Hubli News: ಹುಬ್ಬಳ್ಳಿ: ಸೆಪ್ಟೆಂಬರ್ 19ರಂದು ವೀರಶೈವ ಲಿಂಗಾಯತ ಏಕತಾ ಸಮಾವೇಶವನ್ನು ಹುಬ್ಬಳ್ಳಿ ನಗರದ ನೆಹರು ಮೈದಾನದಲ್ಲಿ ಆಯೋಜಿಸಲಾಗಿದೆ. ಒಂದು ಲಕ್ಷ ಜನರು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂದ್ರ, ತೆಲಂಗಾಣ ರಾಜ್ಯದಿಂದ ಜನರು ಆಗಮಿಸಲಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸಾವಿರಕ್ಕೂ ಹೆಚ್ಚು ವಿವಿಧ ಮಠಾಧೀಶರು ಭಾಗಿಯಾಗುತ್ತಾರೆ. ಸಮಾಜದ ಏಕತೆಗಾಗಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳು ಜನ ಭಾಗಿಯಾಗುತ್ತಾರೆ ಎಂದರು.
ಎಂಪಿ ಟಿಕೆಟ್ ವಚನಾನಂದ ಸ್ವಾಮೀಜಿ ಮಠದಲ್ಲಿ ಸಿಗುತ್ತಾವಾ..? ಅವುಗಳನ್ನು ಮಾರಾಟ ಮಾಡಲಿಕ್ಕೆ ಇಟ್ಟಿದ್ದಾರಾ..? ಅವರನ್ನು ಎಂಪಿ ಟಿಕೆಟ್ ಕೇಳೋ ಅವಶ್ಯಕತೆ ಬಂದಿಲ್ಲ. ಎಲ್ಲರೂ ತಮ್ಮ ಅಭಿಪ್ರಾಯವನ್ನು ವೀರಶೈವ ಲಿಂಗಾಯತ ಮಹಾಸಭೆಗೆ ನೀಡಬೇಕು. ಎಲ್ಲರ ಅಭಿಪ್ರಾಯ ಕೇಳಿ ಸಭೆ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ನಮ್ಮದು ಶಕ್ತಿ ಪ್ರದರ್ಶನ ಸಮಾವೇಶ ಅಲ್ಲ. ಸಂಘಟನಾ ಸಮಾವೇಶ. ವೀರಶೈವವೂ ನಮ್ಮದೇ.. ಲಿಂಗಾಯತವೂ ನಮ್ಮದೇ. ಪಂಚಾಚಾರ್ಯರ ಮೇಲಿನ ಸೇಡನು ತೀರಿಸಿಕೊಳ್ಳಲು ಸಮಾಜ ಬಲಿಕೊಡಬಾರದು ಎಂದು ಅವರು ಹೇಳಿದರು.



