Davanagere: ಭರ್ಜರಿ ಪೊಲೀಸ್ ಕಾರ್ಯಾಚರಣೆ: 1,85,000 ಮೌಲ್ಯದ ಬೆಳ್ಳಿಯ ಸಾಮಗ್ರಿ ಜಪ್ತಿ, ಕಳ್ಳರ ಬಂಧನ

Davanagere: ದಾವಣಗೆರೆ: ದಾವಣಗೆರೆಯಲ್ಲಿ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು,  1,85,000 ಮೌಲ್ಯದ ಬೆಳ್ಳಿಯ ಸಾಮಗ್ರಿ ದೋಚಿದ್ದ ಕಳ್ಳರನ್ನು ಬಂಧಿಸಿದ್ದಾರೆ.

ಜಗಳೂರು ಪಟ್ಟಣದ ಹೊರಕೆರೆಯಲ್ಲಿ ಮನೆಗೆ ನುಗ್ಗಿ ಆರೋಪಿಗಳು ಕಳ್ಳತನ ಮಾಡಿದ್ದು, ಕಳ್ಳತನವಾದ 24 ಗಂಟೆಯಲ್ಲಿ ಪೋಲೀಸರು ಕಳ್ಳರನ್ನು ಬಂಧಿಸಿದ್ದಾರೆ.

ಗಂಗಾವತಿ ಪಟ್ಟಣದ ಹನೀಫ್ (24), ಗೌಸ್ ಪಾಷಾ (28 ) ಹಾಗೂ ಸುಹೇಲ್ (22) ಬಂಧಿತ ಆರೋಪಿಗಳಾಗಿದ್ದು, ಇವರು ಇಲ್ಲಿನ ನಿವಾಸಿಯಾದ ಉಮಾಶಂಕರ ಅನ್ನೋರ ಮನೆಯಲ್ಲಿ ಕಳ್ಳತನ ಮಾಡಿದ್ದರು.

ಉಮಾಶಂಕರ್ ಅವರು ಊರಿಗೆ ತೆರಳಿದ್ದಾಗ, ರಾತ್ರಿ ವೇಳೆ ಕಳ್ಳತನ ಮಾಡಲಾಗಿದೆ. 1,500 ಗ್ರಾಂ ತೂಕದ ₹1,85,000 ಮೌಲ್ಯದ ಬೆಳ್ಳಿಯ ಸಾಮಗ್ರಿಗಳನ್ನು ಕಳ್ಳತನ ಮಾಡಿ, ಕಳ್ಳರು ಗಂಗಾವತಿಯತ್ತ ಹೋಗುತ್ತಿದ್ದರು. ಈ ವೇಳೆ ಪೋಲೀಸರು ಗಂಗಾವತಿಯ ಸಮೀಪವೇ ಕಳ್ಳರನ್ನು ವಿಚಾರಿಸಿ, ಬಂಧಿಸಿದ್ದಾರೆ. ಅಲ್ಲದೇ, ಕೃತ್ಯಕ್ಕೆ ಬಳಸಿದ್ದ ಸ್ಕೂಟಿ ಮತ್ತು ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಕಳ್ಳರ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author