Hubli News: ಹುಬ್ಬಳ್ಳಿ : ಹುಬ್ಬಳ್ಳಿ ನಗರದಾದ್ಯಂತ ಪಬ್ ಡ್ಯಾನ್ಸ್ ಬಾರ್‌ಗಳಲ್ಲಿ ಕಾನೂನು ಮೀರಿ ಚಟುವಟಿಕೆಗಳು ನಡೆಯುತ್ತಿದ್ದು ಕಡಿವಾಣ ಹಾಕುವಂತೆ AAP ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಪಾರ್ಟಿಯ ಹೆಸರಿನಲ್ಲಿ ಡ್ರಗ್ಸ್, ಗಾಂಜಾ, ಅಮಲು ಪದಾರ್ಥಗಳ ಸೇವನೆಯೊಂದಿಗೆ ಪಬ್ ಬಾರ್‌ಗಳು ಅನೈತಿಕ ಕೇಂದ್ರವಾಗುತ್ತಿದೆ. ಈ ಚಟುವಟಿಕೆಯಿಂದ ಹದಿಹರೆಯದ ಯುವಕ ಯುವತಿಯರು ಬಲಿಯಾಗುತ್ತಿದ್ದು ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಪಾರ್ಟಿಯ ಹೆಸರಿನಲ್ಲಿ ತಡರಾತ್ರಿ ತನಕ ಪಟ್ಗಳನ್ನು ತೆರೆದು ಮೋಜು ಮಸ್ತಿ ನಡೆಸುತ್ತಿದ್ದಾರೆ. ಆದ್ದರಿಂದ ತಕ್ಷಣ ಪೊಲೀಸ್ ಇಲಾಖೆ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುವ ಎಲ್ಲ ಪಬ್‘ಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು AAP ಪಕ್ಷದ ಕಾರ್ಯಕರ್ತರು ಆಗ್ರಹಿಸಿದ್ದಾರೆ .



