Wednesday, September 24, 2025

Latest Posts

Sandalwood: ಹಣ ಬ್ಯೂಟಿ ಅಲ್ಲ GODFATHER ಇದ್ರೆ ಒಳ್ಳೇದು: Rakesh Adiga Podcast

- Advertisement -

Sandalwood: ನಟ ರಾಕೇಶ್ ಅಡಿಗ ಅವರು ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ ಸ್ಯಾಂಡಲ್‌ವುಡ್‌ನಲ್ಲಿ ಬೆಳೆಯೋಕ್ಕೆ ಹಣ ಇರಬೇಕಾ..? ಬ್ಯೂಟಿ ಇರಬೇಕಾ..? ಗಾಡ್‌ಫಾದರ್ ಇರಬೇಕಾ ಎಂಬ ಪ್ರಶ್ನೆಗೂ ರಾಕೇಶ್ ಉತ್ತರಿಸಿದ್ದಾರೆ.

ಈ ಪ್ರಶ್ನೆಗೆ ಉತ್ತರಿಸಿರುವ ರಾಕೇಶ್, ಗಾಡ್‌ಫಾದರ್ ಇರಬೇಕು ಎಂದು ಹೇಳಿದ್ದಾರೆ. ಅಲ್ಲದೇ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ರಿಯಲ್ ಟ್ಯಾಲೆಂಟ್ ಇರಬೇಕು. ತುಳಿಯುವುದು ಟೆಂಪ್ರವರಿಯಾಗಿದ್ದರೂ, ನಮ್ಮಲ್ಲಿರುವ ಕಲೆ ನಮ್ಮನ್ನು ಕಾಪಾಡುತ್ತೆ ಅಂತಾರೆ ರಾಕೇಶ್.

ಅಲ್ಲದೇ ನಮಗೆ ಮೇನ್ ಬೇಕಾಗಿರುವುದು ತಾಳ್ಮೆ. ತಾಳ್ಮೆ ಕಳೆದುಕ“ಂಡು ನಾವು ಕೆಟ್ಟ ಅಭ್ಯಾಸಕ್ಕೆ ಬಿದ್ದರೆ, ಆಗ ನಮ್ಮ ಬ್ಯೂಟಿ ಹಾಳಾಗುತ್ತದೆ. ಬಾಡಿಯಲ್ಲಿ ಚೇಂಜಸ್ ಬರುತ್ತದೆ. ಹಾಗಾಗಿ ನಾವು ತಾಳ್ಮೆಗೆಡದೇ ಇರಬೇಕು ಎನ್ನುತ್ತಾರೆ ರಾಕೇಶ್.

ರಾಕೇಶ್ ಅವರಿಗೂ ಅವಕಾಶ ಕೈ ತಪ್ಪಿದಾಗ, ಅವರು ಕೂೠ ಡಿಪ್ರೆಶನ್‌ಗೆ ಹೋಗಿದ್ದರಂತೆ. ಆದರೆ ಮತ್ತೆ ಸಕಾರಾತ್ಮಕತೆಯಿಂದ ಪ್ರಯತ್ನಿಸಿದಾಗ, ಅವಕಾಶಗಳು ಸಿಗಲು ಶುರುವಾದವು ಎಂದು ರಾಕೇಶ್ ಹೇಳಿದ್ದಾರೆ.

ಗಾಂಜಾ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ರಾಕೇಶ್,  ಸತ್ಯ ಮಾತನಾಡಬೇಕು ಅನ್ನೋ ಉದ್ದೇಶ ನನಗಿತ್ತು. ಆದರೆ ಅದನ್ನು ಬೇರೆ ರೀತಿಯಲ್ಲಿ ಪ್ರಚಾರ ಮಾಡಿ, ಹೇಳಿಕೆ ತಿರುಚಿ, ಅದನ್ನೇ ಥಂಬ್‌ನೇಲ್ ಹಾಕಿ ಹರಿಬಿಡಲಾಯಿತು. ಇದರಿಂದ ಯುವ ಪೀಳಿಗೆಗೆ ಬೇರೆಯದ್ದೇ ಸಂದೇಶ ರವಾನೆಯಾಗಿತ್ತು. ಅದರಲ್ಲಿ ನಾವು ಆ ಬಗ್ಗೆ ಹೇಳಿದ ರೀತಿ ತಪ್ಪಾಗಿತ್ತು ಅಂತಾ ರಾಕೇಶ್ ಹೇಳಿದ್ದಾರೆ. ಏನದು ಹೇಳಿಕೆ ಅಂತಾ ತಿಳಿಯಲು ವೀಡಿಯೋ ನೋಡಿ.

- Advertisement -

Latest Posts

Don't Miss