Tuesday, September 23, 2025

Latest Posts

Tipturu : ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳ ಕಟ್ಟಡ ಕಾಮಗಾರಿ ವೀಕ್ಷಿಸಿದ ಶಾಸಕ ಕೆ.ಷಡಕ್ಷರಿ

- Advertisement -

ತಿಪಟೂರು : ನಗರದ ಹಲವು ಹೋಬಳಿ ಭಾಗಗಳಲ್ಲಿ ಸೇರಿದಂತೆ ಹಾಸನ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರೂಪಾಯಿ 5 ಕೋಟಿ ವೆಚ್ಚದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 18 ಕೊಠಡಿಯ 34 ಶೌಚಾಲಯ ಮತ್ತು ಸ್ನಾನ ಗೃಹವುಳ್ಳ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡ ಕಾಮಗಾರಿಯನ್ನು ಶಾಸಕ ಕೆ.ಷಡಕ್ಷರಿ ವೀಕ್ಷಿಸಿದರು.

ನಂತರ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ 50 ವಿದ್ಯಾರ್ಥಿಗಳ ಸಾಮರ್ಥ್ಯದ 14 ಕೊಠಡಿಗಳ ಕಟ್ಟಡದ ಕಾಮಗಾರಿ ವೀಕ್ಷಣೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 3 ಕೋಟಿ 75 ಲಕ್ಷ ವೆಚ್ಚದ 36 ಕೊಠಡಿಗಳ ವ್ಯವಸ್ಥೆವುಳ್ಳ 190 ವಿದ್ಯಾರ್ಥಿಗಳ ಸಾಮರ್ಥ್ಯದ ಬಾಲಕರ ವಸತಿಗೃಹದ ಕಟ್ಟಡ ಕಾಮಗಾರಿ ವೀಕ್ಷಿಸಿ ಗುಣಮಟ್ಟ ಪರಿಶೀಲಿಸಿದರು.

ನೊಣವಿನಕೆರೆ ಹೋಬಳಿಯ ಹುಲ್ಲೇನಹಳ್ಳಿ ಕಾವಲ್ ಗ್ರಾಮದಲ್ಲಿ ಹತ್ತು ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ 150 ಬಾಲಕ ಮತ್ತು 150 ಬಾಲಕಿಯರ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡದ ಕಾಮಗಾರಿಯನ್ನು ವೀಕ್ಷಣೆ ಮಾಡಿ ನಂತರ ಶಿಕ್ಷಕರ ಅತಿಥಿಗೃಹಗಳನ್ನು ಕಾಮಗಾರಿಯನ್ನು ಪರೀಶೀಲಿಸಿ ಇಲಾಖಾ ಅಧಿಕಾರಿಗಳ ಜೊತೆ ಸಭೆ ನಡೆಸಿ ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ, ಕರ್ನಾಟಕ ಹೌಸಿಂಗ್ ಬೋರ್ಡ್ ಇಲಾಖೆಯ ಇಂಜಿನಿಯರ್ ಜ್ಯೋತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ತ್ರಿವೇಣಿ, ಅಲ್ಪಸಂಖ್ಯಾತರ ಅಧಿಕಾರಿ ಮಹಬೂಬ್, ಹಾಗೂ ಭೂಮಾಪನ ಅಧಿಕಾರಿ ಪವನ್ಕುಮಾರ್, ಶಿಕ್ಷಕ ವೃಂದ, ಗ್ರಾಮಸ್ಥರು ಸೇರಿದಂತೆ ಉಪಸ್ಥಿತರಿದ್ದರು.

- Advertisement -

Latest Posts

Don't Miss