ನಟನೆಗೆ ಅವಕಾಶ ಸಿಕ್ಕಾಗ ನನ್ನ ತಾಯಿಯೇ ನನಗೆ ಬೆನ್ನುಲುಬಾಗಿ ನಿಂತಿದ್ದರು: ನಟಿ ಹರಿಣಿ

Sandalwood News: ಹರಿಣಿ ಅವರಿಗೆ ಸಿರಿಯಲ್‌ನಲ್ಲಿ ನಟಿಸೋ ಅವಕಾಶ ಸಿಕ್ಕಾಗ, ಮನೆಯಲ್ಲಿ ಇದಕ್ಕೆ ಪರ್ಮಿಷನ್ ಸಿಗೋದು ಕಷ್ಟವಾಗಿತ್ತು. ಏಕೆಂದರೆ, ಎಲ್ಲರೂ ಸಂಗೀತ, ಕಲೆಗೆ ಹೆಚ್ಚು ಬೆಲೆ ನೀಡುವವರು. ಟಿವಿಯಲ್ಲಿ ಹೋಗುವುದೆಲ್ಲ ಬೇಡ ಅನ್ನುವ ಪರಿಸ್ಥಿತಿ. ಆದರೆ ಹರಿಣಿ ಅವರ ತಾಯಿಯೇ ನಟನೆೆಗೆ ಓಕೆ ಎಂದು, ಹರಿಣಿಯ ಬೆನ್ನುಲುಬಾಗಿ ನಿಂತಿದ್ದರು.

ಬಳಿಕ ಹರಿಣಿ ಎಲ್ಲಿ ಶೂಟಿಂಗ್‌ಗೆ ಹೋಗುತ್ತಾರೋ, ಅಲ್ಲೆಲ್ಲ ಅವರ ತಾಯಿ ಅವರ ಜತೆ ಹೋಗುತ್ತಿದ್ದರು. ಹಾಗಾಗಿ ಹರಿಣಿಗೆ ಎಲ್ಲರೂ ಮಾತನಾಡಿಸುವ ರೀತಿ ಉತ್ತಮವಾಗಿತ್ತು. ಹರಿಣಿಯವರಿಗೆ ಅಮ್ಮನ ಸಾಥ್ ಅದೆಷ್ಟು ಶಕ್ತಿ ನೀಡಿತ್ತು ಅಂದ್ರೆ, ಸುಲಭವಾಗಿ ಬಂದು ಸಲುಗೆಯಿಂದ ಹರಿಣಿಯನ್ನು ಯಾರೂ ಮಾತನಾಡಿಸಲು ಮುಂದಾಗುತ್ತಿರಲಿಲ್ಲ. ವಯಸ್ಸಿಗೆ ತಕ್ಕ ಹಾಗೆ ಮಾತನಾಡಿಸುತ್ತಿದ್ದರು ಅಂತಾರೆ ಹರಿಣಿ. ಹರಿಣಿ ಮದುವೆಯಾಗುವವರೆಗೂ ಅವರ ತಾಯಿ ಅವರ ಜತೆ ಶೂಟಿಂಗ್‌ಗೆ ಬರುತ್ತಿದ್ದರಂತೆ.

ಇನ್ನು ಹರಿಣಿಯವರು ಸಂಗೀತದ ಫ್ಯಾಮಿಲಿಯವರು ಆಗಿದ್ದರೂ ಕೂಡ, ಅವರಿಗೆ ಸಂಗೀತ ಬರುವುದಿಲ್ಲವಂತೆ. ಹಲವು ಬಾರಿ ಪ್ರಯತ್‌ನಿಸಿದರೂ ಹರಿಣಿಯವರಿಗೆ ಸಂಗೀತ ಬರಲಿಲ್ಲ. ಆದರೆ ನೃತ್ಯ ಮತ್ತು ನಟನೆಯಲ್ಲಿ ಹರಿಣಿ ಮುನ್ನಡೆ ಸಾಾಧಿಸಿದ್ದಾರೆ. ಅವರ ಸಂಪೂರ್ಣ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.

About The Author