Finance Knowledge: ಹಣವನ್ನು ಗಳಿಸಿ, ಉಳಿತಾಯ ಮಾಡೋದು ಹಿಂದಿನ ಕಾಲದ ಮಾತು. ಇವತ್ತಿನ ಕಾಲದಲ್ಲಿ ಹಣವನ್ನು ಗಳಿಸಿ, ಉಳಿಸುವುದು ಮೂರ್ಖತನ. ಆ ಹಣವನ್ನು ಹೂಡಿಕೆ ಮಾಡಿದರೆ, ಮಾತ್ರ ಅದು ಬುದ್ಧಿವಂತಿಕೆ ಅಂತಾರೆ, ಹಣಕಾಸು ತಜ್ಞ ಹೇಮಂತ್ ಕುಮಾರ್. ಹಾಗಾದ್ರೆ ಹೇಮಂತ್ ಹೂಡಿಕೆ ಬಗ್ಗೆ ಏನೇನು ಹೇಳಿದ್ದಾರೆಂದು ತಿಳಿಯೋಣ ಬನ್ನಿ.
ಹೇಮಂತ್ ಕುಮಾರ್ ಅವರು ಹಣದುಬ್ಬರದ ಬಗ್ಗೆ ವಿವರಿಸಿದ್ದಾರೆ. ಇಂದು ನಾವು 50 ರೂಪಾಯಿ ನೀಡಿ ಊಟ ತಿಂಡಿ ಮಾಡುತ್ತಿದ್ದೇವೆ. ಆದರೆ ಮುಂದಿನ ವರ್ಷ ಆ ಊಟದ ಬೆಲೆ 60ರಿಂದ 70 ರೂಪಾಯಿ ಆಗಿರುತ್ತದೆ. ಈ ರೀತಿ ಪ್ರತೀ ವರ್ಷ ಹಣದುಬ್ಬರ ಹೆಚ್ಚುತ್ತಲೇ ಹೋಗುತ್ತದೆ. ಹಾಗಾಗಿಯೇ ಈ ಕಾಲದಲ್ಲಿ ಗಳಿಸಿ, ಹೂಡಿಕೆ ಮಾಡುವವನೇ ಬುದ್ಧಿವಂತ ಅಂತಾರೆ ಹೇಮಂತ್.
ಹಾಗಾಗಿ ಹಣವನ್ನು ಡಬ್ಬದಲ್ಲೋ, ಗುಲ್ಲಕದಲ್ಲೋ ಇಡುವ ಬದಲು ಅದನ್ನು ಹೂಡಿಕೆ ಮಾಡಿ. ನಾವು ಲಾಂಗ್ ಟರ್ಮ್ ಇನ್ವೆಸ್ಟ್‌ಮೆಂಟ್ ಮಾಡಿದ್ರೆ, ಉತ್ತಮವಾಗಿ ಲಾಭ ಗಳಿಸಬಹುದು. ಲಾಂಗ್ ಟರ್ಮ್ ಅಂದ್ರೆ 10 ರಿಂದ 15 ವರ್ಷಗಳ ಹೂಡಿಕೆ. ನೀವು ಇದೇ ವರ್ಷ ಹೂಡಿಕೆ ಮಾಡಿ, ಮುಂದಿನ ವರ್ಷ ಲಾಭ ಕೇಳಿದರೆ, ಹೆಚ್ಚು ಲಾಭ ಅಥವಾ ಲಾಭವೇ ಬಾರದೇ ಇರಬಹುದು. ಹಾಗಾಗಿ ಹೆಚ್ಚು ವರ್ಷ ಹೂಡಿಕೆ ಮಾಡಿದಷ್ಟು ಹೆಚ್ಚು ರಿಟರ್ನ್ಸ್ ಬರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.