Tuesday, October 28, 2025

Latest Posts

Tech News: ಆಲ್‌ ಇನ್ ಒನ್ ಫುಡ್ ಪ್ರೊಸೆಸರ್ ಬಳಸಿದ್ರೆ ಮನೆಕೆಲಸ ಅತೀ ಸುಲಭ

- Advertisement -

Tech News: ಪ್ರತಿದಿನ ತರಕಾರಿ ಕತ್ತರಿಸಿ, ಪಲ್ಯ, ಸಾರು, ಸಾಂಬಾರ್ ಮಾಡಬೇಕಾಗತ್ತೆ. ಅಲ್ಲದೇ, ಚಪಾತಿ, ರೋಟಿ ಮಾಡಬೇಕಾಗತ್ತೆ. ಕೆಲಸ ಮಾಡಿ ಆಫೀಸಿಗೆ ಹೋಗಬೇಕಾಗಿರುತ್ತದೆ. ಹೀಗಿರುವಾಗ ಎಲ್ಲಾ ಕೆಲಸ ಭಾರವಾಗಲು ಶುರುವಾಗತ್ತೆ. ಹಾಗಾಗಬಾರದು. ಮನೆಕೆಲಸ ಈಸಿ ಆಗಬೇಕು ಅಂದ್ರೆ, ನೀವು ಆಲ್‌ ಇನ್ ಒನ್ ಫುಡ್ ಪ್ರೊಸೆಸರ್ ಬಳಸಬಹುದು.

ಇದು ಮಿಕ್ಸಿ ರೀತಿ ಇರುತ್ತದೆ. ಇದರಲ್ಲಿ ನಿಮಗೆ ಬೇರೆ ಬೇರೆ ಬ್ಲೇಡ್ ನೀಡಿರುತ್ತಾರೆ. ಆ ಬ್ಲೇಡ್ ಬಳಸಿ ನೀವು ಬೇರೆ ಬೇರೆ ಕೆಲಸ ಮಾಡಬಹುದು. ಇದರಲ್ಲಿ ಮಸಾಲೆ ರುಬ್ಬಬಹುದು.

ನಿಮಗೆ ಪಲ್ಯ, ಸಾಂಬಾರ್ ಮಾಡಲು ಸಮಯ ಸಾಕಾಗದಿದ್ದಲ್ಲಿ, ನೀವು ತರಕಾರಿ ಕತ್ತರಿಸಲು ಬೇರೆ ಬ್ಲೇಡ್ ಬಳಸಿ, ತರಕಾರಿ, ಕತ್ತರಿಸಬಹುದು. ಈರುಳ್ಳಿ, ಸೌತೇಕಾಯಿ, ಹೀಗೆ ಯಾವ ತರಕಾರಿ ಬೇಕಾದ್ರೂ ಕತ್ತರಿಸಬಹುದು. ಸಲಾಡ್ ಮಾಡಲು ಕೂಡ ಬಲು ಸುಲಭವಾಗುತ್ತದೆ.

ಇನ್ನು ಚಪಾತಿಗಾಗಿ ಕೈಯಿಂದ ಹಿಟ್ಟು ಕಲಿಸಿ, ಕಲಿಸಿ ಕೈ ನೋವು ಬಂದಿದ್ದರೆ, ಬೇರೆ ಬ್ಲೇಡ್ ಬಳಸಿ, ಜಾರ್‌ಗೆ ಹುಡಿ, ಉಪ್ಪು, ನೀರು ಹಾಕಿ ಬಟನ್ ಪ್ರೆಸ್ ಮಾಡಿದ್ರೆ ಸಾಕು. ಚಪಾತಿ ಹಿಟ್ಟು ರೆಡಿಯಾಗುತ್ತದೆ. ಎಗ್ ಬಳಸುವವರು ಇದರಲ್ಲಿ ಎಲ್ಲೋ ಪಾರ್ಟ್ ಹಾಕಿ, ಪೇಸ್ಟ್ ಮಾಡಬಹುದು. ಇದರ ಬೆಲೆ 2ರಿಂದ 3 ಸಾವಿರದ ತನಕವಿರುತ್ತದೆ. ಆನ್‌ಲೈನ್‌ನಲ್ಲೇ ನೀವು ಇದನ್ನು ಖರೀದಿಸಬಹುದು.

- Advertisement -

Latest Posts

Don't Miss