ನಿಮ್ಮ Mobile ರಿಪೇರಿಗೆ ನೀಡುವ ಮುನ್ನ ಈ ಕೆಲಸ ಖಂಡಿತ ಮಾಡಿ

Tech Tips: ನಿಮ್ಮ ಸೆಲ್ ಫೋನ್ ಹಾಳಾಯಿತೆಂದು ನೀವು ಅದನ್ನು ರಿಪೇರಿ ಮಾಡಲು ಅಂಗಡಿಗೆ ಹೋಗಿ ನೀಡುತ್ತೀರಾ. ಬಳಿಕ ನಿಮ್ಮ ಸೆಲ್ ಫೋನ್ ರಿಪೇರಿ ಆಗಿ ತಂದ ಬಳಿಕ, ನಿಮಗೆ ಪದೇ ಪದೇ ಬೆದರಿಕೆ ಕರೆ ಬರುತ್ತದೆ. ಆಗ ನೀವೇನಾದರೂ ಎಚ್ಚರ ವಹಿಸದಿದ್ದಲ್ಲಿ, ನಿಮ್ಮ ಜೀವನದಲ್ಲಿನ ನೆಮ್ಮದಿಯೇ ಹಾಳಾಗುತ್ತದೆ. ಹಾಗಾದ್ರೆ ನೀವು ಸೆಲ್ ಫೋನ್ ರಿಪೇರಿಗೆ ನೀಡುವ ಮುನ್ನ ಏನು ಮಾಡಬೇಕು ತಿಳಿಯೋಣ ಬನ್ನಿ.

ನೀವು ನಿಮ್ಮ ಫೋನನ್ನು ರಿಪೇರಿಗೆ ನೀಡುವ ಮುನ್ನ ಸೆಟ್ಟಿಂಗ್ಸ್‌ಗೆ ಹೋಗಿ, ಅಲ್ಲಿ ರಿಪೇರ್ ಮೋಡ್ ಆನ್ ಮಾಡಬೇಕು ಅಷ್ಟೇ. ಇದರಿಂದ ನಿಮ್ಮ ಫೋನ್ ರಿಪೇರಿ ಮಾಡುವವರಿಗೆ ಬರೀ ವೈಫೈ ಮತ್ತು ಬ್ಲೂಟೂತ್ ಮಾತ್ರ ಬಳಸಬಹುದು. ಅಲ್ಲದೇ, ನಿಮ್ಮ ಬೇರೆ ಬೇರೆ ಡಾಟಾ ಆಗಲಿ, ಫೋಟೋ, ವೀಡಿಯೋ, ಚಾಟ್ಸ್ ಏನೇ ಪರ್ಸ್ನಲ್ ಇನ್‌ಫಾರ್ಮೇಷನ್ ಆಗಲಿ ನೋಡಲು ಸಾಧ್ಯವಿಲ್ಲ.

ಆದರೆ ಇದನ್ನು ತಿಳಿಯದ ಹಲವರು ಫೋನ್ ರಿಪೇರಿ ಮಾಡುವವರನ್ನು ನಂಬಿ, ತಮ್ಮ ಫೋನ್ ನೀಡಿ, ಮೋಸ ಹೋಗುತ್ತಾರೆ. ಇದರಿಂದಲೇ ಬೆದರಿಕೆ ಕರೆ, ಹಣ ಪೀಕುವ ಕೆಲಸವಾಗುತ್ತಿದೆ.

About The Author