Tuesday, October 14, 2025

Latest Posts

ಗೃಹಲಕ್ಷ್ಮೀಗಾಗಿ ಸರ್ಕಾರದಿಂದ ಕೋಟಿ ಕೋಟಿ ಖರ್ಚು!!

- Advertisement -

ರಾಜ್ಯ ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ, ಗೃಹಲಕ್ಷ್ಮೀ ಯೋಜನೆ ಪ್ರಮುಖವಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಮಾತುಕೊಟ್ಟಂತೆ, ಮನೆಯ ಒಡತಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಣ ನೀಡಲಾಗ್ತಿದೆ.

ಗ್ಯಾರಂಟಿ ಯೋಜನೆಯು ಗೃಹಿಣಿಯರ ಮನ ಗೆದ್ದಿದ್ದು, 2023ರಿಂದ ಇಲ್ಲಿಯವರೆಗೆ 20 ಕಂತುಗಳಲ್ಲಿ ಹಣ ನೀಡಲಾಗಿದೆ. ಇಲ್ಲಿಯವರೆಗೆ 47 ಸಾವಿರದ 487.90 ಕೋಟಿ ವೆಚ್ಚ ಭರಿಸಲಾಗಿದೆ.

ಒಟ್ಟು 1.24 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳು ಇದ್ದಾರೆ. ಇದುವರೆಗೆ 1.06 ಕೋಟಿ ಫಲಾನುಭವಿಗಳಿಗೆ, ಎಲ್ಲಾ ಕಂತುಗಳ ಹಣ ಹಾಕಲಾಗಿದೆ. 2023-24ರಲ್ಲಿ 17 ಸಾವಿರ ಕೋಟಿ ಅನುದಾನ ನೀಡಲಾಗಿದ್ದು, ಎಲ್ಲಾ ಹಣವನ್ನು ಬಳಕೆ ಮಾಡಿಕೊಳ್ಳಲಾಗಿದೆ. 2024-25ರಲ್ಲಿ 28 ಸಾವಿರದ 608.40 ಕೋಟಿ ಅನುದಾನ ನೀಡಲಾಗಿದ್ದು, ಪೂರ್ತಿ ವೆಚ್ಚ ಮಾಡಲಾಗಿದೆ. ಇನ್ನು, 2025-26ನೇ ಸಾಲಿನಲ್ಲಿ 28 ಸಾವಿರದ 608 ಕೋಟಿ ಅನುದಾನ ನಿಗದಿ ಮಾಡಲಾಗಿದೆ. ಇದರಲ್ಲಿ ಅರ್ಹ ಫಲಾನುಭವಿಗಳ 2 ತಿಂಗಳ ಕಂತು ನೀಡಲಾಗಿದೆ. 3ನೇ ಕಂತಿನ ಪಾವತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಗೃಹಲಕ್ಷ್ಮೀ ಹಣ ಪ್ರಾರಂಭದಲ್ಲಿ ಸರಿಯಾಗಿ ಬರ್ತಿತ್ತು. ಆದ್ರೀಗ ನಿಗದಿತ ಸಮಯಕ್ಕೆ ಹಣ ಬರುತ್ತಿಲ್ಲ ಅನ್ನೋ ಆರೋಪಗಳು ಕೇಳಿ ಬರ್ತಿವೆ. ಈಗಾಗಲೇ ತೆಲಂಗಾಣ ರಾಜ್ಯಕ್ಕೆ ಗ್ಯಾರಂಟಿಗಳ ಬಿಸಿ ತಟ್ಟಿದೆ. ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಅಂತಾ, ಸಿಎಂ ರೇವಂತ್‌ ರೆಡ್ಡಿಯವ್ರೇ ಬಹಿರಂಗವಾಗಿ ಹೇಳಿದ್ದಾರೆ.

ಗೃಹ ಸಚಿವ ಪರಮೇಶ್ವರ್‌ ಕೂಡ ಕಾರ್ಯಕ್ರಮವೊಂದ್ರಲ್ಲಿ, ಎಲ್ಲಾ ದುಡ್ಡನ್ನು ಅಕ್ಕಿ, ಎಣ್ಣೆಗೆ ಕೊಟ್ಟಿದ್ದೇವೆ. ಸರ್ಕಾರದ ಬಳಿ ದುಡ್ಡಿಲ್ಲ ಅಂತಾ ಹೇಳಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಪರಮೇಶ್ವರ್‌ ಉಲ್ಟಾ ಹೊಡೆದಿದ್ರು. ಒಟ್ನಲ್ಲಿ ಪಂಚ ಗ್ಯಾರಂಟಿಗಳು, ರಾಜ್ಯ ಸರ್ಕಾರಕ್ಕೆ ಖ್ಯಾತಿ ತಂದುಕೊಟ್ಟಷ್ಟೇ ಇಕ್ಕಟ್ಟಿಗೂ ಸಿಲುಕಿಸಿವೆ.

- Advertisement -

Latest Posts

Don't Miss