ಆನ್ಲೈನ್ ಡೆಲಿವರಿ ಏಜೆಂಟ್ಗಳಾಗಿ ಕೆಲಸ ಮಾಡುವ ಬಹುತೇಕರು ಬೈಕ್, ಸ್ಕೂಟರ್, ಸ್ಕೂಟಿಗಳಲ್ಲಿ ತಮ್ಮ ಗ್ರಾಹಕರಿಗೆ ವಸ್ತುಗಳನ್ನು ಡೆಲಿವರಿ ನೀಡುತ್ತಾರೆ. ಆದರೆ ಇಲ್ಲೊಂದು ಕಡೆ ಬ್ಲಿಂಕಿಟ್ ಡೆಲಿವರಿ ಏಜೆಂಟ್ ಒಬ್ಬರು ಥಾರ್ ಗಾಡಿಯಲ್ಲಿ ಬಂದು ಡೆಲಿವರಿ ನೀಡಿದ್ದಾರೆ. ಇದು ಆರ್ಡರ್ ಮಾಡಿದ ಗ್ರಾಹಕರನ್ನು ಅಚ್ಚರಿಗೀಡು ಮಾಡಿದೆ.
ಕಪ್ಪು ಬಣ್ಣದ ಮಹೀಂದ್ರಾ ಥಾರ್ ಇಷ್ಟ ಪಡೋರಿಗೆ ಬೇರೆಯದ್ದೇ ಒಂದು ವೈಬ್ ನೀಡತ್ತೆ. ಇದನ್ನ ದುಡ್ಡಿದ್ದವರು ಖರೀದಿಸಿ ಎಂಜಾಯ್ ಮಾಡ್ತಾರೆ. ಡೆಲಿವರಿ ಏಜೆಂಟ್ ಒಬ್ಬರು ಥಾರ್ ಗಾಡಿಯಲ್ಲಿ ಬಂದು ಡೆಲಿವರಿ ನೀಡಿದ್ದನ್ನ ದಿವ್ಯಾ ಶ್ರೀವಾಸ್ತವ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಇದು ನಿಜನಾ ಥಾರ್ ಗಾಡಿಯಲ್ಲಿ ಬ್ಲಿಂಕಿಟ್ ಡೆಲಿವರಿ ಎಂದು ಅಚ್ಚರಿಯಿಂದ ಪ್ರಶ್ನಿಸಿದ್ದಾರೆ. ಅಲ್ಲದೇ ನೀವು ನಿಮ್ಮ ಡೆಲಿವರಿ ಹುಡುಗರಿಗೆ ನಿಜವಾಗಿಯೂ ಇಷ್ಟೊಂದು ಹಣ ನೀಡುತ್ತಿದ್ದೀರಾ? ಎಂದು ಬ್ಲಿಂಕಿಟ್ಗೆ ಟ್ಯಾಗ್ @letsblinkit ಮಾಡಿ ಅವರು ಕೇಳಿದ್ದಾರೆ.
ಅಲ್ಲದೇ ಥಾರ್ ಮಹೀಂದ್ರಾಗೂ @mahindrathar ಟ್ಯಾಗ್ ಮಾಡಿದ ಅವರು ನೀವು ಇತ್ತೀಚಿನ ದಿನಗಳಲ್ಲಿ THAR ಗಾಡಿಯನ್ನು ತುಂಬಾ ಕಡಿಮೆ ಬೆಲೆಗೆ ನೀಡುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
ವರದಿ : ಲಾವಣ್ಯ ಅನಿಗೋಳ




