Sandalwood: ನಟ ರಾಜೇಶ್ ಧ್ರುವ ಯಾವ ಊರಿನವರು..? ಇವರ ಹಿನ್ನೆಲೆ ಏನು..?

Sandalwood: ನಟ ರಾಜೇಶ್ ಧ್ರುವ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಾವು ಎಲ್ಲಿಯವರು, ಹಿನ್ನೆಲೆ ಏನು ಎಂಬ ಬಗ್ಗೆ ಹೇಳಿದ್ದಾರೆ.

ನಟ ರಾಜೇಶ್ ಧ್ರುವ ಅವರು ಮೂಲತಃ ಶಿರಸಿಯವರು. ಹೊನ್ನಾವರ ತಾಯಿಯೂರು, ಅಂಕೋಲಾ ತಂದೆಯೂರು. ಆದರೆ ರಾಜೇಶ್ ಬೆಳೆದದ್ದು ಮಾತ್ರ ಶಿರಸಿಯಲ್ಲಿ. ಮಾರಿಕಾಂಬಾ ಹೈಸ್ಕೂಲ್ ನಲ್ಲಿ ರಾಜೇಶ್ ಶಾಲೆ ಮುಗಿಸಿ, ಪಿಯು, ಬಿಕಾಂ ಕೂಡ ಶಿರಸಿಯಲ್ಲೇ ಓದಿದ್ದಾರೆ. ಆದರೆ ಬಿಕಾಂ ಮುಗಿಯುವ ಮುನ್ನವೇ ಧ್ರುವ ಕಾಲೇಜು ಬಿಟ್ಟು ಸಿನಿರಂಗಕ್ಕೆ ಬಂದರು.

ಅದಕ್ಕೂ ಮುನ್ನ ರಾಜೇಶ್ ಶಿರಸಿಯಲ್ಲೇ ಡಾನ್ಸರ್ ಆಗಿದ್ದರು. ಕ್ಲಾಸಿಗೆ ಹೋಗಿ ಡಾನ್ಸ್ ಕಲಿಯದಿದ್ದರೂ, ಧ್ರುವ ಚಂದವಾಗಿ ಡಾನ್ಸ್ ಮಾಡುತ್ತಿದ್ದರು. ಬಳಿಕ ಶಿರಸಿಯಲ್ಲೇ ತಮ್ಮದೇ ಆದ ಡಾನ್ಸ್ ಕ್ಲಾಸ್ ಓಪನ್ ಮಾಡಿ, ತರಬೇತಿ ನೀಡುತ್ತಿದ್ದರು. ಅದಾದ ಬಳಿಕ ಅವರು ತಮ್ಮ ಕಲಾ ಪಯಣ ಮುಂದುವರಿಸಲು ಬೆಂಗಳೂರಿಗೆ ಬಂದರು. ಸಂಪೂರ್ಣ ಸಂದರ್ಶನಕ್ಕಾಗಿ ಈ ವೀಡಿಯೋ ನೋಡಿ.

About The Author