ಯಾವುದೇ ಕೆಲಸ ಮಾಡಿದರೂ ವಿರೋಧಿಸೋದೆ ವಿರೋಧ ಪಕ್ಷದ ಕೆಲಸ: ಕುಣಿಗಲ್ ಶಾಸಕ ರಂಗನಾಥ್

Tumakuru: ತುಮಕೂರು: ಕುಣಿಗಲ್ ಶಾಸಕ ರಂಗನಾಥ್ ಮಾತನಾಡಿದ್ದು, ಜಾತಿ ಗಣತಿ ಬಗ್ಗೆ ಹೇಳಿಕೆ ನೀಡಿದ್ದಾರೆ. ನನಗೆ ಜಾತಿನೇ ಇಲ್ಲ ನಾನು ಡಾಕ್ಟರ್ ನಾನು ಎಲ್ಲಾ ಸಮುದಾಯವನ್ನು ಪ್ರತಿನಿಧಿಸುತ್ತೇನೆ. ಅದರ ಜೊತೆಗೆ ನಾನು ಒಕ್ಕಲಿಗನಾಗಿ ಜಾತಿಗಣತಿ ವಿಚಾರದಲ್ಲಿ ಜಾಗೃತಿ ಮೂಡಿಸಲು ಕರೆಸಿದ್ದರು. ಸಭೆಯಲ್ಲಿ ನಡೆದ ವಿಚಾರವನ್ನು ಹಾಗೂ ನ್ಯೂನ್ಯತೆಗಳನ್ನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ರಂಗನಾಥ್ ಹೇಳಿದ್ದಾರೆ.

ಜಾತಿ ಗಣತಿ ವಿರುದ್ಧ ಪಿಐಎಲ್ ವಿಚಾರದ ಬಗ್ಗೆ ಮಾತನಾಡಿರುವ ರಂಗನಾಥ್, ಸಮೀಕ್ಷೆ ವಿಚಾರದಲ್ಲಿ ಪಿಎಲ್ ಪಿಐಎಲ್ ಹಾಕಿರೋದು ನನಗೆ ಗೊತ್ತಿಲ್ಲ. ತಿಳಿದುಕೊಂಡು ಆ ಬಗ್ಗೆ ಪ್ರತಿಕ್ರಿಯಿಸುತ್ತೇನೆ. ಕಾಂತರಾಜ್ ಅರಸ್ ಆಯೋಗದ ವರದಿ ಗೊಂಲದಿಂದ ಎರಡನೇ ಬಾರಿಗೆ ಸಮೀಕ್ಷೆಗೆ ಮುಂದಾಗಿದೆ. ಯಾವುದೇ ಗೊಂದಲವಿಲ್ಲದೆ ಜನರನ ತೀರ್ಮಾನಗಳನ್ನ ತೆಗೆದುಕೊಳ್ಳೋದು ಸರ್ಕಾರದ ಕರ್ತವ್ಯ. ಯಾವುದೇ ನೂನ್ಯತೆಗಳಿದ್ದರೆ ಸರ್ಕಾರ ಅದನ್ನು ತೆಗೆದುಕೊಂಡು ಸರಿ ಮಾಡಲಿದೆ. ಅಲ್ಲದೆ ಈ ವಿಚಾರವಾಗಿ ಸಮರ್ಥವಾಗಿ ಸರ್ಕಾರ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಮರ್ಥವಾಗಿ ಎದುರಿಸಲಿದ್ದಾರೆ ಎಂದು ರಂಗನಾಥ್ ಹೇಳಿದ್ದಾರೆ.

ಯಾವುದೇ ಕೆಲಸ ಮಾಡಿದರೂ ವಿರೋಧಿಸೋದೆ ವಿರೋಧ ಪಕ್ಷದ ಕೆಲಸ. ಅವರ ಬಗ್ಗೆ ಹೆಚ್ಚು ಗಮನಕೊಡದೆ ಸರ್ವರಿಗೂ ಸಮಾನತೆ ಸಮ ಬಾಳು, ಸಮಪಾಲು ಕೊಡುವ ಚಿಂತನೆ ಮಾಡಿದ್ದೇವೆ. ಎಲ್ಲಾ ಜಾತಿಗಳನ್ನು ವರ್ಗಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವರದಿ ಮಾಡುತ್ತೇವೆ. ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಯಾರು ಹಿಂದುಳಿದಿದ್ದಾರೆ ಅನ್ನೋದನ್ನ ಗುರುತಿಸೋದು ಒಂದು ಪ್ರಕ್ರಿಯೆ ಇದು. ಜಾತಗಣತಿಯನ್ನ ಮಾಡಬಾರದು ಅನ್ನೋದಿದ್ರೆ ನಾವು ಅದನ್ನ ನಿಲ್ಲಿಸೋಣ. ಇದನ್ನು ಮಾಡುತ್ತಿರುವುದು ಜಾತಿ ಜಾತಿ ನಡುವೆ ಕಲಾ ತರುತ್ತಿದ್ದಾರೆ ಅನ್ನೋದು ಸರಿಯಲ್ಲ ಎಂದು ರಂಗನಾಥ್ ಹೇಳಿದ್ದಾರೆ.

ಜಾತಿ ಕಾಲಮ್ನಲ್ಲಿ ಕ್ರಿಶ್ಚಿಯನ್ ಪದಳ ಬಳಕೆ ವಿಚಾರದ ಬಗ್ಗೆ ರಂಗನಾಥ್ ಪ್ರತಿಕ್ರಿಯಿಸಿದ್ದು, ನಾನು ಇದನ್ನ ಗಮನಿಸಿದ್ದೇನೆ ಕಾಂತರಾಜು ವರದಿಯಲ್ಲೇ ಬಂದಿರೋದನ್ನ ಪುನರಾವರ್ತನೆ ಮಾಡಿದ್ದಾರೆ ಅಂತ ಹೇಳ್ತಿದ್ದಾರೆ. ಎಲ್ಲರೂ ಇದನ್ನು ವಿರೋಧ ಮಾಡಿದರೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು. ಈ ವಿಚಾರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ನಿರ್ಮಲಾನಂದ ನಾಥ ಸ್ವಾಮೀಜಿಯವರ ಆ ಸಮ್ಮುಖದಲ್ಲಿ ಮುಖಂಡರ ಸಭೆ ಇದೆ. ಇದೇ ಶನಿವಾರ ನಡೆಯುವ ಆ ಸಭೆಯಲ್ಲಿ ಈ ಎಲ್ಲಾ ವಿಚಾರಗಳನ್ನು ಶ್ರೀಗಳಿಗೆ ಮನಕ್ಕೆ ತರುತ್ತೇವೆ ಎಂದು  ತುಮಕೂರಿನಲ್ಲಿ ಕಾಂಗ್ರೆಸ್ ‌ಶಾಸಕ‌ ರಂಗನಾಥ್ ಹೇಳಿದ್ದಾರೆ.

About The Author