Hubli News: ಹುಬ್ಬಳ್ಳಿ : ಬಸವ ವಸತಿ ಯೋಜನೆಯಡಿ ಫಲಾನುಭವಿಯಾಗಿ ನನ್ನನ್ನು ಆಯ್ಕೆ ಮಾಡಿ, ಮನೆ ನಿರ್ಮಾಣ ಪಟ್ಟಿಯಿಂದ ಹೆಸರು ಕೈ ಬಿಟ್ಟಿದ್ದಾರೆ ಎಂದು ಮಹಿಳೆಯೋರ್ವಳು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳ ಬಳಿ ನ್ಯಾಯ ಕೇಳಿದ್ದಾಳೆ.
ಹೌದು ! ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೇಷ್ಮಾ ದುಗ್ಗಾನಟ್ಟಿ ಎಂಬ ಮಹಿಳೆ ಆಗಷ್ಟ್.19 ರಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಈ ವಿಷಯಕ್ಕೆ ಮನವಿ ಸಲ್ಲಿಸಿದ್ದಾರೆ.
2023-24ನೇ ಸಾಲಿನ ಇಂಗಳಹಳ್ಳಿ ಗ್ರಾಮ ಪಂಚಾಯಿತಿ, ಗ್ರಾಮ ಸಭೆಯಲ್ಲಿ ರೇಷ್ಮಾ ದುಗ್ಗಾನಟ್ಟಿ ಎಂಬ ಮಹಿಳೆಯನ್ನು ಬಸವ ವಸತಿ ಯೋಜನೆಗೆ ಆಯ್ಕೆ ಮಾಡಿ, ಕೊನೆಗೆ ಮನೆ ನಿರ್ಮಾಣ ಪಟ್ಟಿಯಿಂದ ಕೈ ಬಿಟ್ಟು, ಬೇರೋಬ್ಬರ ಮನೆ ಜಿಪಿಎಸ್ ಮಾಡಿದ್ದಾರೆ ಎಂಬ ಆರೋಪ ಎತ್ತಿದ್ದಾರೆ.
ಒಟ್ಟಾರೆ ಗ್ರಾಮ ಪಂಚಾಯಿತಿಯಲ್ಲಿ ನ್ಯಾಯ ಸಿಗದೆ ತಾಲೂಕು ಪಂಚಾಯಿತಿ ಮೆಟ್ಟಿಲು ಏರಿದ ಮಹಿಳೆ, ಇದೀಗ ಮಾಧ್ಯಮಕ್ಕೆ ಮಾಹಿತಿ ನೀಡಿ ನಾವು ಕಡು ಬಡವರು ನ್ಯಾಯ ಕೊಡಿಸಿ ಎಂದಿದ್ದಾರೆ.



