Tuesday, September 23, 2025

Latest Posts

ರಾಕೇಶ್ ಸೋನು ಮಧ್ಯ ಏನಿದೆ? ದಿವ್ಯಾ ಸುರೇಶ್ ಏನಾಗ್ಬೇಕು? | Rakesh Adiga Podcast

- Advertisement -

Sandalwood: ನಟ ರಾಕೇಶ್ ಅಡಿಗ ಅವರು ಸ್ಯಾಂಡಲ್‌ವುಡ್‌ನಲ್ಲಿ ಕೆಲ ಸಿನಿಮಾಗಳನ್ನು ಮಾಡಿದ ಬಳಿಕ, ಬಿಗ್‌ಬಾಸ್‌ಗೂ ಬಂದಿದ್ದರು. ಈ ವೇಳೆ ಅವರ ಅನುಭವ ಹೇಗಿತ್ತು ಅನ್ನೋ ಬಗ್ಗೆ ಅವರೇ ಮಾತನಾಡಿದ್ದಾರೆ ನೋಡಿ..

ಬಿಗ್‌ಬಾಸ್ ನಲ್ಲಿ ರಾಕೇಶ್ ಮತ್ತು ಸೋನು ಶ್ರೀನಿವಾಸ್ ಗೌಡ ತುಂಬಾ ಸ್ನೇಹದಿಂದ ಇದ್ದರು. ಇದನ್ನು ನೋಡಿ, ಹಲವರು ಇವರಿಬ್ಬರ ಮಧ್ಯೆ ಏನೋ ಇದೆ ಅಂತಲೇ ಹೇಳುತ್ತಿದ್ದರು. ಆದರೆ ನಾನು ಸೋನುನನ್ನು ಸ್ನೇಹಿತೆಯಂತೆ ಪರಿಗಣಿಸಿದ್ದೇನೆ. ಆಕೆಯನ್ನು ಸಹೋದರಿಯಂತೆ ಕಾಣುತ್ತೇನೆ ಎಂದು ರಾಕೇಶ್ ಹೇಳಿದ್ದಾರೆ.

ಇನ್ನು ದಿವ್ಯಾ ಸುರೇಶ್ ಬಗ್ಗೆ ಮಾತನಾಡಿರುವ ರಾಕೇಶ್, ನಾವಿಬ್ಬರು ರಿಲೇಶನ್‌ಶಿಪ್‌ನಲ್ಲಿ ಇದ್ದಿದ್ದು ನಿಜ. ಆದರೆ ಇಬ್ಬರು ಸೆಟ್ ಆಗಲಿಲ್ಲ. ವರ್ಕ್ ಆಗಲಿಲ್ಲ. ಹಾಗಾಗಿ ಇಬ್ಬರೂ ಸಪರೇಟ್ ಆದ್ವಿ ಎಂದು ರಾಕೇಶ್ ಹೇಳಿದ್ದಾರೆ.

ಇನ್ನು ಬಿಗ್‌ಬಾಸ್ ರಿಯಾಲಿಟಿ ಶೋನಾ ಇಲ್ಲಾ ಸ್ಕ್ರಿಪ್ಟೆಡ್ ಶೋನಾ ಅನ್ನೋ ಬಗ್ಗೆ ಮಾತನಾಡಿರುವ ರಾಕೇಶ್, ಅದು ಸತ್ಯಕ್ಕೂ ಸ್ಕ್ರಿಪ್ಟೆಡ್ ಶೋ ಅಲ್ಲಾ. ಹಾಗೇನಾದರೂ ಇದ್ದಿದ್ದರೆ, ನಾನು ಆ ಶೋನಲ್ಲೇ ಹೇಳಿಬಿಡ್ತಿದ್ದೆ. ಆದರೆ ಅದು ಸ್ಕ್ರಿಪ್ಟೆಡ್ ಶೋ ಅಲ್ಲಾ ಎಂದಿದ್ದಾರೆ ರಾಕೇಶ್.

ಇನ್ನು ಬಿಗ್ಬಾಸ್ ಜರ್ನಿ ಬಗ್ಗೆ ಮಾತನಾಡಿರುವ ರಾಕೇಶ್, ಬಿಗ್‌ಬಾಸ್‌ಗೆ ಹೋಗಿ, ಅಲ್ಲಿ ಆಡಿಸುವ ಗೇಮ್ಸ್ ಆಡಿ, ಚೆನ್ನಾಗಿ ಓತ್ಲಾ ಹೋಡ್ಕೋಂಡು ಆರಾಮಾಗಿ ಇರಬಹುದು. ದುಡ್ಡು ಸಿಗತ್ತೆ. ಖರ್ಚೂ ನಡೆಯುತ್ತೆ. ಇದರಲ್ಲಿ ಯಾಕೆ ಟೆನ್ಶನ್ ಆಗ್ಬೇಕು ಅಂತಾ ಅಂದುಕ“ಂಡಿದ್ದರಂತೆ. ಆದ್ರೆ ಹೋದ ಮೇಲೆಯೇ ನಿಜಾಂಶ ತಿಳಿದಿದ್ದು. ಈ ಬಗ್ಗೆ ರಾಕೇಶ್ ಏನು ಹೇಳಿದ್ದಾರೆ ಅಂತಾ ಕೇಳಲು ವೀಡಿಯೋ ನೋಡಿ.

- Advertisement -

Latest Posts

Don't Miss