬೀಳದಿರಲಿ ಎಂದು ಬರೆದುಕ“ಂಡಿದ್ದಾರೆ.
ವಿನಯ್ ಮತ್ತು ಐಶ್ವರ್ಯ ಮೂಲತಃ ಉತ್ತರಕರ್ನಾಟಕದವರು. ಇಬ್ಬರು ಪ್ರೀತಿಸಿ, ವಿವಾಹವಾಗಿದ್ದಾರೆ. ಇವರಿಬ್ಬರು ಸಿರಿಯಲ್‌ನಲ್ಲಿ ನಟಿಸಿರುವುದಲ್ಲದೇ, ರಾಜಾ-ರಾಣಿ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ದರು.