Spiritual: ಹಿಂದೂ ಧರ್ಮದಲ್ಲಿ ಪಿತೃಗಳಿಗೆ ಅಂದ್ರೆ, ನಮ್ಮ ತೀರಿಹೋಗಿರುವ ಹಿರಿಯರಿಗೆ ಅವರದ್ದೇ ಆದ ಗೌರವ ನೀಡಲಾಗುತ್ತದೆ. ಪ್ರತೀ ವರ್ಷ ವಾರ, ದಿನ, ತಿಥಿ ನೋಡಿ, ಶ್ರಾದ್ಧ ಕಾರ್ಯ ಮಾಡಿ, ಕಾಗೆಗೆ, ಹಸುವಿಗೆ ಮತ್ತು ಬ್ರಾಹ್ಮಣರಿಗೆ ಊಟ ಹಾಕಲಾಗುತ್ತದೆ. ಆದರೆ ನೀವು ಅವರಿಗೆ ನೀಡಬೇಕಾದ ಗೌರವ ಮರೆತರೆ, ಪಿತೃಗಳು ನಿಮ್ಮ ಮೇಲೆ ಮುನಿಸಿಕ“ಳ್ಳುತ್ತಾರೆ. ಹಾಗೆ ಕೋಪಗ“ಂಡಾಗ, ಯಾವ ಸಮಸ್ಯೆ ಕಾಣಿಸಿಕ“ಳ್ಳುತ್ತದೆ ತಿಳಿಯೋಣ ಬನ್ನಿ.
ನೆಮ್ಮದಿ ಹಾಳು: ಪೂರ್ವಜರ ಶ್ರಾದ್ಧವನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ದಲ್ಲಿ, ಮನೆಯಲ್ಲಿ ಸರಿಯಾಗಿ ನೆಮ್ಮದಿ ಇರುವುದಿಲ್ಲ. ನೀವು ಶ್ರಾದ್ಧ ಮಾಡಿದರೂ, ಭಕ್ತಿಯಿಂದ ಶ್ರಾದ್ಧ ಮಾಡದಿದ್ದಾಗಲೂ, ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಹಾಗಾಗಿ ತೀರಿಹೋದವರ ಶ್ರಾದ್ಧ ಕಾರ್ಯವನ್ನು ಭಕ್ತಿಯಿಂದ ಸಮಯಕ್ಕೆ ಸರಿಯಾಗಿ ಮಾಡಬೇಕು.
ಕೆಲವರು ತಮಗೆ ಸಮಯ ಸಿಕ್ಕಾಗ ಅಥವಾ ರಜಾ ದಿನಗಳಲ್ಲಿ, ರವಿವಾರ ಹೀಗೆ ಶ್ರಾದ್ಧ ಮಾಡುತ್ತಾರೆ. ಇದು ತಪ್ಪು, ಇದನ್ನು ತಿಥಿ ಪ್ರಕಾರವೇ ಮಾಡಬೇಕು.
ಆರ್ಥಿಕ ಸಮಸ್ಯೆ: ಯಾವ ಮನೆಯಲ್ಲಿ ಶ್ರಾದ್ಧ ಸರಿಯಾಗಿ ಮಾಡುವುದಿಲ್ಲವೋ, ಅಥವಾ ಸರಿಯಾದ ಸಮಯಕ್ಕೆ ಮಾಡುವುದಿಲ್ಲವೋ, ಅಂಥ ಮನೆಯಲ್ಲಿ ಸದಾ ಆರ್ಥಿಕ ಸಮಸ್ಯೆ ತಾಡವವಾಡುತ್ತದೆ.
ಆರೋಗ್ಯ ಸಮಸ್ಯೆ, ಅಪಘಾತ ಸಂಭವ: ಯಾವ ಮನೆಯಲ್ಲಿ ಸರಿಯಾಗಿ ಶ್ರಾದ್ಧ ಕಾರ್ಯ ಮಾಡುವುದಿಲ್ಲವೋ, ಅಂಥ ಮನೆಯಲ್ಲಿ ಜನರಿಗೆ ಆರೋಗ್ಯ ಸಮಸ್ಯೆ ಕಾಡುತ್ತದೆ. ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಇಂಥ ಸಮಸ್ಯೆ ಪದೇ ಪದೇ ಕಂಡುಬಂದಲ್ಲಿ, ನಿಮ್ಮಲ್ಲಿ ಪಿತೃ ದೋಷ ಇದೇ ಎಂದರ್ಥ.
ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುವುದಿಲ್ಲ: ನೀವು ಎಷ್ಟೇ ಪ್ರಯತ್ನಿಸಿದರೂ, ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತಿಲ್ಲ ಎಂದಾದಲ್ಲಿ, ನಿಮಗೆ ಪಿತೃದೋಷ ಇರಬಹುದು. ಹಾಗಾಗಿ ಸರಿಯಾಗಿ ಶ್ರಾದ್ಧ ಕಾರ್ಯ ಮಾಡಿ, ಪಿತೃಗಳಿಗೆ ಪೂಜೆ ಸಲ್ಲಿಸಿ.