Monday, November 17, 2025

Latest Posts

ಬಿಜೆಪಿಗರು ಧರ್ಮಸ್ಥಳ ಚಲೋ ಬದಲು ಧರ್ಮಸ್ಥಳದಿಂದ ವಾಪಸ್ ಚಲೋ ಕಾರ್ಯಕ್ರಮ ಮಾಡಬೇಕಿತ್ತು: ಪ್ರಿಯಾಂಕ್ ವ್ಯಂಗ್ಯ

- Advertisement -

Political News: ಬಿಜೆಪಿಯವರು ಧರ್ಮಸ್ಥಳ ಚಲೋ ಕಾರ್ಯಕ್ರಮದ ಬಳಿಕ, ಸೌಜನ್ಯಳ ಮನೆಗೆ ಹೋಗಿ, ಅವರ ತಾಯಿ ಕುಸುಮಾವತಿಯವರನ್ನು ಭೇಟಿ ಮಾಡಿ, ಮಾತನಾಡಿದ್ದಾರೆ.

ಈ ವೇಳೆ ಕುಸುಮಾ ಅವರು, ನಾನು ನನ್ನ ಮಗಳ ಹೆಸರು ಹೇಳಿ, ಹಣ ಮಾಡಿದೆ ಎಂದು ನಿಮ್ಮ ಪಕ್ಷದವರು ಹೇಳುತ್ತಿದ್ದಾರೆ. ಇದಕ್ಕೆ ಏನನ್ನುತ್ತೀರಿ ಎಂದು ಖಡಕ್ ಆಗಿಯೇ ಪ್ರಶ್ನಿಸಿದ್ದಾರೆ. ಈ ಬಗ್ಗೆ ವಿಜಯೇಂದ್ರ ಏನೂ ಮಾತನಾಡಿಲ್ಲ.

ಈ ಬಗ್ಗೆ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಪ್ರಶ್ನಿಸಿದ್ದು,ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ, ಷಡ್ಯಂತ್ರ ನಡೆಯುತ್ತಿದೆ ಎಂದು ಧರ್ಮಸ್ಥಳ ಚಲೋ ಮಾಡಿದ ಬಿಜೆಪಿ ನಾಯಕರು ಸೌಜನ್ಯ ತಾಯಿ ಕುಸುಮಾವತಿಯವರು ತಮ್ಮೆದುರು ಹೇಳಿದ ನೈಜ ಸಂಗತಿಯನ್ನು ಜಗತ್ತಿಗೆ ತಿಳಿಸು ಧೈರ್ಯವಿದೆಯೇ? ಎಂದು ಕೇಳಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬಿಜೆಪಿಗರಿಗೆ ಪ್ರಶ್ನಿಸಿರುವ ಖರ್ಗೆ,  “ಸೌಜನ್ಯ ಹೆಸರು ಹೇಳಿಕೊಂಡು ಹಣ ಮಾಡಿದ್ದಾರೆ, ಇಷ್ಟು ದೊಡ್ಡ ಮನೆ ಕಟ್ಟಿಸಿದ್ದಾರೆ ಎಂದು ನಿಮ್ಮದೇ ಪಕ್ಷದವರು ಹೇಳುತ್ತಿದ್ದಾರೆ“ ಎಂಬ ಕುಸುಮಾವತಿಯವರ ಮಾತಿಗೆ ಬಿಜೆಪಿ ನಾಯಕರು ಉತ್ತರ ನೀಡದೆ ಮೌನವಹಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ

ವಿಜಯೇಂದ್ರ ಅವರೇ, ಮೊದಲು ಸೌಜನ್ಯ ಕುಟುಂಬಕ್ಕೆ ನಿಮ್ಮ ಪಕ್ಷ ನೀಡಿದ ಕಿರುಕುಳಕ್ಕೆ ನ್ಯಾಯ ಸಿಗಬೇಕಲ್ಲವೇ? ಆ ನೊಂದ ಕುಟುಂಬಕ್ಕೆ ಬಿಜೆಪಿ ನೀಡುತ್ತಿರುವ ಕಿರುಕುಳದ ಬಗ್ಗೆ ಉತ್ತರ ಸಿಗಲೇಬೇಕು ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಬಿಜೆಪಿ ಯಾರ ಪರವಾಗಿ ಧರ್ಮಸ್ಥಳಕ್ಕೆ ಹೋಗಿದ್ದರೋ ಅವರ ವಿರುದ್ಧವೇ ಕುಸುಮಾವತಿ ದೂರು ಹೇಳಿದ್ದಾರೆ. ಬಿಜೆಪಿ ನಾಯಕರು ಕುಸುಮಾವತಿಯವರ ಮಾತು ಕೇಳಿಸಿಕೊಂಡ ನಂತರವೂ ಕಾರ್ಯಕ್ರಮದ ವೇದಿಕೆ ಹತ್ತಿ ಕೂರುವುದಕ್ಕೆ ಹೇಗೆ ಮನಸಾಯಿತು? ಬಿಜೆಪಿಯವರು ಸೌಜನ್ಯ ಪರವೋ, ವಿರುದ್ಧವೋ ಎನ್ನುವುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ.

ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು ಎಂದಿದ್ದ ಬಿಜೆಪಿಗೆ ಯಾರಿಂದ ನ್ಯಾಯ ಸಿಗಬೇಕು ಎನ್ನುವುದನ್ನು ಸೌಜನ್ಯ ತಾಯಿ ಸ್ಪಷ್ಟವಾಗಿ ಹೇಳಿದ್ದಾರೆ, ನ್ಯಾಯ ಕೊಡಿಸುವರೇ? ಸೌಜನ್ಯ ತಾಯಿಯವರ ಕಾನೂನು ಹೋರಾಟಕ್ಕೆ ಬಿಜೆಪಿ ಪಕ್ಷವೇ ಹಣದ ನೆರವನ್ನು ನೀಡಲಿದೆ ಎಂದು ಘೋಷಿದ್ದಾರೆ. ಆ ಕಾನೂನು ಹೋರಾಟ ಯಾರ ವಿರುದ್ಧವಾಗಿರುತ್ತದೆ ಎಂಬ ಪ್ರಜ್ಞೆ ಬಿಜೆಪಿಗಿದೆಯೇ? ಎಂದು ಖರ್ಗೆ ಪ್ರಶ್ನಿಸಿದ್ದಾರೆ

ಸೌಜನ್ಯ ಸಾವಿಗೆ ನ್ಯಾಯ ಕೊಡಿಸುವುದರಲ್ಲಿ ಬಿಜೆಪಿಗೆ ನೈಜ ಬದ್ಧತೆ ಇದ್ದಿದ್ದೇ ಆಗಿದ್ದರೆ ಕುಸುಮಾವತಿಯವರ ಮಾತು ಕೇಳಿದ ನಂತರ ಧರ್ಮಸ್ಥಳ ಚಲೋ ಮಾಡುವ ಬದಲು “ಧರ್ಮಸ್ಥಳದಿಂದ ವಾಪಸ್ ಚಲೋ“ ಕಾರ್ಯಕ್ರಮ ಮಾಡಬೇಕಿತ್ತು! ಎಂದು ಪ್ರಿಯಾಂಕ್ ಬಿಜೆಪಿ ಮತ್ತು ವಿಜಯೇಂದ್ರ ವಿರುದ್ಧ ವ್ಯಂಗ್ಯವಾಡಿದ್ದಾರೆ.

- Advertisement -

Latest Posts

Don't Miss