Thursday, August 28, 2025

Latest Posts

ನಟಿ ಅನುಶ್ರೀ, ರೋಷನ್‌ ವಿವಾಹೋತ್ಸವ

- Advertisement -

ಅಂತೂ ಇಂತೂ ಮಾತಿನ ಮಲ್ಲಿ, ಆ್ಯಂಕರ್ ಅನುಶ್ರೀ, ಕಲ್ಯಾಣೋತ್ಸವ ನೆರವೇರಿದೆ. ಚಿತ್ರರಂಗದ ಗಣ್ಯರು, ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರ ಸಮ್ಮುಖದಲ್ಲಿ, ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

37 ವರ್ಷದ ಅನುಶ್ರೀ, ಕೊಡಗಿನ ಕುವರ ರೋಷನ್‌ ಜೊತೆ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಕಗ್ಗಲಿಪುರದ ರೆಸಾರ್ಟ್‌ವೊಂದ್ರಲ್ಲಿ, ಅದ್ಧೂರಿಯಾಗಿ ವಿವಾಹ ಮಹೋತ್ಸವ ಜರುಗಿದೆ. ಕೇಸರಿ, ಕೆಂಪು, ಗೋಲ್ಡನ್‌ ಕಲರ್‌ ಕಾಂಬಿನೇಷನ್‌ ರೇಷ್ಮೆ ಸೀರೆಯುಟ್ಟು ಅನುಶ್ರೀ ಕಂಗೊಳಿಸಿದ್ರೆ, ರೋಷನ್‌ ಗೋಲ್ಡ್‌ ಕಲರ್‌ ಸಾಂಪ್ರದಾಯಕ ಉಡುಪಿನಲ್ಲಿ ಮಿಂಚಿದ್ರು.

ಹಾರ ಬದಲಾಯಿಸಿಕೊಳ್ಳುವಾಗ ಅನು-ರೋಷನ್‌ ತರಲೆ, ಎಲ್ಲರನ್ನು ನಗೆಗಡಲಲ್ಲಿ ತೇಲಿಸಿತ್ತು. ಪರಸ್ಪರ ಹಾರ ಬದಲಾಯಿಸಿಕೊಂಡ ಬಳಿಕ ಅನುಶ್ರೀ ಹಣೆಗೆ ರೋಷನ್‌ ಮುತ್ತುಕೊಟ್ರು. ಈ ವೇಳೆ ರೋಷನ್‌ ತಬ್ಬಿಕೊಂಡು ಅನುಶ್ರೀ, ಬೆನ್ನು ತಟ್ಟುತ್ತಾ ಸಂಭ್ರಮಿಸಿದ್ರು.

ಸದಾ ಕಾಲ ಎಲ್ಲರನ್ನು ನಗಿಸುತ್ತಿದ್ದ ಹಸನ್ಮುಖಿ ಅನುಶ್ರೀ, ತಾಳಿ ಕಟ್ಟಿಸಿಕೊಳ್ಳುವಾಗ ಭಾವುಕರಾಗಿದ್ದಾರೆ. ತಾಳಿ ಕಟ್ಟಲು ರೋಷನ್‌ ಮುಂದಾಗುತ್ತಿದ್ದಂತೆ, ಅನುಶ್ರೀ ಕಣ್ಣು ತುಂಬಿದ್ದವು. ತಾಳಿ ಕಟ್ಟಿಸಿಕೊಂಡ ಬಳಿಕ ಅನುಶ್ರೀ, ಸ್ವಲ್ಪ ಹೊತ್ತು ಕಣ್ಣೀರಾಕಿದ್ದಾರೆ. ಈ ವೇಳೆ ಕೆನ್ನೆಗೆ ಮುತ್ತಿಟ್ಟು ಪತಿ ರೋಷನ್‌, ಸಮಾಧಾನ ಮಾಡಿದ್ರು.

ಅಂತೂ ಇಂತೂ ನಟಿ ನಿರೂಪಕಿ ಅನುಶ್ರೀ ಕಲ್ಯಾಣ ನೆರವೇರಿದೆ. ಬಹುಕಾಲದ ಗೆಳೆಯ, ಪ್ರೇಮಿ ರೋಷನ್‌ ಜೊತೆ ಸಪ್ತಪದಿ ತುಳಿದಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ, ಅನುಶ್ರೀ ಮದುವೆಯಲ್ಲಿ ನಟ-ನಿರ್ದೇಶಕ ರಾಜ್‌ ಬಿ. ಓಡಾಟ ಭರ್ಜರಿಯಾಗಿತ್ತು. ವೈಟ್‌ ಅಂಡ್‌ ವೈಟ್‌ ಶರ್ಟ್‌, ಪಂಚೆ, ಅದರ ಮೇಲೆ ಕೆಂಪು ಬಣ್ಣದ ಶಾಲು ಹಾಕಿಕೊಂಡು, ರಾಜ್‌ ಬಿ ಶೆಟ್ಟಿ ಎಲ್ಲರ ಗಮನ ಸೆಳೆದಿದ್ರು.

ಅನುಶ್ರೀ-ರೋಷನ್‌ ಮದುವೆಯಲ್ಲಿ ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಸಾಕ್ಷಿಯಾಗಿದ್ರು. ಶಿವರಾಜ್‌ಕುಮಾರ್‌, ವಿಜಯ್‌ ರಾಘವೇಂದ್ರ, ತರುಣ್‌ ಸುದೀರ್‌ – ಸೋನಾಲ್‌, ಶ್ವೇತ ಚಂಗಪ್ಪ, ಚೈತ್ರಾ ಆಚಾರ್‌ ಸೇರಿ ಹಲವರು ಭಾಗಿಯಾಗಿದ್ರು.

- Advertisement -

Latest Posts

Don't Miss