- Advertisement -
Beauty Tips: ನಿಮ್ಮ ಮುಖ ಎಷ್ಟೇ ಬೆಳ್ಳಗಿರಲಿ, ನಿಮ್ಮ ಕಣ್ಣಿನ ಸುತ್ತ ಕಪ್ಪು ಅಂದ್ರೆ ಡಾರ್ಕ್ ಸರ್ಕಲ್ ಇದ್ದರೆ, ನಿಮ್ಮ ಮುಖದ ಅಂದವೆಲ್ಲಾ ಹೋಗುತ್ತದೆ. ಹಾಗಾಗಿ ನೀವು ನಿಮ್ಮ ಕಣ್ಣಿನ ಸುತ್ತ ಕಪ್ಪನ್ನು ಹೋಗಲಾಡಿಸಬೇಕು. ಅದಕ್ಕೆ ಮನೆಯಲ್ಲೇ ಹೇಗೆ ಮದ್ದು ಮಾಡಬೇಕು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.
- ಆಲೂಗಡ್ಡೆಯನ್ನು ತುರಿದು, ಅದರ ರಸವನ್ನು ತೆಗೆದು, ಅದರಿಂದ ನೀವು ನಿಮ್ಮ ಕಣ್ಣು ಕೆಳಗಿನ ಡಾರ್ಕ್ ಸರ್ಕಲ್‌ಗೆ ಹಚ್ಚಿ ಮಸಾಜ್ ಮಾಡಿ. ಪ್ರತಿದಿನ ಹೀಗೆ ಮಾಡುವುದರಿಂದ ಡಾರ್ಕ್ ಸರ್ಕಲ್ ಹೋಗಿ, ನಿಮ್ಮ ಸ್ಕಿನ್ ಕ್ಲೀಯರ್ ಆಗುತ್ತದೆ. ಅಥವಾ ನೀವು ತುರಿದ ಆಲೂಗಡ್ಡೆ ರಸದಲ್ಲಿ ಎರಡು ಹತ್ತಿ ಪ್ಯಾಡ್ ಇರಿಸಿ, ಆ ಹತ್ತಿ ಪ್ಯಾಡನ್ನು ನಿಮ್ಮ ಕಣ್ಣು ಮೇಲೆ ಇರಿಸಿ. ಇದರಿಂದಲೂ ನಿಮ್ಮ ಕಣ್ಣು ಸುಂದರವಾಗುತ್ತದೆ.
- ಬಳಸಿದ ಗ್ರೀನ್ ಟೀ ಬ್ಯಾಗನ್ನು ಕಣ್ಣಿನ ಮೇಲಿರಿಸುವುದರಿಂದಲೂ ನಿಮ್ಮ ಕಣ್ಣಿನ ಸುತ್ತಲಿನ ಕಪ್ಪು ಮಾಯವಾಗುತ್ತದೆ.
- ಆ್ಯಲೋವೆರಾ ಜೆಲ್ ಮತ್ತು ವಿಟಾಮಿನ್ ಈ ಜೆಲ್ ಸೇರಿಸಿ, ನೀವು ಡಾರ್ಕ್ ಸರ್ಕಲ್ ಇರುವ ಜಾಗದಲ್ಲಿ ಹಚ್ಚಬೇಕು. ರಾತ್ರಿ ಹಚ್ಚಿ, ರಾತ್ರಿಯಿಡೀ ಬಿಡಬೇಕು. ಆಗ ಡಾರ್ಕ್ ಸರ್ಕಲ್ ಕಡಿಮೆಯಾಗುತ್ತದೆ.
- ಟೋಮೆಟೋ ಮತ್ತು ಕಡಲೆ ಹುಡಿಯನ್ನು ಮಿಕ್ಸ್ ಮಾಡಿ, ಡಾರ್ಕ್ ಸರ್ಕಲ್ ಬಳಿ ಹಚ್ಚಿ. ಅದು ಡ್ರೈ ಆದ ಬಳಿಕ, ಮುಖ ಕ್ಲೀನ್ ಮಾಡಿ. ಇದರಿಂದಲೂ ಕಪ್ಪು ಕಲೆ ಹೋಗುತ್ತದೆ.
- ಆದರೆ ನೆನಪಿರಲಿ ಈ ವಸ್ತುಗಳನ್ನು ಯಾವುದಾದರು ವಸ್ತುವನ್ನು ಬಳಸಿದ್ದಲ್ಲಿ ನಿಮಗೆ ಅಲರ್ಜಿ ಆಗುತ್ತದೆ ಎಂದಾದಲ್ಲಿ, ಅಂಥ ವಸ್ತು ಬಳಸದೇ ಇರುವುದು ಉತ್ತಮ.
- ಎಲ್ಲಕ್ಕಿಂತ ಮುಖ್ಯವಾಗಿ, ಕಣ್ತುಂಬ ನಿದ್ದೆ ಮಾಡಬೇಕು. ಯಾವ ವಿಷಯದ ಬಗ್ಗೆಯೂ ಹೆಚ್ಚು ಟೆನ್ಶನ್ ತೆಗೆದುಕ“ಳ್ಳಬಾರದು. ಆಹಾರ ಸೇವನೆ, ನೀರಿನ ಸೇವನೆ ಎಲ್ಲವೂ ಸರಿಯಾಗಿರಬೇಕು.
- Advertisement -