Friday, November 14, 2025

Latest Posts

Health Tips: ಆಹಾರದಲ್ಲಿ ಬಳಸುವ ಈ ವಸ್ತು ಸಕ್ಕರೆಗಿಂತ ಡೇಂಜರ್

- Advertisement -

Health Tips: ಸಕ್ಕರೆ ಆರೋಗ್ಯಕ್ಕೆ ಉತ್ತಮವಲ್ಲ ಅಂತಾ ಎಲ್ಲರಿಗೂ ತಿಳಿದಿದೆ. ಆದರೆ ಇನ್ನು ಕೆಲವು ಆಹಾರಗಳು ಸಕ್ಕರೆಗಿಂತಲೂ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಹಾಗಾದ್ರೆ ಯಾವುದು ಆ ವಸ್ತುಗಳು ಅಂತಾ ತಿಳಿಯೋಣ ಬನ್ನಿ..

ಸಕ್ಕರೆಗಿಂತಲೂ ಹಾನಿಕಾರಕ ಅಂದ್ರೆ ರಿಫೈನ್ಡ್ ಕಾರ್ಬೋಹೈಡ್ರೇಟ್ಸ್. ಇವುಗಳನ್ನು ಬ್ರೆಡ್, ಪೇಸ್ಟ್ರೀಸ್, ಬೇಕರಿ ತಿಂಡಿ ಸೇರಿ ಅನೇಕ ಆಹಾರದಲ್ಲಿ ಇದನ್ನು ಬಳಸುತ್ತಾರೆ.

ನೀವೇನಾದರೂ ರಿಫೈನ್ಡ್ ಕಾರ್ಬೋಹೈಡ್ರೇಟ್ಸ್ ಬಳಸಿರುವ ಆಹಾರ ಸೇವಿಸಿದರೆ, ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಪ್ರತಿದಿನ ಇಂಥ ಆಹಾರ ಸೇವಿಸಿದರೆ, ನಿಮಗೆ ಶುಗರ್ ಅಥವಾ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೆಚ್ಚು ಮನೆಯಲ್ಲೇ ತಯಾರಿಸಿದ ಆಹಾರ ಸೇವನೆ ಮಾಡಿ.

ಇನ್ನು ಇಂಥ ಆಹಾರ ಸೇವನೆಯಿಂದ ನೀವು ಬೇಗ ವಯಸ್ಸಾದವರಂತೆ ಕಾಣುತ್ತೀರಿ. ಸಿನಿಮಾದವರು ವಯಸ್ಸು 50 ಆದರೂ ನೋಡಲು ಹುಡುಗನಂತೆ ಕಾಣುತ್ತಾರೆ. ಏಕೆಂದರೆ, ಅವರು ಇಂಥ ಆಹಾರಗಳಿಂದ ದೂರವಿರುತ್ತಾರೆ. ಆದರೆ ಸಾಮಾನ್ಯ ಜನರು ಡಯಟ್ ಎಲ್ಲ ಫಾಲೋ ಮಾಡುವುದಿಲ್ಲ. ಹಾಗಾಗಿ ಅವರು ಬೇಗ ವಯಸ್ಸಾದವರಂತೆ ಕಾಣುತ್ತಾರೆ.

ಸಕ್ಕರೆ ಹೇಗೆ ಹಲ್ಲು ಹಾಳು ಮಾಡುತ್ತದೆಯೋ, ಅದೇ ರೀತಿ ರಿಫೈನ್ಡ್ ಕಾರ್ಬೋಹೈಡ್ರೇಟ್ಸ್ ಬಳಸಿ ಮಾಡಿದ ಆಹಾರ ಕೂಡ ಹಲ್ಲನ್ನು ಹಾಳು ಮಾಡುತ್ತದೆ.

ನಾಲ್ಕನೇಯದಾಾಗಿ ಉದರದ ಆರೋಗ್ಯ ಹಾಳು ಮಾಡುತ್ತದೆ. ಸರಿಯಾಗಿ ಜೀರ್ಣಕ್ರಿಯೆ ಆಗದಿರುವುದು, ಮಲ ವಿಸರ್ಜನೆಯಾಗದಿರುವ ಸಮಸ್ಯೆಗಳೆಲ್ಲ ಉದ್ಭವಿಸುವಂತೆ ಮಾಡುತ್ತದೆ. ಹಾಗಾಗಿ ಮನೆಯಲ್ಲೇ ಮಾಡಿದ ಆಹಾರ ಸೇವಿಸಿ. ಆರೋಗ್ಯವಾಗಿರಿ.

- Advertisement -

Latest Posts

Don't Miss