Monday, November 17, 2025

Latest Posts

ಉರಿಗೌಡ ನಂಜೇಗೌಡರನ್ನು ಮತ್ತೆ ನೆನಪಿಸಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ

- Advertisement -

Political News: ಬಿಜೆಪಿ ವಿರುದ್ಧ ವಾಾಗ್ದಾಳಿ ಮುಂದುವರಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯವರು ಕರಾವಳಿಯಲ್ಲಿದ್ದ ತಮ್ಮ ಕೋಮುವಾದದ ಪ್ರಯೋಗ ಶಾಲೆಯ ಬ್ರಾಂಚನ್ನು ಹಳೆ ಮೈಸೂರು ಭಾಗದಲ್ಲೂ ಓಪನ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

– ಉರಿಗೌಡ ನಂಜೇಗೌಡ ಪಾತ್ರಗಳ ಸೃಷ್ಟಿ.

– ಶ್ರೀರಂಗಪಟ್ಟಣದ ಕೋಮು ಸಂಘರ್ಷ,

– ಕೆರೆಗೋಡು ಧ್ವಜ ಗಲಾಟೆ,

– ನಾಗಮಂಗಲ ಗಲಾಟೆ

– ಮದ್ದೂರು ಗಲಾಟೆ.

ಈ ಎಲ್ಲಾ ಘಟನೆಗಳ ಹಿಂದೆ ಬಿಜೆಪಿಯ ರಾಜಕೀಯ ಕಾರ್ಯಸೂಚಿ ಇದೆ, ಕರಾವಳಿಯಲ್ಲಿ ಹಾಕಿದ ವಿಷವನ್ನೇ ಹಳೆ ಮೈಸೂರು ಭಾಗಕ್ಕೂ ಹಾಕಲಾಗುತ್ತಿದೆ ಎಂದು ಖರ್ಗೆ ವ್ಯಂಗ್ಯವಾಡಿದ್ದಾರೆ.

ಬಿಜೆಪಿಯೊಂದಿಗೆ ಜೆಡಿಎಸ್ ಸೈದ್ದಂತಿಕ ಮೈತ್ರಿ ಮಾಡಿಕೊಂಡ ನಂತರ ಕೋಮು ಸಾಮರಸ್ಯಕ್ಕೆ ಹೆಸರಾಗಿದ್ದ ಮಂಡ್ಯ ಸುತ್ತಾ ಮುತ್ತ ಗಲಾಟೆಗಳು ಶುರುವಾಗಿವೆ. ಇದೆಲ್ಲದಕ್ಕೆ ಕಡಿವಾಣ ಹಾಕಲು ನಮ್ಮ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತದೆ. ಸಾಮರಸ್ಯ, ಸಹಬಾಳ್ವೆಯನ್ನು ಸ್ಥಾಪಿಸಲು ಸದಾ ಬದ್ದವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇನ್ನು ಬ್ಯಾಲೇಟ್ ಪೇಪರ ಮಾದರಿಯ ಚುನಾವಣೆಗೆ ಬಿಜೆಪಿ ವಿರೋಧಿಸಿದ್ದು, ಇದಕ್ಕೂ ಖಾರವಾಗಿಯೇ ಪ್ರತಿಕ್ರಿಯಿಸಿದ್ದ ಖರ್ಗೆ, ಬಿಜೆಪಿಯ ಡಬಲ್ ಸ್ಟ್ಯಾಂಡರ್ಡ್ ರಾಜಕೀಯಕ್ಕೆ ಮಿತಿ ಇಲ್ಲ, ಕೊನೆ ಇಲ್ಲ. ಬ್ಯಾಲೆಟ್ ಪೇಪರ್ ಮಾದರಿಯ ಚುನಾವಣಾ ಕ್ರಮವನ್ನು ವಿರೋಧಿಸುತ್ತಿರುವ ಬಿಜೆಪಿಯೇ ಹಿಂದೆ ಇವಿಎಂ ವಿರೋಧಿಸಿ ಬ್ಯಾಲೆಟ್ ಪೇಪರ್ ಪರ ವಹಿಸಿತ್ತು ಎಂಬ ವಿಷಯವನ್ನು ಮರೆತಿರುವಂತಿದೆ. ಬಿಜೆಪಿಗರಿಗಿರುವುದು ಬರೀ ಮರೆವಲ್ಲ, ಜಾಣ ಮರೆವು! ಎಂದು ವ್ಯಂಗ್ಯವಾಡಿದ್ದಾರೆ.

- Advertisement -

Latest Posts

Don't Miss