Health Tips: ಬೆಳಿಗ್ಗೆ ಎದ್ದ ತಕ್ಷಣ ನಿಮಗೆ ನಿಶ್ಶಕ್ತಿಯಾಗಿ, ಸುಸ್ತಾದಂತೆ ಫೀಲ್ ಆಗುತ್ತಿರಬಹುದು. ಇದಕ್ಕೆ ಕಾರಣ, ನಾವು ಕೆಲ ವರ್ಷಗಳ ಹಿಂದೆ ಮಾಡಿದ ತಪ್ಪು. ಆ ತಪ್ಪು ಏನಂದ್ರೆ, ಖಾಲಿ ಹೊಟ್ಟೆಯಲ್ಲಿ ಕೆಲವು ಆಹಾರ ಸೇವನೆ ಮಾಡೋದು. ಹಾಗಾದ್ರೆ ಯಾವ ಆಹಾರ ನಾವು ಸೇವಿಸಬಾರದು..? ಅದರಿಂದ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ.
ನಾವು ಬೆಳಿಗ್ಗೆ ಎದ್ದಾಗ ನಮ್ಮ ಉದರದಲ್ಲಿ ಅದಾಗಲೇ ಆ್ಯಸಿಡ್ ಇರುತ್ತದೆ. ಹೀಗಿರುವಾಗ ನೀವು ಬೆಳಿಗ್ಗೆ ಚಹ, ಕಾಫಿ ಸೇವಿಸಿದರೆ, ಅದರ ಪ್ರಮಾಣ ಹೆಚ್ಚಾಗುತ್ತದೆ. ಮತ್ತು ಇದೇ ಅಭ್ಯಾಸ ಮುಂದುವರಿದಂತೆ ನಿಮ್ಮ ದೇಹದಲ್ಲಿ ನಿಶ್ಶಕ್ತಿ ಪ್ರಮಾಣ ಹೆಚ್ಚಾಗುತ್ತದೆ.
ಹಾಗಾಗಿ ನೀವು ಬೆಳಿಗ್ಗೆ ಎದ್ದ ತಕ್ಷಣ ಚಹಾ, ಕಾಫಿ ಸೇವಿಸುವ ಬದಲು, ಡ್ರೈಫ್ರೂಟ್ಸ್ ಅಥವಾ ಫ್ರೆಶ್ ಫ್ರೂಟ್ಸ್ ಸೇವಿಸಿ. ಬಳಿಕ ತಿಂಡಿ ತಿಂದು ಚಹಾಾ, ಕಾಫಿ ಸೇವಿಸಿ.
ಇನ್ನು ಎರಡನೇಯ ತಪ್ಪು ತಿಂಡಿ ತಪ್ಪಿಸುವುದು. ಬೆಳಿಗ್ಗೆ ಅದೆಷ್ಟೋ ಜನ ತಿಂಡಿ ತಿನ್ನುವುದನ್ನೇ ಸ್ಕಿಪ್ ಮಾಡುತ್ತಾರೆ. ಇದರಿಂದ ಅವರ ಆರೋಗ್ಯ ಹಾಳಾಗುತ್ತದೆ. ಕೆಲವರು ತಿಂಡಿ ಸ್ಕಿಪ್ ಮಾಡುವುದರಿಂದ ಕ್ಯಾಲೋರಿ ಕಡಿಮೆಯಾಗುತ್ತದೆ ಎಂದು ತಿಳಿಯುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ನೀವು ಬೆಳಿಗ್ಗೆ ತಿಂಡಿಗೆ ಕಡಿಮೆ ಕ್ಯಾಲೋರಿ ಇರುವ ಆಹಾರವನ್ನೇ ಸೇವಿಸಿ. ಆದರೆ ಎಂದಿಗೂ ತಿಂಡಿ ಮಾತ್ರ ಸ್ಕಿಪ್ ಮಾಡಬೇಡಿ.
ಮೂರನೇಯ ತಪ್ಪು ಎದ್ದ ಹಾಗೆ ಪೇನ್ ಕಿಲ್ಲರ್ ಮಾತ್ರೆ ಸೇವಿಸುವುದು. ಇದರಿಂದ ಆರೋಗ್ಯಕ್ಕೆ ತುಂಬಾ ಹಾನಿಯುಂಟಾಗುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಎಂದಿಗೂ ವೈದ್ಯರ ಸೂಚನೆ ಇಲ್ಲದೇ, ಯಾವುದೇ ಮಾತ್ರೆ ಸೇವಿಸಬೇಡಿ.
ಇದರ ಸೇವನೆಯಿಂದ ನಮ್ಮ ಹೃದಯ ವೀಕ್ ಆಗುತ್ತದೆ. ರಕ್ತನಾಳದಲ್ಲಿ ರಕ್ತ ಪರಿಚಲನೆ ನಿಧಾನವಾಗುತ್ತದೆ. ಹಾಗಾಗಿ ಹೃದಯ ನಿಶ್ಶಕ್ತಿಯಾದಾಗ, ನಮಗೂ ಸುಸ್ತಾಗುತ್ತದೆ. ಹೀಗಾದಾಗ ನಮಗೆ ಲೋ ಬಿಪಿ, ಹೈ ಬಿಪಿ, ಶುಗರ್, ಹೃದಯ ಸಮಸ್ಯೆ ಬರುವ ಸಾಧ್ಯತೆಗಳಿರುತ್ತದೆ.
ಹಾಗಾಗಿ ನಾವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳ ಸೇವನೆ ಎಂದಿಗೂ ಮಾಡಬಾರದು. ಅಲ್ಲದೇ, ಇದರಿಂದ ದೇಹದ ತೂಕ ಅನಾರೋಗ್ಯಕರ ರೀತಿಯಿಂದ ಹೆಚ್ಚಾಗುತ್ತದೆ.