International News: ಪ್ರೆಸ್‌ಮೀಟ್ ನಡೆಯುತ್ತಿದ್ದ ವೇಳೆ ಸ್ವೀಡನ್ ನ ನೂತನ ಆರೋಗ್ಯ ಸಚಿವೆ ಎಲಿಜಬೇತ್ ಲ್ಯಾನ್(48) ವೇದಿಕೆಯಲ್ಲೇ ಕುಸಿದು ಬಿದ್ದಿದ್ದಾರೆ.
ಪ್ರೆಸ್‌ಮೀಟ್ ನಡೆಯುತ್ತಿದ್ದ ವೇಳೆ ಲ್ಯಾನ್ ಸ್ವಿಡೀಶ್ ಪ್ರಧಾನಿ ಉಲ್ಫ್ ಮತ್ತು ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಪಕ್ಷದ ನಾಯಕಿ ಎಬ್ಬಾ ಬುಷ್ ಮಧ್ಯ ನಿಂತಿದ್ದರು. ಈ ವೇಳೆ ಪತ್ರಕರ್ತರು ಪ್ರಶ್ನೆ ಕೇಳುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಲ್ಯಾನ್ ಕುಸಿದು ಬಿದ್ದಿದ್ದಾರೆ.
ಬಳಿಕ ಅಲ್ಲೇ ಇದ್ದ ಪತ್ರಕರ್ತರು, ಇನ್ನಿತರರು ಸೇರಿ, ಆಕೆಯನ್ನು ಕೂರಿಸಿ, ನೀರು ಕುಡಿಸಿದ್ದಾರೆ. ಬಳಿಕ ಸುಧಾರಿಸಿಕಂಡು ಪ್ರೆಸ್‌ಮೀಟ್ ಮುಂದುವರಿಸಿದ್ದಾರೆ. ಅಲ್ಲದೇ, ಹಲವು ವಿಷಗಳ ಬಗ್ಗೆ ಮಾತನಾಡಿದ್ದಾರೆ.
ಲ್ಯಾನ್ ಹೀಗೆ ಬೀಳಲು ಏನು ಕಾರಣವೆಂದು ತಿಳಿದುಬಂದಿಲ್ಲ. ಆದರೆ ಅವರಿಗೆ ಲೋ ಬಿಪಿ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನು ಅವರು ಈ ರೀತಿ ಬೀಳುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Swedish Health Minister Elisabet Lann has collapsed during a press conference. No known condition as of yet. pic.twitter.com/SNIVANYlCX
— Trending Now ON X (@TrendingNowVidz) September 9, 2025




