Sandalwood: ರಾಜೇಶ್ ಧ್ರುವ ಅವರು ಕಲಾಪಯಣ ಮುಂದುವರಿಸಲು ಬೆಂಗಳೂರಿಗೆ ಬಂದು ಕಸ್ತೂರಿಯಲ್ಲಿ ಬರುತ್ತಿದ್ದ ಹೀರೋ ನಂಬರ್ 1 ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅದಾದ ಬಳಿಕ ಮತ್ತೆ ಊರಿಗೆ ಹೋಗಬೇಕು ಎಂದು ಧ್ರುವ ನಿರ್ಧರಿಸಿದರು. ಬಳಿಕ ಏನಾಯ್ತು ಅಂತಾ ಅವರೇ ಹೇಳಿದ್ದಾರೆ ನೋಡಿ.
ಅಗ್ನಿಸಾಕ್ಷಿ ಸಿರಿಯಲ್‌ನಲ್ಲಿ ಧ್ರುವ ಸಹೋದರನ ಪಾತ್ರ ಮಾಡಿ, ಮನೆ ಮಾತಾಗಿದ್ದರು. ಆದರೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಈ ಪಾತ್ರಕ್ಕೆ ಇಬ್ಬರೂ ಸೆಲೆಕ್ಟ್ ಆಗಿದ್ದರೂ, ಅದರಲ್ಲಿ ಇವರು ಮಾತ್ರ ರಿಜೆಕ್ಟ್ ಆಗಿ ಉಳಿದ ಇನ್ನ“ಬ್ಬನನ್ನು ಶೂಟಿಂಗ್‌ಗೆ ಕರೆಯಲಾಗಿತ್ತು. ಆದರೆ ಡೈರೆಕ್ಟರ್ ಕಿರುಚಾಟದಿಂದ ಆ ಹುಡುಗ, ಶೂಟಿಂಗ್ ಬಿಟ್ಟು ಹೋಗಿದ್ದ. ಹಾಗಾಗಿ ಆ ಅವಕಾಶ ನನಗೆ ಸಿಕ್ಕಿತ್ತು ಎಂದು ಧ್ರುವ ನೆನೆಸಿಕ“ಂಡಿದ್ದಾರೆ.
ಇನ್ನು ನವೆಂಬರ್ 1 ಅಂದ್ರೆ ಧ್ರುವ ಅವರ ಬರ್ತ್‌ಡೇ ದಿನವೇ, ಅವರು ಸಿರಿಯಲ್‌ಗೆ ಸೆಲೆಕ್ಟ್ ಆಗಲಿಲ್ಲವೆಂಬ ಸುದ್ದಿ ಬಂದಿತ್ತು. ಹಾಗಾಗಿ ಅವರು ಬರ್ತ್‌ಡೇ ದಿನವೇ ಸಪ್ಪೆಯಾಗಿದ್ದರು. ಆ ದಿನದಿಂದ ನವೆಂಬರ್ 15ನೇ ತಾರೀಖಿನವರೆಗೂ ಧ್ರುವ ಡಿಪ್ರೆಶನ್‌ನಲ್ಲೇ ಇದ್ದರು.
ನವೆಂಬರ್ 16ರಂದು ಧ್ರುವ ದೇವಸ್ಥಾನಕ್ಕೆ ಹೋಗಿ, ದೇವರ ಆಶೀರ್ವಾದ ಪಡೆದು, ದೇವಸ್ಥಾನದ ಅಂಗಳದಲ್ಲೇ ಇರುವಾಗ, ಅವರಿಗೆ ನೀವು ಸಿರಿಯಲ್‌ನ ಅಖಿಲ್ ಪಾತ್ರಕ್ಕೆ ಸೆಲೆಕ್ಟ್ ಆಗಿದ್ದೀರಿ ಎಂಬ ಕರೆ ಬಂತಂತೆ. ಆದರೆ ಅದನ್ನು ಧ್ರುವ ನಂಬಲೇ ಇಲ್ಲ. ಬಳಿಕ ಕನ್ಫರ್ಮ್ ಆಯಿತೆಂದು ತಿಳಿದಿದ್ದೇ ತಡ, ಯಾವುದೋ ಬಸ್ ಬುಕ್ ಮಾಡಿ, ತಕ್ಷಣ ಬೆಂಗಳೂರಿಗೆ ಬಂದು, ಶೂಟಿಂಗ್‌ಗೆ ಜಾಯಿನ್ ಆದರು. ಬಳಿಕ ಏನಾಯ್ತು ಅಂತಾ ತಿಳಿಯಲು ಅವರ ಸಂದರ್ಶನ ನೋಡಿ.




