Tuesday, September 23, 2025

Latest Posts

ಹಬ್ಬಗಳ ನೆಪದಲ್ಲಿ ಸರ್ಕಾರದ ದುಂದು ವೆಚ್ಚಕ್ಕೆ ಮೋದಿ ಬ್ರೇಕ್‌ !

- Advertisement -

ಎಲ್ಲಾ ರಾಜ್ಯ ಸರ್ಕಾರಗಳಲಲಿ ಹಬ್ಬಗಳ ನೆಪದಿಂದ ಆಗುತ್ತಿದ್ದ ದುಂದು ವೆಚ್ಚಕ್ಕೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಡಿವಾಣ ಹಾಕಿದೆ. ಹಬ್ಬಗಳಿಗೆ ಎಂದು ಸರ್ಕಾರದ ಹಣದಿಂದ ಉಡುಗೊರೆಗಳನ್ನು ಕೊಡುವಂತಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಎಲ್ಲಾ ಸಚಿವಾಲಯಗಳಿಗೆ ಸುತ್ತೋಲೆ ಹೊರಡಿಸಿದೆ. ದೀಪಾವಳಿ ಸೇರಿ ಯಾವುದೇ ಹಬ್ಬಕ್ಕೆ ಸಾರ್ವಜನಿಕರ ಹನ ಬಳಕೆಗೆ ನಿರ್ಬಂಧ ಹೇರಲಾಗಿದೆ. ಸೆ.19 ರಂದು ಕೇಂದ್ರ ಹಣಕಾಸು ಸಚಿವಾಲಯ ಆದೇಶ ಹೊರಡಿಸಿದೆ.

ಈ ಹಿಂದೆ ಕೂಡ ಕೇದ್ರ ಸರ್ಕಾರ ಇದೇ ರೀತಿ ನಿರ್ದೇಶನ ನೀಡಿತ್ತು, ಆದರೆ ಅದು ಸಮರ್ಪಕವಾಗಿ ಪಾಲನೆಯಾಗದ ಹಿನ್ನಲೆ ಮತ್ತೆ ಸುತ್ತೋಲೆ ಹೊರಡಿಸಲಾಗಿದೆ. ಈ ಬಾರಿ ಆದೇಶವನ್ನು ಕಡ್ಡಾಯವಾಗಿ ಪಾಲಿಸಲು ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಹಬ್ಬದ ಸಮಯದಲ್ಲಿ ಉಡುಗೊರೆ ನೆಪದಲ್ಲಿ ಆಗುವ ದುಂದುವೆಚ್ಚಕ್ಕೆ ಬ್ರೇಕ್‌ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ.

ಹಣಕಾಸು ಸಚಿವಾಲಯವು, ದೀಪಾವಳಿ ಅಥವಾ ಯಾವುದೇ ಇತರ ಹಬ್ಬದ ಸಮಯದಲ್ಲಿ ಉಡುಗೊರೆಗಳಿಗಾಗಿ ಸಾರ್ವಜನಿಕ ಹಣವನ್ನು ಖರ್ಚು ಮಾಡದಂತೆ ಎಲ್ಲಾ ಕೇಂದ್ರ ಸರ್ಕಾರಿ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಬಂಧಿತ ಸಂಸ್ಥೆಗಳಿಗೆ ನಿರ್ದೇಶನ ನೀಡಿ ಸುತ್ತೋಲೆ ಹೊರಡಿಸಿದೆ. ಸೆ. 19, 2025 ರಂದು ಘೋಷಿಸಲಾಗದ ಈ ಕ್ರಮವು ಹಣಕಾಸಿನ ಶಿಸ್ತನ್ನು ಜಾರಗೊಳಿಸಲು ಮತ್ತು ಅನಿವಾರ್ಯವಲ್ಲದ ಖರ್ಚುಗಳ ಮೇಲೆ ನಿರ್ಬಂದ ಹೇರಲು ಸರ್ಕಾರದಿಂದ ನಿರಂತರ ಪ್ರಯತ್ನಗಳು ನಡೆಯುತ್ತಿರುವ ಭಾಗವಾಗಿದೆ.

ಈ ಆದೇಶವನ್ನು ಕಾರ್ಯದರ್ಶಿ ಅನುಮೋದಿಸಿದ್ದಾರೆ ಮತ್ತ ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಪಿ.ಕೆ. ಸಿಂಗ್‌ ಸಹಿ ಮಾಡಿದ್ದಾರೆ. ಇದನ್ನು ಎಲ್ಲಾ ಕಾರ್ಯದರ್ಶಿಗಳು, ಸಚಿವಾಲಯಗಳು ಮತ್ತು ಇಲಾಖೆಗಳ ಹಣಕಾಸು ಸಲಹೆಗಾರರು ಹಾಗೂ ಸಾರ್ವಜನಿಕ ಉದ್ಯಮಗ: ಇಲಾಖೆ ಮತ್ತು ಹಣಕಾಸು ಸೇವೆಗಳ ಇಲಾಖೆಗೆ ರವಾನಿಸಲಾಗಿದೆ.

ವರದಿ : ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss