Dharwad News: ಒರಿಯಂಟಲ್ ಇನ್ಶುರೆನ್ಸ್ ಕಂಪನಿ ಆಡಳಿತ ಅಧಿಕಾರಿಗೆ 10 ವರ್ಷ ಜೈಲು ಶಿಕ್ಷೆ ಪ್ರಕಟ

Dharwad News: ಧಾರವಾಡ: ಧಾರವಾಡ ಸಿಬಿಐ ನ್ಯಾಯಾಲಯ ಒರಿಯಂಟಲ್ ಇನ್ಶುರೆನ್ಸ್ ಕಂಪನಿ ಆಡಳಿತ ಅಧಿಕಾರಿಗೆ 10 ವರ್ಷ ಶಿಕ್ಷೆ ಪ್ರಕಟಸಿದೆ.

ಟಿ ಪ್ರದೀಪ್ ಎಂಬ ಓರಿಯಂಟಲ್ ಇನ್ಶುರೆನ್ಸ್ ಕಂಪನಿಯ ಆಡಳಿತ ಅಧಿಕಾರಿಯಾಗಿದ್ದು, ಈತ ಕಂಪನಿಯ ವ್ಯವಹಾರಕ್ಕೆ ಸಂಬಂಧಿಸಿ ನೆಟ್ ಬ್ಯಾಂಕಿಂಗ್ ಮೂಲಕ ವಿವಿಧ ಬ್ಯಾಂಕ್‌ಗಳಿಂದ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದ.

ಕಳೆದ 2013-14 ರಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದ ಆರೋಪ ಪ್ರದೀಪ್ ಮೇಲೆ ಇತ್ತು. ಈತ ಒಟ್ಟು 5 ಕೋಟಿ 30 ಲಕ್ಷ ಹಣ ವಂಚನೆ ಮಾಡಿದ್ದ. ಅಲ್ಲದೇ ಧಾರವಾಡ ದೇನಾ ಬ್ಯಾಂಕ್‌ನಲ್ಲಿ ಇದ್ದ ಕಂಪನಿಯ ಖಾತೆಯ ಸ್ಟೆಟಮೆಂಟ್ ಕೂಡಾ ತಿರುಚಿದ್ದ. ಹೀಗಾಗಿ ನ್ಯಾಯಾಲಯ 10 ವರ್ಷ ಶಿಕ್ಷೆ ನೀಡಿದೆ.

ಸಿಬಿಐ ಅಧಿಕಾರಿಗಳು ಈ ಬಗ್ಗೆ 2015 ರಲ್ಲಿ ಸಿಬಿಐ ನ್ಯಾಯಾಲಯಕ್ಕೆ ಚಾರ್ಜ್ ಶಿಟ್ ಸಲ್ಲಿಸಿದ್ದರು. ಈತ ತನ್ನ ಅಕ್ರಮ ಮುಚ್ಚಿ ಹಾಕಲು, ದಾಖಲೆಗಳನ್ನು ಸಹ ತಿರುಚಿದ್ದ. ಆದರೆ ಈತನ ಎಲ್ಲಾ ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ನೀಡಲಾಗಿದೆ. 10 ವರ್ಷ ಜೈಲು ಶಿಕ್ಷೆ, ಅಲ್ಲದೇ 52 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

About The Author