Hubli: ಯೂಟ್ಯೂಬ್ ಖ್ವಾಜಾ, ಮುಕುಳೆಪ್ಪ ಮತ್ತು ಗಾಯತ್ರಿ ಮದುವೆ ಪ್ರಕರಣ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ. ಪೊಲೀಸರು ಎದುರು ಮುಕುಳೆಪ್ಪ ಪತ್ನಿ ಹಾಜರಾಗಿದ್ದಾಳೆ. ಇನ್ನೂ ಮುಕುಳೆಪ್ಪ ವಿರುದ್ಧ ಕಾರವಾರ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಯೂಟ್ಯೂಬರ್ ಖ್ವಾಜಾ ಅಲಿಯಾಸ್ ಮುಕುಳೆಪ್ಪ ಮದುವೆ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. ಒಂದು ಕಡೆ ಮುಕುಳೆಪ್ಪ ಪತ್ನಿ ಗಾಯತ್ರಿ ನಾನು ಸ್ವ ಇಚ್ಛೆಯಿಂದ, ಪ್ರೀತಿ ಮಾಡಿಯೇ ಖ್ವಾಜಾನನ್ನು ಮದುವೆಯಾಗಿದೆ. ಆದರೆ ನನ್ನ ತಂದೆ ತಾಯಿ ಅವರಿವರ ಮಾತುಕೇಳಿ ವಿನಾಕಾರಣ ನನಗೆ ಮತ್ತು ನನ್ನ ಗಂಡನಿಗೆ ತೊಂದರೆ ನೀಡುತ್ತಿದ್ದರೆ ಅಂತ ಬಹಿರಂಗ ಹೇಳಿಕೆ ನೀಡಿದ್ದಾಳೆ.
ಇನ್ನೂ ಮಗಳ ವಿರುದ್ಧವೂ ಪಾಲಕರು ಸಿಡಿದೆದ್ದಿದಾರೆ. ಜೀವ ಬೆದರಿಕೆ ಹಾಕಿರುವ ಮುಕುಳೆಪ್ಪ ಬಂಧನ ಅಗಬೇಕು, ನಮ್ಮ ಮಗಳ ವಾಪಸು ಬಂದು ಮನೆ ಸೇರಬೇಕು ಅಂತ ಒತ್ತಾಯ ಮಾಡುತ್ತಿದ್ದಾರೆ. ಈ ಮಧ್ಯೆ ನಕಲಿ ದಾಖಲೆ ಸೃಷ್ಟಿ ರಿಜಿಸ್ಟರ್ ಮದುವೆ ಆಗಿದ್ದಾರೆ ಅಂತ ಆರೋಪಿಸಿ ಮುಕುಳೆಪ್ಪ ಮೇಲೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.. ಎಲ್ಲಾ ಬೆಳವಣಿಗೆ ನಡುವೆಯೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪಹರಣ, ಜೀವಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆಗೆ, ವಕೀಲರ ಸಮ್ಮುಖದಲ್ಲಿ ಮುಕುಳೆಪ್ಪ ಗಾಯತ್ರಿ ಹಾಜರಾಗಿದ್ದಾಳೆ..
ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಹಿರಿಯ ಉಪ ನಿರ್ದೇಶಕಿ ವಿಜಯ ಲಕ್ಷ್ಮಿ ಪಾಟೀಲ್ ನೇತೃತ್ವದಲ್ಲಿ ಹುಬ್ಬಳ್ಳಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಸತತ ಮೂರು ಗಂಟೆ ವಿಚಾರಣೆ ನಡೆಸಿ ಗಾಯತ್ರಿ ಹೇಳಿಕೆ ದಾಖಲಿಸಿಕೊಂಡರು.
ವಿಚಾರಣೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಗಾಯತ್ರಿ ನಾನು ಖ್ವಾಜಾ ಪರಸ್ಪರ ಒಪ್ಪಿಗೆಯಿಂದಲೇ ಮದುವೆ ಆಗಿದ್ದು, ನನ್ನ ತಂದೆ ತಾಯಿ ಸುಳ್ಳು ಹೇಳುತ್ತಿದ್ದಾರೆ. ನನ್ನ ಎಲ್ಲಾ ಹೇಳಿಕೆ ಪೊಲೀಸರ ಮುಂದೆ ದಾಖಲಿಸಿದ್ದನೆ. ನನಗೆ ಯಾರ ಒತ್ತಡ ಇಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಜೀವ ಬೆದರಿಕೆ ಬರುತ್ತಿದ್ದು, ಸೂಕ್ತ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದೆನೆ ಎಂದಿದ್ದಾಳೆ...
ಇದೇ ವೇಳೆ ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡ ಹಿಂದೂಪರ, ಬಿಜೆಪಿ, ಗಾಯತ್ರಿ ಸಮಾಜದ ಕಾರ್ಯಕರ್ತರು, ಗಾಯತ್ರಿ ಜೊತೆಗೆ ಮಾತನಾಡಲು ಅವಕಾಶ ನೀಡಬೇಕೆಂದು ಹೈಡ್ರಾಮಾ ಸೃಷ್ಟಿ ಮಾಡಿದರು..
ಪೊಲೀಸ್ ಜೊತೆಗೆ ವಾಗ್ವಾದದ ನಡುವೆಯೇ ಗಾಯತ್ರಿ ವಿಚಾರಣೆಗೆ ಮುಗಿಸಿದ ಪೊಲೀಸರು, ಮಹಿಳಾ ಅಭಿವೃದ್ಧಿ ಅಧಿಕಾರಿ ಜೊತೆಗೆ ಧಾರವಾಡ ಸಂತ್ವಾನ ಕೇಂದ್ರಕ್ಕೆ ಸೂಕ್ತ ಭದ್ರತೆಯಲ್ಲಿ ಕಳುಹಿಸಿಕೊಟ್ಟರು..ಇನ್ನೂ ವಿಚಾರಣೆ ಬಗ್ಗೆ ಕಮಿಷನರ್ ಮತ್ತು ಮಹಿಳಾ ಅಧಿಕಾರಿ ಸಹ ಮಾಹಿತಿ ನೀಡಿದ್ದಾರೆ.
ಇಂದು ಮುಂಡಗೋಡಿನ ಸಬ್ ರಿಜಿಸ್ಟರ್ ಕಚೇರಿಗೆ ಶ್ರೀರಾಮ ಸೇನೆ ಸಂಘಟನೆ ಹಾಗೂ ಯುವತಿ ಗಾಯಿತ್ರಿ ತಾಯಿ ಶಿವಕ್ಕ ಮುತ್ತಿಗೆ ಹಾಕಿ ರಿಜಿಸ್ಟರ್ ರನ್ನು ತರಾಟೆ ತೆಗೆದುಕೊಂಡರು.ಹಣ ಪಡೆದು ,ನಿಯಮ ಬಾಹಿರ ವಿವಾಹ ನೊಂದಣಿ ಮಾಡಲಾಗಿದೆ.
ಸಬ್ ರಿಜಿಸ್ಟರ್ ನಿಯಮ ಮೀರಿ ಹುಬ್ಬಳ್ಳಿ-ಧಾರವಾಡ ನಿವಾಸಿಗಳನ್ನ ಮುಂಡಗೋಡು ನಿವಾಸಿಗಳೆಂದು ಸುಳ್ಳು ದಾಖಲೆಯನ್ನು ಅಂಗೀಕರಿಸಿದ್ದಾರೆ ,ಜೂನ್ 5 ರಂದು ದಾಖಲೆ ನೀಡಿ ಜೂನ್ 5 ರಂದೇ ವಿವಾಹ ನೊಂದಣಿ ಮಾಡಲಾಗಿದೆ. ನಿಯಮದಂತೆ ವಿವಾಹವಾಗುವವರು ಒಬ್ಬರಾದರೂ ಸ್ಥಳೀಯರಾಗಿರಬೇಕು ಎಂಬ ನಿಯಮ ಗಾಳಿಗೆ ತೂರಲಾಗಿದೆ.
ಹಣ ಪಡೆದು ವಿವಾಹ ನೊಂದಣಿ ಮಾಡಿದ ಆರೋಪ ಮಾಡಲಾಗಿದ್ದು , ವಿವಾಹ ನೊಂದಣಿಯನ್ನು ರದ್ದು ಪಡಿಸುವಂತೆ ಆಗ್ರಹಿಸಿದರು. ಇನ್ನು ಕರಾರು ಪತ್ರ ಪಡೆದಿರುವ ದಿನವೇ ವಿವಾಹ ನೊಂದಣಿ ಮಾಡಿದ್ದು ದಾಖಲೆಯಿಂದ ಪತ್ತೆಯಾಗಿದೆ. ಇನ್ನು ನಿಯಮ ಮೀರಿ ವಿವಾಹ ನೊಂದಣಿ ಮಾಡಿಲ್ಲ ಎಂದು ನೊಂದಣಾಧಿಕಾರಿ ಮಾಹಿತಿ ನೀಡಿದ್ದಾರೆ.
ಇನ್ನು ಗಾಯುತ್ರಿ ಸಹ ತನ್ನ ತಾಯಿ ಮಾತನಾಡಿದ ವಿಡಿಯೋ ಹರಿಬಿಟ್ಟಿದ್ದು , ಈ ಬಗ್ಗೆ ತಾಯಿ ಸಹ ಮಗಳು ಶಾಣೆ ಇದ್ದಾಳೆ ಎಂದು ಆರೋಪಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿ ಮದುವೆ ನೋಂದಣಿ ಆರೋಪದಡಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಮುಕುಳೆಪ್ಪ ಮೇಲೆ ಮತ್ತೊಂದು ಪ್ರಕರಣ ದಾಖಲಾಗಿದೆ.
ಒಟ್ಟಿನಲ್ಲಿ ಯಾರಿಗೂ ಹೇಳದೆ ಮದುವೆಯಾಗಿರುವ ಮುಕುಳೆಪ್ಪ ಗಾಯತ್ರಿ ಸಂಸಾರದ ಗಟ್ಟು ಈಗ ಬೀದಿ ಜಗಳಕ್ಕೆ ಕಾರಣವಾಗಿದೆ. ಎರಡು ಪ್ರತ್ಯೇಕ ಪ್ರಕರಣ ಮುಕುಳೆಪ್ಪ ಮೇಲೆ ದಾಖಲಾಗಿದ್ದು, ಆದರೆ ಮುಕುಳೆಪ್ಪ ಮಾತ್ರ ಎಲ್ಲೂ ಕಾಣಿಸಿದೆ ಇರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ..
ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ..