Wednesday, September 17, 2025

Latest Posts

Sandalwood: ಗಂಡು ಮಗುವಿಗೆ ತಾಯಿಯಾದ ಸಂಭ್ರಮದಲ್ಲಿ ನಟಿ ಸುಷ್ಮಿತಾ ಗೌಡ

- Advertisement -

Sandalwood News: ಲವ್ ಮಾಕ್ಟೇಲ್ ನಟಿ ಮತ್ತು ಸೋಶಿಯಲ್ ಮೀಡಿಯಾಸ್ಟಾರ್ ಎನ್ನಿಸಿಕ“ಂಡಿರುವ ನಟಿ ಸುಷ್ಮಿತಾ ಗೌಡ ಗಂಡು ಮಗುವಿಗೆ ತಾಯಿಯಾಗಿದ್ದಾರೆ. ನಮ್ಮ ಪುಟ್ಟ ಕೃಷ್ಣ ಬಂದಿದ್ದಾನೆ. ಗಂಡು ಮಗು ಎಂದು ಸೋಶಿಯಲ್ ಮೀಡಿಯಾದಲ್ಲಿ ಸುಷ್ಮಿತಾ ಸಂತೋಷ ಹಂಚಿಕ“ಂಡಿದ್ದಾರೆ. ಇನ್ನು ಈ ಸುದ್ದಿ ಕೇಳಿ, ಸ್ಯಾಂಡಲ್‌ವುಡ್ ಕಲಾವಿದರು ಶುಭಕೋರಿದ್ದಾರೆ. ಅಲ್ಲದೇ ತಾಯಿ-ಮಗು ಆರೋಗ್ಯವಾಗಿರಲಿ ಎಂದು ಆಶೀರ್ವದಿಸಿದ್ದಾರೆ.

ಲವ್‌ ಮಾಕ್ಟೇಲ್‌ನಲ್ಲಿ ನಟಿಸಿದ ಬಳಿಕ ಸುಷ್ಮಿತಾ ತಮ್ಮ ಪತಿಯ ಜತೆ ವಿದೇಶಕ್ಕೆ ತೆರಳಿದರು. ಅಲ್ಲಿಗೆ ನಟನಾ ಪಯಣಕ್ಕೆ ಬ್ರೇಕ್ ಹಾಕಬೇಕಾಯಿತು. ಆದರೆ ಸುಷ್ಮಿತಾ ಇಷ್ಟಕ್ಕೆ ಸುಮ್ಮನಿರದೇ, ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಕಂಟೆಂಟ್ ನೀಡುವ ಮೂಲಕ ಮನೆ ಮಾತಾಗಿದ್ದಾರೆ.

ತಾಯಿ- ಮಗಳು ಹೇಗಿರುತ್ತಾರೆ. ಅತ್ತೆ ಹೇಗಿರುತ್ತಾರೆ, ಅಕ್ಕ- ತಂಗಿ ನಡುವೆ ಹೇಗೆ ಮಾತುಕತೆಯಾಗತ್ತೆ ಅನ್ನೋ ಕಂಟೆಂಟ್ ಗೆ ಸೂಪರ್ ಆಗಿ ನಟನೆ ಮಾಡುತ್ತಾರೆ. ಅಲ್ಲದೇ, ಗರ್ಭಿಣಿಯಾದ ಬಳಿಕ ಅದಕ್ಕೆ ಸಂಬಂಧಿಸಿದಂತೆ, ಗರ್ಭಿಣಿಯರಿಗೆ ಸಮಸ್ಯೆ ಮಾಡಲೆಂದೇ ಬರುವ ಆಂಟಿಯರ ಬಗ್ಗೆ, ಬೇಡದ ಸಲಹೆ ನೀಡುವ ಹೆಂಗಸರ ಬಗ್ಗೆಯೂ ಅರ್ಥಪೂರ್ಣವಾದ ವೀಡಿಯೋವನ್ನು ಸುಷ್ಮಿತಾ ಮಾಡಿದ್ದರು.

ಇದೀಗ ಸುಷ್ಮಿತಾ ಗಂಡು ಮಗುವಿಗೆ ತಾಯಿಯಾಗಿದ್ದು, ಇನ್ನು ಕೆಲ ತಿಂಗಳು ಅವರ ಫ್ಯಾನ್ಸ್ ಅವರ ಈ ಫನ್ನಿ ಕಂಟೆಂಟ್‌ಗಳನ್ನು ಮಿಸ್ ಮಾಡಿಕ“ಳ್ಳಲಿದ್ದಾರೆ. 2022ರಲ್ಲಿ ಸುಷ್ಮಿತಾ ಅಶ್ವಿನ್ ಅವರನ್ನು ವಿವಾಹವಾಗಿ, ವಿದೇಶಕ್ಕೆ ತೆರಳಿದರು.

- Advertisement -

Latest Posts

Don't Miss