Hubli News: ಹುಬ್ಬಳ್ಳಿ : ಎಲ್ಲೆಡೆ ಅಬ್ಬರಿಸಿ ಬೊಬ್ಬರಿದ ಮಳೆರಾಯನ ಆರ್ಭಟಕ್ಕೆ ಹುಬ್ಬಳ್ಳಿ ತಾಲೂಕಿನ ಎಲ್ಲೆಡೆ 18172.70 ಹೇಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂಬ ಮಾಹಿತಿಯನ್ನು ತಾಲೂಕು ಆಡಳಿತ ನೀಡಿದೆ.
ಮುಂಗಾರು ಆರಂಭದ ದಿನಗಳಿಂದ ಆಗಷ್ಟ್ ತಿಂಗಳವರೆಗೆ ಹುಬ್ಬಳ್ಳಿ ತಾಲೂಕಿನ ಎಲ್ಲೇಡೆ ವಾಡಿಕೆಗಿಂತ ಅಧಿಕ ಮಳೆ ಸುರಿದ ಹಿನ್ನೆಲೆಯಲ್ಲಿ 18001.36 ಹೇಕ್ಟರ್ ಹೆಸರು, 171.34 ಉದ್ದಿನ ಬೆಳೆ ಸೇರಿ ಒಟ್ಟು 18172.70 ಹೇಕ್ಟರ್ ಬೆಳೆ ಹಾನಿಯಾಗಿದೆ.
ಅದರಲ್ಲಿ ಶಿರಗುಪ್ಪಿ ಹೋಬಳಿ ವ್ಯಾಪ್ತಿಯಲ್ಲಿ 17970.38 ಹೇಕ್ಟರ್ ಹೆಸರು, 144.42 ಹೇಕ್ಟರ್ ಉದ್ದು, ಛಬ್ಬಿ ಹೋಬಳಿ ವ್ಯಾಪ್ತಿಯಲ್ಲಿ 39.98 ಹೇಕ್ಟರ್ ಹೆಸರು, 26.92 ಹೇಕ್ಟರ್ ಉದ್ದು ಹಾನಿಯಾದ ಮಾಹಿತಿ ಕರ್ನಾಟಕ ಟಿವಿ ‘ಗೆ ಲಭ್ಯವಾಗಿದೆ.
ಸದ್ಯ ಹಾಳಾದ ಬೆಳೆ ಪ್ರದೇಶವನ್ನು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ವಿವಿಧ ಇಲಾಖೆಗಳ ನೇತೃತ್ವದಲ್ಲಿ ವೀಕ್ಷಿಸಿದ್ದು, ಅನ್ನದಾತರ ಕೈಗೆ ಬೆಳೆ ಹಾನಿ, ಬೆಳೆ ವಿಮಾ ಪರಿಹಾರ ಸಿಗುವುದು ಬಾಕಿ ಇದೆ.



