Wednesday, October 15, 2025

Latest Posts

ರಾಜಣ್ಣ ಮಗನಿಗೆ ಬಾಲಕೃಷ್ಣ ಸವಾಲು

- Advertisement -

ರಾಜ್ಯ ಕಾಂಗ್ರೆಸ್‌ನೊಳಗೆ ಏನೋ ಸರಿ ಇಲ್ಲ ಅನ್ನುವುದು ಪದೇ ಪದೇ ಬಹಿರಂಗವಾಗುತ್ತಲೇ ಇದೆ. ಸಿಎಂ ಸಿದ್ದರಾಮಯ್ಯ ಆಪ್ತರ ನಡುವೆಯೇ ಶೀತಲ ಸಮರ ತಾರಕಕ್ಕೇರುತ್ತಿದೆ. ಸಿದ್ದು ಬಲಗೈ ಬಂಟ ಕೆ.ಎನ್‌. ರಾಜಣ್ಣ ಮತ್ತು ಮಾಗಡಿ ಶಾಸಕ ಹೆಚ್‌.ಸಿ. ಬಾಲಕೃಷ್ಣ ನಡುವೆ ಟಾಕ್‌ ವಾರ್‌ ಮುಂದುವರೆದಿದೆ.

ತಾವು ಸಿದ್ದರಾಮಯ್ಯ ಪರವಾಗಿದ್ದೇವೆ ಎಂಬ ಕಾರಣಕ್ಕೆ ಷಡ್ಯಂತ್ರ ಮಾಡಲಾಯಿತು ಅಂತಾ ರಾಜಣ್ಣ ಪುತ್ರ ರಾಜೇಂದ್ರ ಹೇಳಿದ್ರು. ಇದಕ್ಕೆ ತಿರುಗೇಟು ಕೊಟ್ಟಿರುವ ಹೆಚ್‌.ಸಿ ಬಾಲಕೃಷ್ಣ, ಕೆ.ಎನ್‌ ರಾಜಣ್ಣ ನಿಜಕ್ಕೂ ಸಿದ್ದರಾಮಯ್ಯ ಅವರ ಪರವಾಗಿದ್ದರೆ, ಮುಜುಗರವಾಗುವ ನಡವಳಿಕೆ ಪ್ರದರ್ಶಿಸುತ್ತಿರಲಿಲ್ಲ. ಎಐಸಿಸಿ ನಾಯಕರ ಬಗ್ಗೆ ಉಡಾಫೆ ಮಾತನಾಡುತ್ತಿರಲಿಲ್ಲ ಅಂತಾ ವ್ಯಂಗ್ಯವಾಡಿದ್ದಾರೆ.

ಯಾವ ಷಡ್ಯಂತ್ರವೂ ಇಲ್ಲ. ರಾಜಣ್ಣ ಮತ್ತು ಅವರ ಪುತ್ರ ರಾಜೇಂದ್ರ ಮಾತ್ರ ಸಿದ್ದರಾಮಯ್ಯ ಪರ ಅಲ್ಲ. ನಾವೂ ಅವರ ಶಿಷ್ಯರೇ. ಸಿಎಂ ಹೆಸರು ಹೇಳಿ ಓಲೈಕೆ ಮಾಡುವ ಬದಲು, ಅವರಿಗೆ ಮುಜುಗರ ತರುವಂತಹ ಕೆಲಸ ಮಾಡಿದ್ದು ಏಕೆ? ರಾಹುಲ್‌ ಗಾಂಧಿ ಪಾದಯಾತ್ರೆ ಬಗ್ಗೆ ಏಕೆ ಉಡಾಫೆ ಮಾತನಾಡಬೇಕಿತ್ತು? ಬಿಜೆಪಿಯವರಿಗಿಂತಲೂ ಕೆಟ್ಟದ್ದಾಗಿ ಸುರ್ಜೇವಾಲಾ ಬಗ್ಗೆ ಏಕೆ ಮಾತನಾಡಬೇಕಿತ್ತು.

ಅಸೆಂಬ್ಲಿಯಲ್ಲಿಆರ್‌ಎಸ್‌ಎಸ್‌ ಪ್ರಾರ್ಥನೆ ಹಾಡಿದ್ದಕ್ಕೆ, ಡಿಸಿಎಂ ಮೇಲೆ ಕ್ರಮ ಇಲ್ಲಎಂದು ಪ್ರಶ್ನಿಸುತ್ತಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ಕೊಟ್ಟು ಕ್ಷಮೆಯನ್ನೂ ಕೇಳಿದ್ದಾರೆ. ತಮ್ಮ ಪ್ರಕರಣವನ್ನು ಹೋಲಿಕೆ ಮಾಡಿಕೊಂಡು ಹೈಕಮಾಂಡ್‌ಗೆ ಸೆಡ್ಡು ಹೊಡೆಯುತ್ತೇವೆ. ಜನರನ್ನು ಕರೆದುಕೊಂಡು ದಿಲ್ಲಿಗೆ ಹೋಗುತ್ತೇವೆ. ನಮಗೆ ಯಾರೂ ಲೆಕ್ಕಕ್ಕಿಲ್ಲ ಎಂಬಂತೆ ಮಾತನಾಡುತ್ತಿದ್ದಾರೆ. ತಾವು ಬಾಯಿಗೆ ಬಂದಂತೆ ಮಾತನಾಡಿದ್ದಕ್ಕೆ ಪಶ್ಚಾತ್ತಾಪ ಪಡುವ ಬದಲು ಡಿ.ಕೆ ಶಿವಕುಮಾರ್‌ ಬಗ್ಗೆ ಮಾತನಾಡುವುದು ಸರಿಯಲ್ಲ. ಡಿಸಿಎಂ ತಮ್ಮ ಇತಿ ಮಿತಿ ಬಿಟ್ಟು ಏನೂ ಮಾಡಿಲ್ಲ.

ರಾಜಣ್ಣ ಬಿಜೆಪಿಗೆ ಸೇರಲು ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದ್ದೇನೆ. ಈ ಬಗ್ಗೆ ಬ್ರೈನ್‌ ಮ್ಯಾಪಿಂಗ್‌ಗೆ ನಾನು ರೆಡಿ ಇದ್ದೇನೆ. ಸಹಕಾರ ಸಚಿವರಾಗಿದ್ದ ರಾಜಣ್ಣ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷರಾಗಿ ಬಿಜೆಪಿಯವರನ್ನು ಏಕೆ ಉಳಿಸಿಕೊಂಡಿದ್ದರು? ಕಾಂಗ್ರೆಸ್‌ ಪಕ್ಷದವರನ್ನೇ ಅಧ್ಯಕ್ಷರಾಗಿ ಮಾಡಬಹುದಿತ್ತಲ್ಲವೇ? ಈ ಬಗ್ಗೆ ರಾಜಣ್ಣ ಸುಪುತ್ರ ರಾಜೇಂದ್ರ ಹೇಳಲಿ ಅಂತಾ ಶಾಸಕ ಬಾಲಕೃಷ್ಣ ಸವಾಲು ಹಾಕಿದ್ದಾರೆ.

- Advertisement -

Latest Posts

Don't Miss