ಬಾಗಲಕೋಟೆ ಮಹಿಳೆಗೆ ನೈಜಿರಿಯನ್ ವ್ಯಕ್ತಿಯಿಂದ ಮೋಸ, 5,55,000 ರೂ.ದೋಚಿ ಪರಾರಿ, ಬಂಧನ

Bagalakote: ಬಾಗಲಕೋಟೆ: ಮ್ಯಾಟ್ರಿಮೋನಿಯಲ್ಲಿ ಸಿಕ್ಕಿದ್ದ ನೈಜಿರಿಯನ್ ವ್ಯಕ್ತಿಯನ್ನು ನಂಬಿ ಬಾಗಲಕೋಟೆಯ ಮಹಿಳೆ ಮೋಸ ಹೋದ ಘಟನೆ ನಡೆದಿದೆ. ಮದುವೆ ಮಾಡಿಕ“ಳ್ಳುವುದಾಗಿ ನಂಬಿಸಿ ವ್ಯಕ್ತಿ ಮೋಸ ಮಾಡಿದ್ದಾನೆ ಎನ್ನಲಾಗಿದೆ.

ಪ್ರಕರಣದ ಬಗ್ಗೆ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ. ಈ ಘಟನೆ ಕಳೆದ ವರ್ಷ ನಡೆದಿದೆ. ಆದರೆ ಆರೋಪಿಯನ್ನು ಈಗ ಬಂಧಿಸಲಾಗಿದೆ. ಬಾಗಲಕೋಟೆಯ ಇಳಕಲ್ ನಗರದ ಸುಕ್ಷಿತ ಎಂಬ ಮಹಿಳೆಗೆ ಈಗಾಗಲೇ ಮದುವೆ ಆಗಿ ಡಿವೋರ್ಸ್ ಆಗಿದೆ. ಹಾಗಾಗಿ ಆಕೆ ಎರಡನೇಯ ಮದುವೆಗೆ ಮ್ಯಾಟ್ರಿಮೋನಿಯಲ್ಲಿ ತನ್ನ ಡಿಟೇಲ್ಸ್ ಹಾಕಿದ್ದಳು. ಆಗ ತಾನು ಕೂಡ ವಧು ಹುಡುಕುತ್ತಿರುವೆ ಎಂದು ಈ ನೈಜಿರಿಯನ್ ವ್ಯಕ್ತಿ ಸತ್ ಅಮಿತ್ ಎಂದು ಹೆಸರು ಬದಲಾಯಿಸಿ, ಬೇರೆಯವರ ಫೋಟೋ ಹಾಕಿ ತನ್ನ ಪರಿಚಯ ಮಾಡಿಕ“ಂಡಿದ್ದ.ಆಲೀವರ್ ಉಗ್ವೋ ಒಕಿಚಿಕು (47) ಅನ್ನೋದು ಅವನ ಅಸಲಿ ಹೆಸರು.

ಹೀಗೆ ಸಲುಗೆ ಬೆಳೆದು, ತಾನು ಇಂಡಿಯಾಗೆ ಬಂದಿದ್ದೇನೆ. 1 ಕೋಟಿ ರೂಪಾಯಿ ಹಣ ತಂದಿದ್ದು, ಅದನ್ನು ತರಲು ಏರ್ಪೋರ್ಟ್‌ನಲ್ಲಿ ಹಣ ಕಟ್ಟಬೇಕು ಎಂದು ಹೇಳಿದ್ದಾನೆ. ಅಲ್ಲದೇ ಆಕೆಯ ಬಳಿಯೇ 5,55000 ರೂ. ದುಡ್ಡು ಕೇಳಿದ್ದಾನೆ. ಆತನನ್ನು ನಂಬಿ ಈಕೆ ಹಣ ಕಳುಹಿಸಿದ್ದಾಳೆ. ಬಳಿಕ ಅಕೌಂಟ್ ಕ್ಲೋಸ್ ಮಾಡಿದ್ದಾನೆ.

ಆಗ ಆತ ಮೋಸಗಾರ ಅನ್ನೋದು ಮಹಿಳೆಗೆ ತಿಳಿದಿದೆ. ಆಕೆ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ತನಿಖೆ ಕೈಗ“ಂಡ ಪೋಲೀಸರು ಹಣ ಕಳುಹಿಸಿದ ನಂಬರ್ ಟ್ರೇಸ್ ಮಾಡಿ, ಆರೋಪಿಯನ್ನು ಮುಂಬೈನಲ್ಲಿ ಬಂಧಿಸಿದ್ದಾರೆ.

About The Author