Sandalwood: ಮದುವೆಯಾಗದೇ ತಾಯಿಯಾಗುವ ವಿಷಯಕ್ಕೆ ಸುದ್ದಿಯಾಗಿದ್ದ ಭಾವನಾ ಅವರು ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳು ಪಡೆಯಲು ನಿರ್ಧರಿಸಿದ್ದರು. ಆದರೆ ಇದೀಗ ಅವಳಿ ಮಕ್ಕಳು ಜನಿಸಿದ್ದು, ಅದರಲ್ಲಿ ಓರ್ವ ಮಗು ನಿಧನವಾಗಿದೆ. 1 ಮಗು ಬದುಕುಳಿದಿದೆ.
ನಟಿ ಭಾವನಾ ಅವರಿಗೆ 7ನೇ ತಿಂಗಳಲ್ಲಿ ಸಮಸ್ಯೆ ಕಾಣಿಸಿಕ“ಂಡಿತ್ತು. ಹಾಾಗಾಗಿಯೇ 8ನೇ ತಿಂಗಳಿಗೆ ಅವರಿಗೆ ಆಪರೇಷನ್ ಮಾಡಿ, ಹೆರಿಗೆ ಮಾಡಲಾಗಿದೆ. ಭಾವನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, 1 ಮಗು ಮೃತಪಟ್ಟಿದೆ. ಸದ್ಯ ತಾಯಿ ಮತ್ತು ಹೆಣ್ಣು ಮಗು ಕ್ಷೇಮವಾಗಿದೆ.
40ನೇ ವಯಸ್ಸಿಗೆ ಭಾವನಾ ರಾಮಣ್ಣ ವಿವಾಹವಾಗದೇ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ತುಂಬಾ ಸದ್ದು ಮಾಡಿತ್ತು. ಮಕ್ಕಳಿಗೆ ತಂದೆ ಇಲ್ಲದಿದ್ದರೆ, ಅವರ ಮುಂದಿನ ಭವಿಷ್ಯದ ಗತಿ ಏನು..? ಭಾವನಾ ಹೀಗೆ ಮಾಡೋದು ತಪ್ಪು ಅಂತೆಲ್ಲ ಚರ್ಚೆಯಾಗಿದ್ದವು. ಆದರೆ ಅವೆಲ್ಲವನ್ನೂ ಅವೈಡ್ ಮಾಡಿದ್ದ ಭಾವನಾ, ಮಕ್ಕಳಿಗೆ ಅಪ್ಪ ಇಲ್ಲದಿದ್ದರೇನಂತೆ. ನಾನು ಸಾಕಬಲ್ಲೆ ಎಂದು ಹೇಳಿದ್ದರು. ಅಲ್ಲದೇ ಯಾರು ಏನೇ ಹೇಳಿದರೂ, ನಾನು ತಾಯಿಯಾಗುವ ಬಗ್ಗೆ ನನಗೆ ಖುಷಿ ಇದೆ ಅಂತಾ ಭಾವನಾ ಹೇಳಿದ್ದರು.