Gokak News: ಗೋಕಾಕ: ಗೋಕಾಕ್‌ನಲ್ಲಿ ವೃದ್ಧ ರೈತನೋರ್ವ ಆರ್‌ಸಿ ಬುಕ್ ಮಾಡಲು ಆರ್‌ಟಿಓ ಕಚೇರಿಗೆ ಹೋಗುತ್ತಿದ್ದಾರೆ. ಆದರೆ ಕಚೇರಿಯಲ್ಲಿ ಕೆಲಸವೇ ಆಗುತ್ತಿಲ್ಲ. ಹೀಗಾಗಿ ಅಲೆದಾಡಿ ಸಾಕಾಗಿ ಹೋಗಿದ್ದ ವೃದ್ಧ ಇಂದು ಅಧಿಕಾರಿಯ ಕಾಲಿಗೆ ಬಿದ್ದಿದ್ದಾರೆ.
ಭೀಮಪ್ಪ ಬಂಡ್ರೋಳ್ಳಿ ಎಂಬ ವೃದ್ಧನ ಆರ್‌ಸಿ ಬುಕ್ ಕಳೆದುಹೋಗಿದೆ. ಹೀಗಾಗಿ ಬೇರೆ ಬುಕ್ ಮಾಡಲು ಆತ ಕಚೇರಿಗೆ 2 ವರ್ಷದಿಂದ ಅಲೆದಾಡುತ್ತಿದ್ದಾರೆ. ಆದರೆ ಕಚೇರಿಯಲ್ಲಿ ದಲ್ಲಾಳಿಗಳಲ್ಲೇ ದರ್ಬಾರ್ ನಡೆದಿದ್ದು, ಪದೇ ಪದೇ ಕಚೇರಿಗೆ ಬರುವಂತೆ ಮಾಡುತ್ತಿದ್ದಾರೆ.
ಇಂದು ಕಚೇರಿಗೆ ಬಂದು ಬಂದು ಸಾಕಾಗಿ, ಉತ್ತರಕರ್ನಾಟಕ ಅಪರ ಸಾರಿಗೆ ಆಯುಕ್ತರಾಗಿರುವ ಕೆ.ಹಾಲಸ್ವಾಮಿ ಅವರ ಕಾಲಿಗೆ ಬಿದ್ದು, ಕೆಲಸ ಮಾಡಿಕ“ಡಿ ಇಲ್ಲವಾದಲ್ಲಿ, ನೇಣು ಹಾಕಿಕ“ಳ್ಳಲು ಹಗ್ಗ ನೀಡಿ ಎಂದು ಬೇಡಿದ್ದಾರೆ. ವಯಸ್ಸಾದ ವೃದ್ಧರಿಗೆ ಸರಿಯಾಗಿ ಸಹಾಯ ಮಾಡಬೇಕಾದವರೇ ಹೀಗೆ ಮಾಡಿದರೇನು ಗತಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.