Hubli News; ಹುಬ್ಬಳ್ಳಿ: ನಿನ್ನೆ ಏಳು ದಿನದ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಶಾಬಜಾರ ಹತ್ತಿರ ಕವಾಲಿ ಹಾಡು ಹಾಕುವುದರ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯಗೆ ಸಾಕ್ಷಿಯಾದ ಅದ್ಭುತ ಪ್ರಸಂಗ ಜರುಗಿದೆ.
ಹೌದು,, ನಗರದ ಘಂಟಿಕೇರಿ ಓಣಿಯ ಗಣಪತಿ ಮೆರವಣಿಗೆ ಹೋಗುತ್ತಿರುವಾಗ, ಶಾಬಜಾರ್ ಹತ್ತಿರ ಮಸೀದಿ ಹತ್ತಿರ ಬಂದಾಗ, ಗಣಪತಿ ಮಂಡಳಿಯವರು ಕವಾಲಿ ಹಾಡು ಹಾಕುವ ಮೂಲಕ ಗಣಪತಿ ಭಾವೈಕ್ಯತೆ ಮೆರೆದಿದ್ದಾರೆ. ಈ ಒಂದು ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.




