Sandalwood: ನಟಿ ಹರಿಣಿ ಶ್ರೀಕಾಂತ್ ಅವರು ತಮ್ಮ ಕಲಾಾಪಯಣದ ಬಗ್ಗೆ ಮಾತನಾಡಿರುವಾಗ ಹ್ಯಾಟ್ರಿಕ್ ಹೀರೋ ಶಿವಣ್ಣನ ಬಗ್ಗೆ ಮತ್ತು ಅಪ್ಪು ಬಗ್ಗೆ ಮಾತನಾಡಿದ್ದಾರೆ.
ಅವರು 1 ಯೂನಿವರ್ಸಿಟಿ ಇದ್ದ ಹಾಗೆ. ಅವರ ಸುತ್ತಮುತ್ತ ಇದ್ರೇನೇ ನಾವು ಸಾಕಷ್ು ಕಲಿಯಬಹುದು. ಸಮಯಕ್ಕೆ ಸರಿಯಾಗಿ ಬರೋದು, ಡಿಸಿಪ್ಲೇನ್, ಮಾತನಾಡುವ ರೀತಿ, ನಡೆದುಕ“ಳ್ಳುವ ರೀತಿ, ಇದೆಲ್ಲ ನಾವು ಅವರನ್ನು ನೋಡಿಯೇ ಕಲಿಯಬಹುದು ಅಂತಾರೆ ಹರಿಣಿ.
ಇನ್ನು ರಂಗಾಯಣ ರಘು ಜತೆ ಅಭಿನಯಿಸುತ್ತಿದ್ದಾಗ, ಅವರು ಬೇರೆ ಬೇರೆ ಸ್ಲ್ಯಾಂಗ್ಗಳಲ್ಲಿ ಮಾತನಾಡುವುದನ್ನು ನೋಡಿ, ನಾನೂ ಅದೇ ರೀತಿ ಕಲಿಯಲು ಪ್ರಯತ್ನಿಸಿದ್ದೆ. ಬೇರೆ ಬೇರೆ ಸ್ಲ್ಯಾಂಗ್ನಲ್ಲಿ ಮಾತನಾಡುವಾಗ, ನಿಮ್ಮ ಹಾವ ಭಾವಗಳೆಲ್ಲ ಬದಲಾಗುತ್ತದೆ. ಅದೇ ರೀತಿ ಕಲಿಯಲು ಪ್ರಯತ್ನಿಸುತ್ತೇನೆ ಅಂತಾರೆ ಹರಿಣಿ.
ಇನ್ನು ಅಂಜಿನಿ ಪುತ್ರ ಸಿನಿಮಾಯದಲ್ಲಿ ಅಪ್ಪು ಜತೆ ಅಭಿನಯಿಸಿದ ಅನುಭವ ಹೇಳಿರುವ ಹರಿಣಿ, ಅಪ್ಪು ಅವರು ತುಂಬಾ ಕೈಂಡ್ ವ್ಯಕ್ತಿ. ಯಾರಾದರೂ ಪರಿಚಯಸ್ಥರು ಸಿಕ್ಕರೆ, ಅವರೇ ಬರಲಿ ಎಂದು ಕಾಯದೇ, ಅವರ ಹತ್ತಿರ ತಾವೇ ಹೋಗಿ ಮಾತನಾಡಿಸುವಷ್ಟು ಉತ್ತಮ ಗುಣ ಉಳ್ಳವರು ಅಂತಾ ನೆನೆಪಿಸಿಕ“ಂಡಿದ್ದಾರೆ. ಈ ಸಂದರ್ಶನ ಪೂರ್ತಿಯಾಗಿ ನೋಡಲು ಈ ವೀಡಿಯೋ ವೀಕ್ಷಿಸಿ.




