Tuesday, September 23, 2025

Latest Posts

ಬಿಗ್‌ ಬಾಸ್‌ 12 ಹೇಗಿರುತ್ತೆ? ಈ ಬಾರಿ ಸೀಕ್ರೆಟ್ಸ್ ಏನು?

- Advertisement -

ಕಿಚ್ಚ ಸುದೀಪ್‌ ರೆಡಿ… ನೀವ್‌ ರೆಡಿನಾ?

ಕನ್ನಡ ಬಿಗ್‌ ರಿಯಾಲಿಟಿ ಶೋ ಬಿಗ್‌ ಬಾಸ್‌ ಎಂದರೆ ಎಲ್ಲಾರಿಗೂ ಸಖತ್‌ ಇಷ್ಟ. ಈಗಾಗಲೇ ಕನ್ನಡದಲ್ಲಿ11 ಸೀಸನ್‌ಗಳು ಯಶಸ್ವಿಯಾಗಿ ಮುಗಿದಿವೆ.. ಈಗ 12 ನೇ ಸೀಸನ್‌ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೀಘ್ರದಲ್ಲೇ ಆರಂಭ ಆಗಲಿದೆ. ಇತ್ತ ಕಿಚ್ಚ ಸುದೀಪ್‌ ಅವರು ನಿರೂಪಣೆ ಮಾಡಲು ಸಜ್ಜಾಗಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬಿಗ್‌ ಬಾಸ್‌ ಪ್ರಸಾರ ಆಗಲಿದ್ದು, ಸುದೀಪ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಪ್ರೋಮೋ ಬಿಡುಗಡೆ ಮಾಡಲಾಗಿದೆ.

ಕಿಚ್ಚ ಸುದೀಪ್‌ ಅವರು ಮಾರ್ಕ್‌ ಸಿನಿಮಾಗಾಗಿ ಉದ್ದ ಕೂದಲು ಬಿಟ್ಟಿದ್ದಾರೆ. ಕಿಚ್ಚನ ಈ ಹೇರ್‌ ಸ್ಟೈಲ್‌ ಎಲ್ಲರಿಗೂ ಇಷ್ಟ ಆಗಿದೆ. ಅದೇ ಗೆಟಪ್‌ ನಲಲಿ ಅವರು ಬಿಗ್‌ ಬಾಸ್‌ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ʼ ರಿಯಾಲಿಟಿ ಶೋಗಳ ಬಾಸ್‌, ರಿಯಲ್‌ ಎಂಟರ್‌ ಟೈನ್‌ಮೆಂಟ್‌ಗೆ ಒಂದೇ ಅಡ್ರೆಸ್‌. ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಗ್ರ್ಯಾಂಡ್ ಓಪನಿಂಗ್ ಸೆಪ್ಟೆಂಬರ್ 28ಕ್ಕೆ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋ ಹಂಚಿಕೊಳ್ಳಲಾಗಿದೆ.

ವಿಶೇಷವಾಗಿ ಈಗ ಟ್ರೆಂಡ್‌ ಇರುವ ವಿಚಾರಗಳನ್ನು ಇಟ್ಟುಕೊಂಡು ಪ್ರೋಮೋ ಮಾಡಲಾಗಿದೆ. ಕರ್ನಾಟಕದಲ್ಲಿ ಸಖತ್ ವೈವಿದ್ಯತೆ ಇದೆ. ಊಟ, ಉಡುಗೆ, ಅಭಿರುಚಿಯಲ್ಲೂ ತುಂಬ ವೈವಿದ್ಯತೆ ಇದೆ. ಕೆಲವರಿಗೆ ಸುದ್ದಿ ಇಷ್ಟ, ಇನ್ನು ಕೆಲವರಿಗೆ ಸಿನಿಮಾ ಇಷ್ಟ. ಮತ್ತೆ ಕೆಲವರಿಗೆ ಕ್ರೀಡೆ ಇಷ್ಟ. ಆದರೆ ಎಲ್ಲರನ್ನೂ ಒಂದಾಗಿಸುವ ಶಕ್ತಿ ಇರುವುದು ಬಿಗ್ ಬಾಸ್ ಶೋಗೆ ಮಾತ್ರ’ ಎಂದು ಈ ಪ್ರೋಮೋದಲ್ಲಿ ಹೇಳಲಾಗಿದೆ. ಇದಕ್ಕೆ ಎಲ್ಲೆಡೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.

ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಸ್ವಾಗತ ಎಂಬ ಧ್ವನಿಯೊಂದಿಗೆ ಕಿಚ್ಚ ಸುದೀಪ್ ಅವರು ಎಂಟ್ರಿ ನೀಡಿದ್ದಾರೆ. ಅವರನ್ನು ಪ್ರೋಮೋದಲ್ಲಿ ನೋಡಿ ಅಭಿಮಾನಿಗಳಿಗೆ ಬಹಳ ಖುಷಿ ಆಗಿದೆ. ‘ಹೊಸ ಸೆಟ್ ರೆಡಿ ಆಗಿದೆ, ಹೊಸ ಸ್ಪರ್ಧಿಗಳು ಕೂಡ ರೆಡಿ, 7 ಕೋಟಿ ಕನ್ನಡಿಗರೂ ರೆಡಿ. ಸರ್ ನೀವು ರೆಡಿನಾ’ ಎಂದು ಸುದೀಪ್ ಅವರಿಗೆ ಕೇಳಲಾಗಿದೆ. ಎಂದಿನ ಗತ್ತಿನಲ್ಲಿ ಸುದೀಪ್ ಕೂಡ ರೆಡಿ.. ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಸೆಪ್ಟೆಂಬರ್ 28ರ ಭಾನುವಾರದಂದು ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋ ಗ್ರ್ಯಾಂಡ್ ಓಪನಿಂಗ್ ಆಗಲಿದೆ. ಈ ಬಾರಿ ಯಾವೆಲ್ಲ ಸ್ಪರ್ಧಿಗಳು ಬರಬಹುದು ಎಂಬುದರ ಲೆಕ್ಕಾಚಾರ ಈಗಲೇ ಶುರುವಾಗಿದೆ. ಸುದೀಪ್ ಅವರು ಮಾರ್ಕ್ ಮತ್ತು ‘ಬಿಲ್ಲ ರಂಗ ಭಾಷಾ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ನಡುವೆಯೇ ಅವರು ಬಿಗ್ ಬಾಸ್ ಶೋ ನಡೆಸಿಕೊಡಲು ಸಜ್ಜಾಗಿದ್ದಾರೆ.

 

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss