Finance Knowledge: ಯಾರಿಗೆ ತಾನೇ ದುಡ್ಡು ಬೇಡಾ..? ಯಾರಿಗೆ ತಾನೇ ಶ್ರೀಮಂತಿಕೆ ಇಷ್ಟವಿಲ್ಲ..? ದುಡ್ಡು ಮಾಡೋದೇ ಇಂದಿನ ಕಾಲದ ಜನರ ಕೆಲಸವಾಗಿದೆ. ಯಾಕಂದ್ರೆ ದುಡ್ಡಿಲ್ಲ ಅಂದ್ರೆ ನಮ್ಮನ್ನ ನಾಯಿನೂ ಮೂಸಲ್ಲ. ಅಂದ ಮೇಲೆ ಮನೆ ಜನ ಪ್ರೀತಿಸ್ತಾರಾ..? ಖಂಡಿತ ಇಲ್ಲಾ. ದುಡ್ಡಿಲ್ಲದಿದ್ದಲ್ಲಿ, ಮನೆ ಜನರೇ ಅವಮಾನಿಸುವ ಈ ಜಮಾನಾದಲ್ಲಿ ದುಡ್ಡಿದ್ದವನಿಗೆ ಮಾತ್ರ ಬೆಲೆ. ಹಾಗಾದ್ರೆ ಶ್ರೀಮಂತರಾಗೋಕ್ಕೆ ಏನು ಮಾಡಬೇಕು..? ಎಮರ್ಜನ್ಸಿ ಫಂಡ್ ಏಕೆ ಬೇಕು ಎಂಬೆಲ್ಲ ವಿಷಯಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..
ಹಣಕಾಸು ತಜ್ಞ ಹೇಮಂತ್ ಕುಮಾರ್ ಅವರು ಈ ಬಗ್ಗೆ ವಿವರಿಸಿದ್ದು, ಕೋರೋನಾ ಸಮಯದಲ್ಲಿ ನಾವೆಲ್ಲ ಜೀವನ ಅಂದ್ರೇನು ಅಂತಾ ತಿಳಿದಿದ್ದೇವೆ. ಆ ಸಮಯದಲ್ಲಿ ದುಡ್ಡನ್ನು ಉಳಿಸಿ, ಕೂಡಿಡುವುದು ಎಷ್ಟು ಮುಖ್ಯ ಅನ್ನೋದನ್ನ ಕಲಿತಿದ್ದೇವೆ. ಇಂಥ ಸಮಯದಲ್ಲಿ ಬಳಕೆಗೆ ಬರುವ ದುಡ್ಡೇ ಎಮರ್ಜನ್ಸಿ ಫಂಡ್.
ಕೆಲವರು ಆ ರೀತಿ ಹಣ ಕೂಡಿಡದೇ ಇದ್ದಿದ್ದಕ್ಕೆ, ಸಮಸ್ಯೆ ಬಂದು, ತಮ್ಮ ತಮ್ಮ ಊರು ಸೇರಿಕ“ಂಡರು. ಕೆಲವರು ಸಾಲ ಮಾಡಿದರು. ಕೆಲವರು ಹಲವು ಸಮಸ್ಯೆಗಳನ್ನು ಎದುರಿಸಿದರು. ಆದರೆ ಅವರ ಬಳಿ ಎಮರ್ಜೆನ್ಸಿ ಫಂಡ್ ಇದ್ದಿದ್ದರೆ ಅವರಿಗೆ ಆ ಪರಿಸ್ಥಿತಿ ಬರುತ್ತಿರಲಿಲ್ಲ. ಮುಂಚೆ ಎಲ್ಲ ಅಮ್ಮಂದಿರು, ತಮ್ಮ ಬಳಿ ಇದ್ದ ಹಣವನ್ನು ಸಾಸಿವೆ ಡಬ್ಬದಲ್ಲೋ, ಬೀರುವಿನಲ್ಲೋ ಎಲ್ಲೋ ಎತ್ತಿಡುತ್ತಿದ್ದರು. ಮುಂದೆ ಪತಿಗೆ, ಮಕ್ಕಳಿಗೆ ಸಮಸ್ಯೆ ಬಂದಾಗ, ಆ ಹಣವನ್ನು ನೀಡುತ್ತಿದ್ದರು.
ಆದರೆ ಈಗ ಹಣ ಕೂಡಿಡುವ ರೀತಿ ಬೇರೆಯಾಗಿದೆ. ಆದರೆ ಅದು ಕೂಡ ಅಮ್ಮ ಕೂಡಿಡುತ್ತಿದ್ದ ದುಡ್ಡಿನ ರೀತಿ ಎಮರ್ಜೆನ್ಸಿ ಫಂಡ್. ಹಾಗಾದ್ರೆ ಈಗಿನ ಕಾಲದಲ್ಲಿ ಎಮರ್ಜೆನ್ಸಿ ಫಂಡ್ ಕೂಡಿಡೋದು ಹೇಗೆ ಅಂತಾ ಹಣಕಾಸು ತಜ್ಞ ಹೇಮಂತ್ ಅವರು ವಿವರಿಸಿದ್ದಾರೆ. ಪೂರ್ತಿ ವಿವರಣೆಗಾಗಿ ವೀಡಿಯೋ ನೋಡಿ.




