ಮದ್ದೂರಲ್ಲಿ ಯತ್ನಾಳ್ ತಾನು ಹಿಂದೂ ಹುಲಿ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಫೈರ್ ಬ್ರ್ಯಾಂಡ್ ಮಾತುಗಳು ಹಿಂದೂಗಳ ನರನಾಡಿಗಳಲ್ಲೂ ಸಂಚಲನವನ್ನೇ ಸೃಷ್ಟಿಸಿದೆ. ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಬಿಜೆಪಿಗೆ ಸಿಂಹಸ್ವಪ್ನವಾದ್ರಾ? ಖುದ್ದು ಅಮಿತ್ ಶಾ ಅದೊಂದು ವಿಡಿಯೋ ನೋಡಿ ಖುಷಿ ಆದ್ರಾ? ಕರ್ನಾಟಕ ಬಿಜೆಪಿ ಮಟ್ಟಿಗೆ ಭವಿಷ್ಯಕ್ಕೊಂದು ಬ್ರಹ್ಮಾಸ್ತ್ರದ ಅಗತ್ಯವಿತ್ತು. ಅದು ಒಬ್ಬ ಯತ್ನಾಳ್ ಅವರಿಂದ ಸಾಧ್ಯ ಎಂಬ ನಿರ್ಧಾರಕ್ಕೆ ದೆಹಲಿ ಬಿಜೆಪಿ ಬರೋದಕ್ಕೆ ಸಾಕ್ಷಿ ಆಗಿದ್ದು ಮದ್ದೂರಿನಲ್ಲಿ ಕಂಡ ಯತ್ನಾಳ್ ಫ್ಯಾನ್ ಬೇಸ್.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಂದಿದ್ರೂ, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಬಂದಿದ್ರೂ ಇಷ್ಟು ಜನ ಸೇರಿರಲಿಲ್ಲ. ಇಡೀ ರಾಜ್ಯ ಬಿಜೆಪಿ ನಾಯಕರೇ ಬಂದಿದ್ರೂ ಸಿಂಗಲ್ ಆಗಿ ಎಂಟ್ರಿ ಕೊಟ್ಟಿದ್ದ ಯತ್ನಾಳ್ ಅವರನ್ನ ನೋಡೋಕೆ ಎಷ್ಟು ಜನಸಾಗರ ನೆರೆದಿತ್ತು. ಯತ್ನಾಳ್ ಅವರ ಭಾಷಣ ಕೇಳೋದಕ್ಕೆ ಹಿಂದೂ ಪರ ಸಂಘಟನೆಗಳ 10 ಸಾವಿರಕ್ಕೂ ಮಿಗಿಲಾದ ಜನಸ್ತೋಮ ಮದ್ದೂರಿನಲ್ಲಿ ಸೇರಿತ್ತು. ಇದೇ ಫ್ಯಾನ್ ಬೇಸ್ ಇದೀಗ ರಾಜ್ಯ ಬಿಜೆಪಿಯ ಬಹುಪಾಲು ಜನರ ಕಣ್ತೆರೆಸುತ್ತಿದೆ ಎಂದೇ ಹೇಳಲಾಗುತ್ತಿದೆ.
ದೆಹಲಿಗೆ ಯತ್ನಾಳ್ ಅಲೆಯ ವರದಿ ಕಳಿಸುವಂತೆ ಹೈಕಮಾಂಡ್ ಸಂದೇಶ ನೀಡುವ ಸಾಧ್ಯತೆ ಇದೆ. ಇದು ಬಸನಗೌಡ ಪಾಟೀಲ್ ಯತ್ನಾಳ್ ರನ್ನ ಬಯಸೋ ಬಿಜೆಪಿಯೊಳಗಿನ ದೊಡ್ಡ ಪಡೆ ಅಮಿತ್ ಶಾ ಅವರಿಗೆ ಮಹತ್ವದ ಮಾಹಿತಿ ಕಳುಹಿಸಿಕೊಟ್ಟಿದೆಯಂತೆ. ಒಬ್ಬೇ ಒಬ್ಬ ಯತ್ನಾಳ್ ಬಿಜೆಪಿಯ ಸಾರಥಿ ಆದ್ರೆ ರಾಜ್ಯದಲ್ಲಿ ದಾಖಲೆ ಅನ್ನೋ ರೀತಿಯಲ್ಲಿ ಫಸ್ಟ್ ಟೈಮ್ ಏಕಾಂಗಿಯಾಗಿ ಬಹುಮತವನ್ನ ಬಿಜೆಪಿ ಪಡೆಯುತ್ತೆ ಅನ್ನೋ ಸಿಂಗಲ್ ಲೈನ್ ಸಂದೇಶವನ್ನ ರಾಜ್ಯದ ಹಿರಿಯ ಹಾಗೂ ಕೇಂದ್ರ ಸಚಿವರೊಬ್ಬರು ನೀಡಿದ್ದಾರೆ ಎನ್ನಲಾಗುತ್ತಿದೆ.
2028ಕ್ಕೆ ಇದೇ ಯತ್ನಾಳ್ ಅಲೆಯನ್ನೂ ಬಿಜೆಪಿಯ ಫೋರ್ಸ್ ಆಗಿ ಬಳಸಿಕೊಂಡ್ರೆ ಕಮಲ ಏಕಾಂಗಿ 115 ಸ್ಥಾನ ಗಳಿಸಲಿದೆ ಎಂಬುದು ರಾಜ್ಯದ ಕೇಂದ್ರ ಸಚಿವರೊಬ್ಬರ ಭವಿಷ್ಯ ಎನ್ನಲಾಗುತ್ತಿದೆ. ಒಂದು ವೇಳೆ ಈಗಿನ ಬಿಜೆಪಿ ಘಟಕವೇ ಮುಂದುವರೆದರೇ 80 ಗಡಿ ದಾಟಬಹುದಷ್ಟೇ ಎಂಬುದು ಆ ಕೇಂದ್ರದ ಮಂತ್ರಿಯ ಲೆಕ್ಕಾಚಾರ. ಹಾಗಿದ್ರೆ ಯತ್ನಾಳ್ ಮತ್ತೆ ಬಿಜೆಪಿಗೆ ಕಾಲಿಟ್ಟು ಸಾರಥ್ಯ ವಹಿಸಿಕೊಂಡರೇ 115 ಸ್ಥಾನ ಗೆಲ್ಲುತ್ತಾ ಕಮಲ ಪಕ್ಷ ಅನ್ನೋದು ಈಗ ಚರ್ಚೆಯಾಗುತ್ತಿದೆ. ಯತ್ನಾಳ್ ಹಾಗೂ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ.