Tuesday, September 23, 2025

Latest Posts

ಖಾವಿ Vs ಖಾವಿ ಸಂಘರ್ಷ – ತೊಡೆ ತಟ್ಟಿ ನಿಂತ ಶ್ರೀಗಳು!

- Advertisement -

ರಾಜ್ಯದಲ್ಲಿ ಲಿಂಗಾಯತ ಧರ್ಮ ಸಂಬಂಧಿಸಿದ ಹೋರಾಟಗಳು ಮತ್ತೆ ಚರ್ಚೆಯ ಕೇಂದ್ರವಾಗಿವೆ. ‘ಖಾವಿ ವರ್ಸಸ್ ಖಾವಿ’ ಸಂಘರ್ಷ ಹೊಸ ತಿರುವು ಪಡೆಯುತ್ತಿದೆ. ಕಳೆದ ಕೆಲ ತಿಂಗಳುಗಳಿಂದ ಶಾಂತವಾಗಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಇದೀಗ ಮತ್ತೆ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಕೆಲ ಸ್ವಾಮೀಜಿಗಳು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಸಿದ್ದಾರೆ. ಇನ್ನೊಂದಿಷ್ಟು ಸ್ವಾಮಿಗಳು, ವೀರಶೈವ ಲಿಂಗಾಯತ ಒಂದೇ ಅಂತ ಹೇಳಿ ಸಮಾವೇಶಕ್ಕೆ ಮುಂದಾಗಿದ್ದಾರೆ. ಸದ್ಯ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸೋರ ವಿರುದ್ದ ಹೋರಾಟ ನಡೆಸೋಕೆ ಸಿದ್ದತೆಗಳು ನಡೀತಾಯಿವೆ. ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ಪ್ರತ್ಯೇಕ ಧರ್ಮ ಪರ ವಿರೋಧ ಹೋರಾಟಗಳು ಇದೀಗ ಮತ್ತೆ ಆರಂಭವಾಗಿದೆ.

ಈ ನಿಟ್ಟಿನಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ಎಂದು ಹೋರಾಟ ಮಾಡುವವರ ವಿರುದ್ಧ ಇದೀಗ ದಿಂಗಾಲೇಶ್ವರ ಸ್ವಾಮೀಜಿ ತೊಡೆ ತಟ್ಟಿ ನಿಂತಿದ್ದಾರೆ. ಸೆಪ್ಟೆಂಬರ್ 19 ರಂದು ಹುಬ್ಬಳ್ಳಿ ನಗರದ ನೆಹರು ಮೈದಾನದಲ್ಲಿ ಬೃಹತ್ ಏಕತಾ ಸಮಾವೇಶವನ್ನು ಆಯೋಜಿಸಲಾಗಿದೆ.

ಈ ಸಮಾವೇಶದಲ್ಲಿ ಬರೋಬ್ಬರಿ ಒಂದು ಲಕ್ಷ ಜನ ಆಗಮಿಸಲಿದ್ದಾರೆ. 1000ಕ್ಕೂ ಹೆಚ್ಚು ಮಠಾಧೀಶರು ಭಾಗವಹಿಸಲಿದ್ದಾರೆ. ಕರ್ನಾಟಕ ಮಾತ್ರವಲ್ಲದೇ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದಲೂ ಜನ ಭಾಗಿಯಾಗಲಿದ್ದಾರೆ. ಸಮಾಜದ ಏಕತೆಗಾಗಿ ಈ ಸಮಾವೇಶ ನಡೆಯಲಿದೆ.

ಇನ್ನು ಈ ಬಗ್ಗೆ ಸ್ವತಃ ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಶ್ರೀಗಳು ಮಾತನಾಡಿದ್ದಾರೆ. ಹುಬ್ಬಳ್ಳಿಯಲ್ಲಿ ರಾಜ್ಯ ಮತ್ತು ಅಂತರರಾಜ್ಯ ವೀರಶೈವ ಲಿಂಗಾಯತ ಸ್ವಾಮೀಜಿಗಳು ಸೇರಿ ದೊಡ್ಡ ಸಂದೇಶ ನೀಡಲಿದ್ದೆವೆ. ಅದು ಏನು ಅಂತ ನಾಳೆ ಕಾದು ನೋಡಿ ಎಂದಿದ್ದಾರೆ.

ಇದು ಯಾವ ಪಕ್ಷ, ಧರ್ಮ , ಸಮುದಾಯದ ವಿರುದ್ಧ ಕಾರ್ಯಕ್ರಮ ಅಲ್ಲಾ. ವೀರಶೈವ ಲಿಂಗಾಯತರನ್ನು ಒಂದು ಮಾಡುವ ಕಾರ್ಯಕ್ರಮ. ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಕೆ ನನ್ನ ಮೇಲೆ ಸಾಕಷ್ಟು ಅಪನಿಂದನೆಗಳು ಬರುತ್ತಿವೆ. ಆದರೆ ಅದನೆಲ್ಲವನ್ನು ನಾನು ಸ್ವೀಕಾರ ಮಾಡುತ್ತೇನೆ. ವೀರಶೈವ ಲಿಂಗಾಯತ ಒಂದಾಗಿರುವುದು ನನಗೆ ಮುಖ್ಯ ಎಂದಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss