Health tips: ಹಿಂದಿನ ಕಾಲದಲ್ಲಿ ವಿದ್ಯುತ್ ಹೋದಾಗ, ಮನೆಯಲ್ಲಿರುವ ಹಿರಿಯರು ಕಥೆ ಹೇಳುತ್ತಿದ್ದರು. ಬೇರೆ ಬೇರೆ ಕುತೂಹಲಕಾರಿ ವಿಷಯಗಳನ್ನು ಹೇಳುತ್ತಿದ್ದರು. ಭಜನೆ, ಹಾಡು ಇತ್ಯಾದಿ ನಡೆಯುತ್ತಿತ್ತು. ಆದರೆ ಈಗ ಕರೆಂಟ್ ಇರಲಿ, ಹೋಗಲಿ, ಕೈಯಲ್ಲಿ ಸೆಲ್ ಫೋನ್ ಇದ್ದರೆ ಜಗತ್ತೇ ಮರೆತು ಹೋಗತ್ತೆ. ಇಂದಿನ ಕಾಲದವರು ಮಕ್ಕಳಿಗೆ ಕಥೆ ಹೇಳೋದಿರಲಿ, ಅದಕ್ಕೆ ಸಮಯ ನೀಡೋದೇ ಅಪರೂಪ. ಹಾಗಾಗಿ ಮಕ್ಕಳು ಕೂಡ ಸೆಲ್ ಫೋನ್ ದಾಸರಾಗುತ್ತಿದ್ದಾರೆ. ಹಾಗಾದ್ರೆ ಮಕ್ಕಳ ಈ ಅಭ್ಯಾಸ ಬಿಡಿಸಲು ಏನು ಮಾಡಬೇಕು ತಿಳಿಯೋಣ ಬನ್ನಿ.
ಸಣ್ಣ ಮಕ್ಕಳ ಮೆದುಳು ಹಸಿ ಮಣ್ಣಿನಂತೆ. ನಾವು ಅದನ್ನು ಹೇಗೆ ರಚಿಸುತ್ತೇವೋ, ಅದರಂತೆ ರೂಪ ಪಡೆದುಕ“ಳ್ಳುತ್ತದೆ. ಹಾಗಾಗಿ ನಾವು ಅವರಿಗೆ ಪುಸ್ತಕ ನೀಡಿ ಬೆಳೆಸಿದರೆ, ಪುಸ್ತಕ ಓದುತ್ತ, ಜ್ಞಾನ ಪಡೆಯುತ್ತ ಬೆಳೆಯುತ್ತಾರೆ. ಸೆಲ್ ಫೋನ್ ನೀಡಿದರೆ, ಅದರಲ್ಲೇ ಮುಳುಗಿ ಭವಿಷ್ಯ ಹಾಳು ಮಾಡಿಕ“ಳ್ಳುತ್ತಾರೆ. ಹಾಗಾಗಿ ನಾವು ಆದಷ್ಟು ಮಕ್ಕಳಿಗೆ ಉತ್ತಮವಾದುದನ್ನೇ ಕಲಿಸಬೇಕು.
ನೀವು ಮಕ್ಕಳು ಊಟ ಮಾಡುವುದಿಲ್ಲವೆಂದು, ನಿಮಗೆ ಡಿಸ್ಟರ್ಬ್ ಮಾಡುತ್ತಾರೆಂದು ಅವರಿಗೆ ಫೋನ್ ನೀಡಿದರೆ, ಅವರಿಗೆ ಅದೇ ಅಭ್ಯಾಸವಾಗುತ್ತದೆ. ಹೇಗೂ ಸ್ವಲ್ಪ ಕೂಗಾಡಿ, ಅತ್ತು ಕಿರಿ ಕಿರಿ ಮಾಡಿದ್ರೆ, ಅಪ್ಪ ಅಮ್ಮ ಫೋನ್ ನೀಡ್ತಾರೆ ಅನ್ನೋದು ಅವರಿಗೆ ತಿಳಿಯುತ್ತದೆ. ಪ್ರತೀ ಸಲವೂ ಅದೇ ಪ್ರಯೋಗ ಮಾಡಿ, ನಿಮ್ಮ ಬಳಿ ಫೋನ್ ತೆಗೆದುಕ“ಳ್ಳುತ್ತಾರೆ. ಆದರೆ ನೀವು ಮುಂಚೆಯಿಂದಲೇ ಅವರಿಗೆ ಕೇಳಿದ್ದನ್ನು ನೀಡದೇ ಇರುವಂತೆ ಅಭ್ಯಾಸ ಮಾಡಬೇಕು.
ಊಟ ಮಾಡುವುದಿಲ್ಲ ಎಂದರೆ, ಸುಮ್ಮನಿರಿ. ಹಸಿವಾದಾಗ ಬಂದು ತಾವೇ ಉಣ್ಣುತ್ತಾರೆ. ನಿಮಗೆ ಡಿಸ್ಟರ್ಬ್ ಆಗುತ್ತಿದೆ ಎಂದಾದಲ್ಲಿ, ಮಾರುಕಟ್ಟೆಯಲ್ಲಿ ಹಲವು ಆಟಿಕೆಗಳು ಸಿಗುತ್ತದೆ. ಅದನ್ನು ತೆಗೆದುಕ“ಡಿ. ಅವುಗಳನ್ನು ಆಡುವುದರಿಂದ ನಿಮ್ಮ ಮಕ್ಕಳ ಬುದ್ಧಿಶಕ್ತಿ ಹೆಚ್ಚಾಗುತ್ತದೆ. 1 ಸಲ ಮಕ್ಕಳು ಆ ಆಟ ಆಡುವುದರಲ್ಲಿ ಮಗ್ನರಾದರೆ, ನಿಮಗೆ ಅವರು ಡಿಸ್ಟರ್ಬ್ ಮಾಡುವುದಿಲ್ಲ.
ಮಕ್ಕಳಿಗೆ ಪುಸ್ತಕ ನೀಡಿ, ಅದರಲ್ಲಿರುವ ಚಿತ್ರದಲ್ಲಿ ಬಣ್ಣ ತುಂಬಲು ಕಲಿಸಿ. ಮಕ್ಕಳು ಅದನ್ನು ತುಂಬಾ ಇಂಟ್ರೆಸ್ಟ್ ನೀಡಿ, ಕಲಿಯುತ್ತಾರೆ. ಇದರ ಜತೆ ಉತ್ತಮ ಆಹಾರ ನೀಡಿ. ನಿಮ್ಮ ಮಕ್ಕಳು ಹೆಚ್ಚು ಸೆಲ್ ಫೋನ್ ಬಳಸಿದರೆ, ಅವರಿಗೆ ಆರೋಗ್ಯಕರ ತಿಂಡಿ ತಿನ್ನಲು ಮನಸ್ಸಾಗುವುದಿಲ್ಲ. ಜಂಕ್ ಫುಡ್ ತಿನ್ನುವ ಅಭ್ಯಾಸ ಹೆಚ್ಚಾಗುತ್ತದೆ. ಅಲ್ಲದೇ, ನಿದ್ರೆಗೆಡುತ್ತಾರೆ. ಇದರಿಂದ ಆರೋಗ್ಯ ಹಾಳಾಗುತ್ತದೆ.
ಇದರಿಂದ ನೆನಪಿನ ಶಕ್ತಿಯೂ ಕಡಿಮೆಯಾಗುತ್ತದೆ. ಅಲ್ಲದೇ, ಹೆಚ್ಚು ಫೋನ್ ಬಳಸುವುದರಿಂದ ಹೆಚ್ಚು ಯೋಚಿಸುವ ಮತ್ತು ಮಾತನಾಡುವ ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ಮಕ್ಕಳಿಗೆ ಆಟವಾಡಲು ಬಿಡಿ, ಪಾರ್ಕ್‌ಗೆ ಕರೆದುಕ“ಂಡು ಹೋಗಿ. ಅವರ ಜತೆ ಸಮಯ ಕಳೆಯಿರಿ. ವಾಕಿಂಗ್ ಹೋಗಿ. ದೇವಸ್ಥಾನಕ್ಕೆ ಹೋಗಿ. ಅವರ ಜತೆ ಮಾತಾಡಿ, ನಗಿ. ನೃತ್ಯ, ಸಂಗೀತಂಥ ಕಲೆ ಕಲಿಯಲು ಪ್ರೋತ್ಸಾಹಿಸಿ. ಇದೆಲ್ಲವೂ ನಿಮ್ಮ ಮಕ್ಕಳನ್ನು ಬ್ಯುಸಿ ಮಾಡಿ, ಫೋನ್‌ನಿಂದ ದೂರಾಗುವಂತೆ ಮಾಡುತ್ತದೆ.