Hubli News: ಹುಬ್ಬಳ್ಳಿ : ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ರಸ್ತೆಗಳ ಜವಾಬ್ದಾರಿ ಹೊತ್ತ ಲೋಕೋಪಯೋಗಿ ಇಲಾಖೆ ಕುರ್ಚಿಗಳು ಸರ್ಕಾರಿ ಕರ್ತವ್ಯದ ಅವಧಿಯಲ್ಲೇ ಖಾಲಿ ಖಾಲಿಯಾಗಿವೆ.
ಹೌದು ! ಹುಬ್ಬಳ್ಳಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಧ್ಯಾಹ್ನ 3 ಗಂಟೆ 20 ನಿಮಿಷಕ್ಕೆ ಹೋದರೆ ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ಚೇಂಬರ್, ಆಡಳಿತ ಶಾಖೆ, ಇಂಜಿನಿಯರ್ ವಿಭಾಗ, ಮೀಟಿಂಗ್ ಹಾಲ್ ಎಲ್ಲಾ ವಿಭಾಗದಲ್ಲೂ ಅಧಿಕಾರಿಗಳ ಕುರ್ಚಿ ಖಾಲಿ ಖಾಲಿ ಆಗಿದ್ದವು.
ಈ ಬಗ್ಗೆ ಸಂಬಂಧಪಟ್ಟ ಲೋಕೋಪಯೋಗಿ ಮುಖ್ಯ ಕಾರ್ಯ ನಿರ್ವಾಹಕ ಇಂಜಿನಿಯರ್ ಸುಧಾಕರ್ ಕಟ್ಟಿಮನಿ ಅವರನ್ನೂ ಕೇಳಿದ್ರೆ ಧಾರವಾಡದಲ್ಲಿ ಮೀಟಿಂಗ್ ಇದೆ, ಎಲ್ಲಾ ಸಹಾಯಕ ಇಂಜಿನಿಯರ್ ಇಲ್ಲೇ ಇದ್ದೇವೆ. ಮತ್ತು ಆಡಳಿತ ಶಾಖೆ ಅಧಿಕಾರಿಗಳು ಕೋರ್ಟ್ ಆರ್.ಟಿ.ಐ ಮೇಲ್ಮನವಿ ಇದೆ ಹೋಗಿದ್ದಾರೆ ಎಂದರು.
ಮುಖ್ಯವಾಗಿ ವಾಣಿಜ್ಯ ನಗರಿ ಸ್ಮಾರ್ಟ್ ಸಿಟಿ ಎಂಬ ಖ್ಯಾತಿ ಹೊತ್ತ ಹುಬ್ಬಳ್ಳಿ ಲೋಕೋಪಯೋಗಿ ಉಪ ವಿಭಾಗದ ಕಚೇರಿಯಲ್ಲಿ ಆಡಳಿತ ನಿರ್ವಹಣೆ, ಕಾಗದ ಪತ್ರ ವಿಚಾರಣೆಗಾದರೂ ಒಬ್ಬ ಅಧಿಕಾರಿ ಇರಲೇಬೇಕು ಅವರು ಸಹ ಇರಲಾರದೆ ಕುರ್ಚಿ ಖಾಲಿ ಖಾಲಿ ಇರುವುದು ವಿಪರ್ಯಾಸ ಎನಿಸಿತು.
ಮುಖ್ಯವಾಗಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಕೊಠಡಿ ಅಧಿಕಾರಿಗಳ ದಿನಚರಿ ನಾಮಫಲಕ ಖಾಲಿ ಇದ್ರೇ, ಇತ್ತ ಕಚೇರಿಯಲ್ಲಿ ಎಲ್ಲಿಯೂ ಬಯೋಮೆಟ್ರಿಕ್ ಕಾಣಲೇ ಇಲ್ಲಾ.
ಒಟ್ಟಾರೆ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್, ಜವಾನ್, ಕಾವಲುಗಾರ, ಸ್ವೀಪರ್ ಮಾತ್ರ ಕಚೇರಿ ಬಾಗಿಲು ತೆರೆದು ಕೂತಿದ್ದರು.
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ



