Thursday, October 16, 2025

Latest Posts

ಮುಲ್ಲಾಗಳನ್ನು ಅರೆಸ್ಟ್‌ ಮಾಡಿ ರಾಜ್ಯದಲ್ಲಿ ತಾಲಿಬಾನ್‌ ಆಡಳಿತ!

- Advertisement -

ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಿದ ಮುಲ್ಲಾಗಳು ಯಾರೇ ಆಗಲಿ ಅವರ ವಿರುದ್ಧ ಕೂಡಲೇ ಕ್ರಮವಾಗಬೇಕು ಹಾಗೂ ಮಸೀದಿಗಳನ್ನು ಮುಚ್ಚಿಸಬೇಕು ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆಗ್ರಹಿಸಿದರು.

ಮದ್ದೂರಿನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಮದ್ದೂರು ಶಾಸಕ ಕದಲೂರು ಉದಯ್ ಅವರಿಂದ ಹಣ ಪಡೆದು ಮತ ಮಾರಿಕೊಂಡಿದ್ದೀರಿ. ಜೂಜಾಟ ನಡೆಸುವವರನ್ನು ಗೆಲ್ಲಿಸಿದ್ದೀರಿ. ಅದಕ್ಕೇ ಇಂದು ಈ ಪರಿಸ್ಥಿತಿ ಎದುರಾಗಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ತಾಲಿಬಾನ್ ಆಡಳಿತ ನಡೆಯುತ್ತಿದೆ ಎಂದು ಪ್ರತಾಪ ಸಿಂಹ ಆರೋಪಿಸಿದರು. ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಘಟನೆಯಲ್ಲಿ ಹಲವಾರು ಮುಸ್ಲಿಂ ಯುವಕರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಗಳನ್ನು ಕಾಂಗ್ರೆಸ್ ಸರ್ಕಾರ ಹಿಂತೆಗೆದುಕೊಂಡಿದೆ. ಪೊಲೀಸರ ಬಂದೋಬಸ್ತ್ ಇದ್ದರೂ ಮದ್ದೂರಿನಲ್ಲಿ ಈ ರೀತಿಯ ಘಟನೆ ಸಂಭವಿಸಿರುವುದು ವಿಪರ್ಯಾಸ ಎಂದು ಹೇಳಿದರು.

ಬಂಧನಕ್ಕೊಳಗಾದ ಹಿಂದುತ್ವ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಜೊತೆಗೆ, ಗಣೇಶ ವಿಸರ್ಜನೆ ವೇಳೆ ಇದ್ದ ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡಿದ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss