ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮದ್ದೂರು ಶಾಸಕ ಉದಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮದ್ದೂರು ಶಾಸಕ ಪೊರ್ಕಿಯಂತೆ ಮಾತನಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಒಬ್ಬ ಪೊರ್ಕಿ ಶಾಸಕ ಇದ್ದಾರೆ, ಈಗ ಮದ್ದೂರಿನಲ್ಲೂ ಒಬ್ಬ ಹುಟ್ಟಿಕೊಂಡಿದ್ದಾರೆ. ಶಾಸಕರು ಬಳಸಿರುವ ಭಾಷೆ ಪೊರ್ಕಿಗಳ ಮಟ್ಟದದ್ದಾಗಿದೆ, ಎಂದು ಟೀಕಿಸಿದರು.
ಇದೇ ವೇಳೆ, ಅವರು ಉದಯ್ ವಿರುದ್ಧ ಇನ್ನಷ್ಟು ಆರೋಪಗಳನ್ನು ಹೊರಹಾಕುತ್ತಾ, ಬೆಂಗಳೂರು ಗಾಂಧಿನಗರದ ಲಾಡ್ಜ್‌ಗಳಲ್ಲಿ ಇಸ್ಪೀಟ್ ಆಡಿ ದುಡ್ಡು ಗಳಿಸಿದವರು, ಕ್ಯಾಸಿನೋದಲ್ಲಿ ಮಹಿಳೆ, ಎಣ್ಣೆ ಬಳಸಿಕೊಂಡು ಹಣ ಮಾಡಿದ್ದವರು ಇಂದು ಶಾಸಕರಾಗಿ ವರ್ತಿಸುತ್ತಿದ್ದಾರೆ. ಅವರ ಮಾತುಗಳು ಕ್ಯಾಸಿನೋ ಟೇಬಲ್ ಅಥವಾ ಇಸ್ಪೀಟ್ ಟೇಬಲ್‌ನಲ್ಲಿ ಮತ್ತಿನಲ್ಲಿದ್ದಂತೆ ಕೇಳಿಸುತ್ತಿವೆ ಎಂದರು.
ಉದಯ್ ಅವರನ್ನು ಪ್ರಶ್ನಿಸಿದ ಪ್ರತಾಪ್ ಸಿಂಹ, ಕ್ಯಾಸಿನೋ ಟೇಬಲ್, ಇಸ್ಪೀಟ್ ಟೇಬಲ್ ಮತ್ತು ಪತ್ರಿಕಾಗೋಷ್ಠಿ ಟೇಬಲ್ ಎಲ್ಲವೂ ಬೇರೆ ಬೇರೆ. ನಿಮಗೆ ಅದು ಗೊತ್ತಿಲ್ಲವೇ? ಮದ್ದೂರನ್ನು ಜೂಜಿನ ಕೇಂದ್ರ ಎಂದುಕೊಂಡಿದ್ದೀರಾ? ಗಣೇಶಮೂರ್ತಿ ಮೆರವಣಿಗೆಯಲ್ಲಿ ಅಹಿತಕರ ಘಟನೆ ನಡೆದಾಗ ನೀವು ಅಲ್ಲಿ ಇದ್ದಿದ್ದರೆ ಜನರೇ ಪಾಠ ಕಲಿಸುತ್ತಿದ್ದರು. ನನ್ನ ಸಹನೆ ಪರೀಕ್ಷಿಸಬೇಡಿ. ಟೀಕೆ ಮಾಡಲು ಮನೆಯವರನ್ನು ಎಳೆಯಬೇಡಿ. ನಾನು ನಿಮ್ಮ ಮನೆಯವರ ಬಗ್ಗೆ ಹೀಗೆ ಮಾತನಾಡಿದ್ದರೆ ಹೇಗಿರುತ್ತಿತ್ತು? ಎಂದು ಎಚ್ಚರಿಸಿದರು. ಮದ್ದೂರಿಗೆ ಬನ್ನಿ, ಬೇಕಾದರೆ ನನ್ನನ್ನು ಕರೆಸಿ, ನಾನು ಅಲ್ಲೇ ಉತ್ತರ ಕೊಡುತ್ತೇನೆ. ಜೂಜುಕೋರನಂತೆ ಮಾತನಾಡುವುದನ್ನು ಮೊದಲು ನಿಲ್ಲಿಸಿ ಎಂದು ಸವಾಲು ಹಾಕಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ