Sandalwood: ರಾಕೇಶ್ ಅಡಿಗ ಅವರು ಹ್ಯಾಂಡಸಮ್ ಆಗಿದ್ದು ಟ್ಯಾಲೆಂಟೆಡ್ ಆಗಿದ್ದಾರೆ. ಹಾಗಾಗಿ ಪ್ರಪೋಸಲ್ಸ್ ಬಂದಿರಬಹುದು ಅನ್ನೋ ಅಂದಾಜು ಹಲವರಿಗಿರುತ್ತದೆ. ಆ ಬಗ್ಗೆ ರಾಕೇಶ್ ಅವರೇ ಮಾತನಾಡಿದ್ದಾರೆ ನೋಡಿ.
ರಾಕೇಶ್ ಅಡಿಗ ಅವರು ಈ ಬಗ್ಗೆ ಮಾತನಾಡಿದ್ದು, ಸಿನಿ ಇಂಡಸ್ಟ್ರಿಯಲ್ಲಿ ನನಗೆ ಯಾರ ಜತೆಯೂ ಅಫೇರ್ ಇರಲಿಲ್ಲ. ಆದರೆ 3ರಿಂದ 4 ರಿಲೆಶನ್‌ಶಿಪ್ ಇತ್ತು. ಮ್ಯೂಚುವಲ್ ಆಗಿ ಲವ್ ಮಾಡಿ, ಅದೇ ರೀತಿ ಬ್ರೇಕಪ್ ಕೂಡ ಆಯ್ತು ಅಂತಾ ಹೇಳ್ತಾರೆ ರಾಕೇಶ್.
ಇನ್ನು ಮದುವೆ ಬಗ್ಗೆ ಮಾತನಾಡಿರುವ ರಾಕೇಶ್, ನನಗೆ ಇನ್ನೂ ಏನು ಕ್ಲಾರಿಟಿ ಬೇಕು ಅನ್ನೋದನ್ನು ತಾನು ನೋಡುತ್ತಿದ್ದೇನೆ. 1 ಸಲ ನನಗೆ ಆಧ್ಯಾತ್ಮದ ಕಡೆ ಹೋಗೋಣ ಎನ್ನಿಸುತ್ತದೆ. ಕೆಲವು ಸಾರಿ ಸಿನಿಮಾನೇ ಜೀವನ ಅನ್ನಿಸುತ್ತೆ. ಹೀಗೆ ಮನಸ್ಸು ಆಗಾಗ ಚೇಂಜ್ ಆದರೆ, ಬೇರೆ ರೀತಿ ಜೀವನ ಸಂಗಾತಿ ಸಿಕ್ಕರೆ, ಅವರಿಗೆ ಮುಂದೆ ಸಮಸ್ಯೆ ಆಗುತ್ತದೆ. ಹಾಗಾಗಿ ಮದುವೆ ಬಗ್ಗೆ ಇನ್ನೂ ವಿಚಾರ ಮಾಡಿಲ್ಲ ಅಂತಾರೆ ರಾಕೇಶ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.