Monday, November 17, 2025

Latest Posts

ಬಸವಣ್ಣರನ್ನು ಈ ಪರಿ ಅವಮಾನಿಸಿದ್ದಕ್ಕಾಗಿ ಕಾರಜೋಳ ಅವರು ಕ್ಷಮೆ ಕೇಳಬೇಕು: ಪ್ರಿಯಾಂಕ್ ಖರ್ಗೆ

- Advertisement -

Political news: ಮಾಜಿ ಸ್ಪೀಕರ್ ಗೋವಿಂದ ಕಾರಜೋಳ ಅವರು, ಪ್ರಧಾನಿ ಮೋದಿ ಅವರನ್ನು ಅಭಿನವ ಬಸವಣ್ಣ ಎಂದು ಹೇಳಿದ್ದಾರೆ. ಈ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಬಸವಣ್ಣರನ್ನು ಈ ಪರಿ ಅವಮಾನಿಸಿದ್ದಕ್ಕಾಗಿ ಕಾರಜೋಳ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಜಗಜ್ಯೋತಿ ಬಸವಣ್ಣನವರನ್ನು ಈ ಪರಿ ಅವಮಾನಿಸಿರುವ ಶ್ರೀ ಗೋವಿಂದ ಕಾರಜೋಳರವರು ಕನ್ನಡಿಗರ ಕ್ಷಮೆ ಕೇಳಬೇಕು. ಮೋದಿಯವರು ಅಭಿನವ ಬಸವಣ್ಣ ಆಗುವುದಿರಲಿ, ಬಸವಣ್ಣನವರ ತತ್ವಗಳನ್ನಾದರೂ ಪಾಲಿಸಿದ್ದಾರೆಯೇ? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

ಕಳಬೇಡ ಕೊಲಬೇಡ ಎಂದಿದ್ದರು ಬಸವಣ್ಣ, ಆದರೆ ಇವರು ಮತಗಳ್ಳತನದಲ್ಲೇ ಬದುಕಿದ್ದಾರೆ, ನೋಟ್ ಬ್ಯಾನಿನಲ್ಲಿ, ರೈತರ ಪ್ರತಿಭಟನೆಯಲ್ಲಿ, ಮಣಿಪುರದಲ್ಲಿ ಸಾವಿರಾರು ಜೀವ ಹಾನಿಗೆ ಕಾರಣರಾಗಿದ್ದಾರೆ. – ತನ್ನ ಬಣ್ಣಿಸಬೇಡ, ಇದಿರು ಹಳಿಯಬೇಡ ಎಂದಿದ್ದರು ಬಸವಣ್ಣ, ಆದರೆ ಇವರು ತಮ್ಮನ್ನು ದೇವ ದೂತ ಎಂದುಕೊಳ್ಳುತ್ತಾರೆ, ವಿರೋಧ ಪಕ್ಷಗಳನ್ನು ನಿಂಧಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಹುಸಿಯ ನುಡಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ ಎಂದಿದ್ದಾರೆ ಬಸವಣ್ಣ, ಆದರೆ ಇವರಿಗೆ ಸುಳ್ಳೇ ಮನೆದೇವರು , ದ್ವೇಷವೇ ಬಂಡವಾಳ. ಬಸವಣ್ಣನವರನ್ನು ಮೋದಿಯವರಿಗೆ ಹೋಲಿಕೆ ಮಾಡುವ ಬಿಜೆಪಿ ನಾಯಕರು ಬಸವಣ್ಣನವರ ತತ್ವವನ್ನು ಮನಸ್ಪೂರ್ವಕವಾಗಿ ಒಪ್ಪುತ್ತಾರೆಯೇ? ಒಪ್ಪುತ್ತಾರೆ ಎಂದಾದರೆ, ಬಿಜೆಪಿ ನಾಯಕರು RSS ಕಚೇರಿಗೆ ಹೋಗಿ “ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ” ಎಂಬ ಬಸವವಾಣಿಯ ಘೋಷಣೆ ಕೂಗಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

- Advertisement -

Latest Posts

Don't Miss