Sandalwood: ಸಿನಿರಂಂಗಕ್ಕೆ ಬರಲು ರಾಜೇಶ್ ಧ್ರುವ ಅವರಿಗೆ ಮನೆಯವರ ಬೆಂಬಲವಿತ್ತಾ..? ಯಾರು ಹೇಗೆ ಬೆಂಬಲಿಸಿದರು. ಸಿನಿರಂಗಕ್ಕೆ ಬರುವ ಮುನ್ನ ತಾಯಿ ಹೇಳಿದ ಕಿವಿ ಮಾತೇನು ಅಂತಾ ಅವರೇ ಹೇಳಿದ್ದಾರೆ ನೋಡಿ.
ರಾಜೇಶ್ ಅವರ ತಂದೆಗೆ ಶುಗರ್ ಲೋ ಆಗಿ, ಇನ್ಸುಲಿನ್ ಓವರ್ ಡೋಸ್ ಆಗಿ, ಅವರು 16 ವರ್ಷ ಕೋಮಾದಲ್ಲಿದ್ದರು. ಹಾಗಾಗಿ ರಾಜೇಶ್ ಅವರನ್ನು ಸಾಕಿ ಬೆಳೆಸಿದ್ದು ಅಮ್ಮ. ಅಮ್ಮ ರಾಜೇಶ್ ಅವರ ಮೇಲೆ ನಂಬಿಕೆ ಇರಿಸಿ, ಅವರ ಡಾನ್ಸ್, ನಟನೆ ಸೇರಿ ಎಲ್ಲದಕ್ಕೂ ಬೆಂಬಲಿಸುತ್ತಿದ್ದರು.
ಅಲ್ಲದೇ ಅಮ್ಮ ರಾಜೇಶ್ ಅವರಿಗೆ ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸ ಮಾತ್ರ ಅರ್ಧಕ್ಕೆ ಬಿಡಬೇಡ. ಮುಂದೆ ವಿದ್ಯೆ ಮುಖ್ಯವಾಗಬಹುದು. ಡಿಗ್ರಿ ಮುಗಿಸಿಬಿಡು ಎಂದು ಕಿವಿ ಮಾತು ಹೇಳಿದ್ದರು. ಆದರೆ ರಾಜೇಶ್ ಅವರ ಮಾತು ಕೇಳದೇ, ಬಿಕಾಂ ಅರ್ಧಕ್ಕೆ ಮುಗಿಸಿ, ಬೆಂಗಳೂರಿಗೆ ಹೋದರು. ಆದರೆ ಕೋರೋನಾ ಸಮಯದಲ್ಲಿ ಅಮ್ಮನ ಮಾತು ಕೇಳಬೇಕಿತ್ತು ಅಂತಾ ಅನ್ನಿಸಿತ್ತಂತೆ. ವಿದ್ಯೆ ಇದ್ದಿದ್ದರೆ, ಕಂಪನಿಯಲ್ಲಾದರೂ ಕೆಲಸ ಸಿಗುತ್ತಿತ್ತು ಅಂತಾ ಅನ್ನಿಸಿದ್ದು ಸುಳ್ಳಲ್ಲ ಅಂತಾರೆ ರಾಜೇಶ್.
ನನಗೆ ರಂಗಭೂಮಿಯಲ್ಲಿ ಕೆಲಸ ಮಾಡಬೇಕು. ನಿನಾಸಂನಲ್ಲಿ ತರಬೇತಿಗೆ ಸೇರಬೇಕು ಎಂಬ ಮನಸ್ಸಿತ್ತು. ಆದರೆ ಕೆಲವರು ನನ್ನನ್ನು ಮಿಸ್ಗೈಡ್ ಮಾಡಿ, ಅಲ್ಲಿ ಹೋಗಬೇಕಾದರೆ, ಲಕ್ಷಾಂತರ ರೂಪಾಯಿ ಬೇಕು ಎಂದು ಹೇಳಿದರು. ಆದರೆ ಅಲ್ಲಿ ಹೋಗಲು ಬರೀ ಟ್ಯಾಲೆಂಟ್ ಅಷ್ಟೇ ಸಾಕಿತ್ತು. ಅಲ್ಲಿ ಹೋಗಿದ್ದರೆ, ಇನ್ನೂ ಹೆಚ್ಚು ಕಲಿಯುತ್ತಿದ್ದೆ ಎನ್ನಿಸುತ್ತದೆ ಎಂದು ರಾಜೇಶ್ ಹೇಳುತ್ತಾರೆ. ಅವರ ಸಂಪೂರ್ಣ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.




